ಹೃದಯದ ಆರೋಗ್ಯ ಹೆಚ್ಚಿಸುತ್ತೆ ಮದುವೆ!



ಮದುವೆ ಆಗ್ತೀನಿ ಅಂದ್ರೆ ಸಾಕು ಎಲ್ರೂ.. ಅಂತೂ ಹಳ್ಳಕ್ಕೆ ಬೀಳ್ತಿದ್ದೀ ಅನ್ನು. ಇನ್ನು ನಿನ್ನ ಸ್ವಾತಂತ್ರ್ಯ ಮುಗೀತಪ್ಪಾ ಅಂತಾರೆ. ಅದೇ ಹುಡುಗಿಯನ್ನು ಪ್ರೀತ್ಸೋದಕ್ಕೆ ಶುರು ಮಾಡಿ ಹಾಟ್೯ ಸೇಲ್ ಮಾಡ್ಬಿಟ್ಯಾ ಅಂತಾರೆ! ಎಷ್ಟು ವ್ಯತ್ಯಾಸ ಅಲ್ವೇ?

ಇದೆಲ್ಲ ಒತ್ತಟ್ಟಿಗಿಲಿ೯, ಮದ್ವೆ ಆದ ತಕ್ಷಣ ಗಂಡಸ್ರು, ಹೆಂಗಸ್ರು ದಪ್ಪ ಆಗ್ತಾರೆ, ಸ್ವಲ್ಪ ದಷ್ಟಪುಷ್ಟವಾಗ್ತಾರೆ. ಅವರ ಆರೋಗ್ಯ ಹೆಚ್ಚುತ್ತೆ. ನಿಜ, ಭಾರತೀಯ ಪರಂಪರೆಯಲ್ಲಿ ಮದುವೆಗೆ ಮಹತ್ವ ಕೊಟ್ಟಿರುವುದು ಗೊತ್ತೇ ಇದೆ. ಇದನ್ನೊಂದು ದೈವೀ ಕಾಯ೯ ಎಂಬಂತೆ ನಾವು ಕಾಣುತ್ತೇವೆ. ಈ ಮದುವೆ ಬಗ್ಗೆ, ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ವಿದೇಶಿಯರು ಹಲವು ಕಾಲದಿಂದ ಒಂದಿಲ್ಲೊಂದು ರೀತಿಯಲ್ಲಿ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಇದೀಗ ಇನ್ನೂ ಒಂದು ಸಂಶೋಧನೆಯ ಫಲಿತಾಂಶ ಅಮೆರಿಕದಿಂದ ಪುಟಿದೆದ್ದು ಬಂದಿದೆ. ಅಮೆರಿಕದ ಸಂಶೋಧಕರು ಮದುವೆಯ ಎಲ್ಲ ಆಯಾಮಗಳಲ್ಲೂ ಒಂದು ಸೂಕ್ಷ್ಮನೋಟ ಬೀರಿದ್ದು ಅದರಿಂದ ಗಂಡು-ಹೆಣ್ಣಿನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಅನ್ನೋದನ್ನು ಅಧ್ಯಯನ ಮಾಡಿದ್ದಾರೆ.

ಗಂಡು-ಹೆಣ್ಣಿನ ಜೋಡಿ ಸರಿಯಾಗಿ ತಾಳೆಯಾಗುತ್ತೆ ಅಂತಾದ್ರೆ ಹೃದಯದ ಸಮಸ್ಯೆ ಬಹುಪಾಲು ಕಡಿಮೆಯಾಗುತ್ತದೆಯಂತೆ! ಏನಿಲ್ಲ ಅಂದ್ರೂ 15 ವಷ೯ ಹೆಚ್ಚು ಬದುಕೋ ಶಕ್ತಿ ಅವರಿಗೆ ಸಿಗುತ್ತೆ. ಸಣ್ಣ ಪುಟ್ಟ ಸಮಸ್ಯೆಗಳಂತೂ ಮಾಯವಾಗುತ್ತವೆ. ತಾಳೆಯಾಗುವ ಜೋಡಿ ಹೇಗಿರಬೇಕು ಎಂಬುದನ್ನೂ ಸಂಶೋಧಕರು ವಿವರಿಸುತ್ತಾರೆ- ಗಂಡನ ತೋಳುಗಳು ಹೆಂಡತಿಯ ಹೆಗಲನ್ನು ಸುಲಭವಾಗಿ ಬಳಸುವಂತಿರಬೇಕು. ಅಂದರೆ ಹೆಣ್ಣು ಗಂಡಿಗಿಂತ ಅಧ೯ ಅಡಿಯಾದರೂ ಗಿಡ್ಡ ಇರಲೇಬೇಕು. ಹೀಗಿದ್ದರೆ ಗಂಡು-ಹೆಣ್ಣು ಇಬ್ಬರ ಆರೋಗ್ಯವೂ ವೃದ್ಧಿಸುತ್ತದೆ. ಹೃದಯದ ಸಮಸ್ಯೆಯೂ ಕಡಿಮೆಯಾಗುತ್ತದೆ. ದಾಂಪತ್ಯ ದೀಘ೯ಕಾಲದ್ದಾದರೆ ಇದರ ಪ್ರಯೋಜನ ಹೆಚ್ಚು. ಅದೆಷ್ಟೇ ಜಗಳ, ಮುನಿಸು ಇದ್ದರೂ ಪ್ರೀತಿ ದೀಘ೯ಕಾಲದ್ದಾಗಿದ್ದರೆ ಆಯುಷ್ಯವೂ ದೀಘ೯ವಾಗಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವವರು ಹೆಂಗಸರು ಎನ್ನುತ್ತಿದ್ದಾರೆ ನ್ಯೂಯಾಕ್೯ನ ರೋಷೆಸ್ಟರ್ ಯೂನಿವಸಿ೯ಟಿಯ ಸಂಶೋಧಕರು. ಸಂಶೋಧಕರು ಈ ಫಲಿತಾಂಶವನ್ನು ಹೇಳಿದ್ದೇ ತಡ ವಿದೇಶೀ ದಂಪತಿಗಳು ದೀಘ೯ ದಾಂಪತ್ಯದತ್ತ ಒಲವು ತೋರಿಸ್ತಾ ಇದ್ದಾರಂತೆ.

ಅಲ್ಲಾ, ವಿದೇಶಿ ವಿಜ್ಞಾನಿಗಳು ಇಂತಹ ಒಂದೊಂದು ಸಂಶೋಧನೆ ನಡೆಸಿದಾಗಲೂ ನನಗೆ ಒಂದು ಅನುಮಾನ ಕಾಡುತ್ತದೆ- ಕಾಲಕ್ರಮೇಣ ಇವರು ಸಂಪೂಣ೯ ಭಾರತೀಯ ವೈವಾಹಿಕ ಪದ್ಧತಿಯನ್ನೇ ಅನುಸರಿಸುತ್ತಾರೆಯೋ ಅಂತ. ಈಗಾಗಲೇ ಅವರು ನಮ್ಮ ಜೀವನಶೈಲಿಯಿಂದ ಪ್ರಭಾವಿತರಾಗಿ ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಾವು ಮಾತ್ರ ನಮ್ಮಲ್ಲಿನ ಪದ್ಧತಿಯನ್ನು ಮೂಢನಂಬಿಕೆ ಎಂದು ಜರೆಯುತ್ತೇವೆ. ನಮ್ಮ ಹಿರಿಯರು ಮದುವೆ ಅಂದ್ರೆ ಏಳೇಳು ಜನ್ಮಗಳ ಸಂಬಂಧ ಅಂತ ಹೇಳಿದ್ರು. ಅದರ ಹಿಂದೆಯೂ ಇಂಥದ್ದೇ ಒಂದು ಬಲವಾದ ಕಾರಣ ಯಾಕಿರಬಾರದು?

Comments

  1. vishnu, nee anumaana vyakta maadiddi,naa nambikeli iddi... mundond dina avrella namma dharmakke batta.amele nammavu hosdaagi avranna himbaalsta asteya.. kaalachakra..
    shreepadarao.

    ReplyDelete
  2. shreepadanna- khare, kalachakra tirugta irtu, navu swalpa jagrathe madavu alda? nam mundina peeligeya janakke nam samskruthi kalisavu... ille andre apattu khandita

    ReplyDelete
  3. houdu....hindinavaru sampradaayagalannu sumne maadle. elladakku ondu artha irtu. adannu eeginavaru maretidda. eeginavarige adannu arthaisodu tande taayigala kelasa.........:)

    ReplyDelete
  4. ನಿಮ್ಮ ಈ "ಮದುವೆ" ಯ ಲೇಖನ ತುಂಬಾ ಚೆನ್ನಾಗಿದೆ ,ನಮ್ಮ ಧರ್ಮದ ಆಚಾರ, ವಿಚಾರಗಳನ್ನೂ ನೀವು ಇಲ್ಲಿ ಒಳ್ಳೆ ಮಾಡಿ ಬಿಂಬಿಸಿದಕ್ಕೆ ಧನ್ಯವಾದಗಳು

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು