ಬುದ್ಧಿವಂತಿಕೆ ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಇರುತ್ತೆ!


ಮನುಷ್ಯ ತನ್ನನ್ನು ತಾನು ತೀರಾ ಬುದ್ಧಿವಂತ ಅಂದುಕೊಂಡುಬಿಟ್ಟಿದ್ದಾನೆ. ಆದರೆ ಪ್ರಾಣಿಗಳಿಗೂ ಬುದ್ಧಿ ಇದೆ, ಅವುಗಳಿಗೆ ನಮ್ಮ ರೀತಿಯಲ್ಲಿ ಸಂವಹನ ನಡೆಸುವುದಕ್ಕೆ ಗೊತ್ತಿಲ್ಲದೇ ಇರಬಹುದು. ಆದರೆ ಅವುಗಳದ್ದೇ ಆದ ರೀತಿಯ ಸಂವಹನ ಇದೆ ಎಂಬುದನ್ನು ನಾವು ಬಹಳಷ್ಟು ಬಾರಿ ನಿಲ೯ಕ್ಷಿಸುತ್ತೇವೆ.

ನಮ್ಮ ಕೈಗೆಟುಕದ ವಸ್ತುಗಳನ್ನು ಪಡೆಯುವುದಕ್ಕೆ ನಾವು ಏಣಿ ಬಳಸುತ್ತೇವೆ. ಸಾಕೆಂದಾದಲ್ಲಿ ಸ್ಟೂಲನ್ನಾದರೂ ಬಳಸುತ್ತೇವೆ. ಹೀಗೆ ಅಗತ್ಯ ಬಿದ್ದಲ್ಲೆಲ್ಲ ಉಪಕರಣಗಳನ್ನು ಬಳಸಿಕೊಳ್ಳುವ ಸಾಮಥ್ಯ೯ ನಮ್ಮಲ್ಲಿದೆ ಅಂತ ಮಾನವರಾದ ನಾವು ಅಹಂನಿಂದ ಬೀಗುತ್ತೇವೆ. ಮಾನವನ ಈ ಅಹಂಗೆ ಪೆಟ್ಟುಕೊಡುವಂಥ ಸಂಶೋಧನೆಯೊಂದು ನಡೆದಿದೆ. ಅದು- ಅಗತ್ಯ ಬಿದ್ದಾಗ ಉಪಕರಣಗಳನ್ನು. ಸಲಕರಣೆಗಳನ್ನು ಬಳಸಿಕೊಳ್ಳುವುದರಲ್ಲಿ ಆನೆಗಳೂ ಏನೂ ಕಮ್ಮಿಯಿಲ್ಲ!
ಹಾಗಿದ್ದರೆ ಈ ಸಂಶೋಧನೆ ಏನು ಎಂಬ ಕುತೂಹಲ ಇದೆಯಲ್ಲವೇ? ಮುಂದೆ ಓದಿ-

ಅದು ಖಂಡೂಲಾ. ಏಳು ವಷ೯ ಪ್ರಾಯದ ಏಷ್ಯನ್ ಆನೆ. ನ್ಯೂಯಾಕ್೯ ಸಿಟಿ ಯೂನಿವಸಿ೯ಟಿಯ ಹಂಟರ್ ಕಾಲೇಜಿನ ಸಂಶೋಧಕರು ಆನೆಯ ನಡವಳಿಕೆಯ ಬಗ್ಗೆ ಸಂಶೋಧನೆ ಮಾಡಬೇಕು ಎಂದುಕೊಂಡಾಗ ಅವರ ಪರೀಕ್ಷೆಗೆ ಒಳಪಟ್ಟದ್ದು ಇದೇ ಖಂಡೂಲಾ. ಈ ಸಂಶೋಧಕರು ಆನೆ ಮತ್ತು ಡಾಲ್ಫಿನ್ ಗಳ ಬುದ್ಧಿಮತ್ತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ವಾಷಿಮಂಗ್ಟನ್ ಡಿಸಿಯ ಪ್ರಾಣಿಸಂಗ್ರಹಾಲಯದಲ್ಲಿದ್ದ ಗಂಡಾನೆ ಖಂಡೂಲಾದ ಬುದ್ಧಿಮತ್ತೆ ಪರೀಕ್ಷಿಸಬೇಕು ಅನ್ನಿಸಿತು ಸಂಶೋಧಕರಿಗೆ. ಅದಕ್ಕಾಗಿ ಮರದ ಕೊಂಬೆಯೊಂದಕ್ಕೆ ಖಂಡೂಲಾ ಇಷ್ಟಪಡುವಂಥ ಹಣ್ಣುಗಳನ್ನು ಹಗ್ಗದಲ್ಲಿ ನೇತಾಡಿಸಿದರು. ಆದರೆ ಈ ಹಣ್ಣುಗಳು ಖಂಡೂಲಾಕ್ಕೆ ಸುಲಭದಲ್ಲಿ ಎಟುಕುವಂತಿರಲಿಲ್ಲ. ಒಂದೆಡೆ ಸಂಶೋಧಕರ ಕುತೂಹಲ. ಮತ್ತೊಂದೆಡಿ ಆ ಹಣ್ಣುಗಳನ್ನು ಪಡೆದುಕೊಳ್ಳಲು ಖಂಡೂಲಾಕ್ಕೆ ಛಲ!

ಖಂಡೂಲಾ ಸೊಂಡಿಲು ಎತ್ತಿ ಮರದ ಕೊಂಬೆಯನ್ನು ಎಳೆಯುವುದಕ್ಕೆ ಪ್ರಯತ್ನಿಸಿತು. ಸಿಗಲಿಲ್ಲ. ಮತ್ತೆ ಪ್ರಯತ್ನಿಸಿತು. ಆದರೂ ಪ್ರಯೋಜನವಿಲ್ಲ. ಹಣ್ಣುಗಳನ್ನು ಬಿಡುವುದಕ್ಕೂ ಮನಸ್ಸಿಲ್ಲ. ಅರೆಕ್ಷಣವೂ ಚಿಂತಿಸದ ಆನೆ ಅತ್ತಿಂದಿತ್ತ ಹುಡುಕಾಡಿ ಅಲ್ಲೇ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಪಾತ್ರೆಯೊಂದನ್ನು ಉರುಳಿಸಿಕೊಂಡು ಬಂತು. ನೇರವಾಗಿ ಹಣ್ಣುಗಳನ್ನು ಕಟ್ಟಿದ್ದ ಟೊಂಗೆಯ ಕೆಳಗೇ ಅದನ್ನು ಉರುಳಿಸಿಬಿಟ್ಟಿತು. ನೋಡ ನೋಡುತ್ತಿದ್ದಂತೆ ಆ ಪಾತ್ರೆಯ ಮೇಲೆ ಎರಡೂ ಮುಂಗಾಲುಗಳನ್ನು ಊರಿ ಅದರ ಮೇಲೆ ನಿಂತ ಖಂಡೂಲಾ ಮತ್ತೆ ತನ್ನ ಸೊಂಡಿಲಿನಿಂದ ಹಣ್ಣುಗಳನ್ನು ಕೀಳುವ ಪ್ರಯತ್ನ ಮಾಡಿತು. ಈ ಬಾರಿ ಯಶಸ್ಸು ಅದರ ಪಾಲಿಗಾಗಿತ್ತು!

ಹಣ್ಣುಗಳ ಕಥೆ ಹೀಗಾಯಿತು. ಇನ್ನೂ ಒಂದು ಅಚ್ಚರಿಯ ವಿಚಾರವನ್ನು ಗಮನಿಸಿ- ಆನೆಗಳ ಬಾಲ ಚಿಕ್ಕದು. ಸೊಂಡಿಲು ಉದ್ದವಾಗಿದ್ದರೂ ಅದರ ಭಾರೀ ಗಾತ್ರಕ್ಕೆ ಹೋಲಿಸಿದರೆ ಚಿಕ್ಕದೆಂದೇ ಹೇಳಬೇಕು! ಇಲ್ಲಿ ಒಂದು ಪ್ರಶ್ನೆ- ಆನೆಗಳಿಗೆ ಬೆನ್ನು ತುರಿಸೋದಿಲ್ವಾ? ತುರಿಸಿದ್ರೆ ಏನು ಮಾಡುತ್ತವೆ? ಏನೂ ಇಲ್ಲ, ಒಂದು ಉದ್ದನೆಯ ಕೋಲನ್ನು ಸೊಂಡಿಲಲ್ಲಿ ಹಿಡಿದುಕೊಂಡು ಬೆನ್ನು ತುರಿಸಿಕೊಳ್ಳುತ್ತವೆ. ತಮಾಷೆಯಲ್ಲ, ಇದು ನಿಜ. ಆನೆಗಳು ಕೋಲನ್ನು ಬೆನ್ನು ತುರಿಸೋದಕ್ಕೆ ಮಾತ್ರ ಬಳಸುತ್ತವೆ.

ಹೇಗೆ ಗೊತ್ತಾಯ್ತು ಅಂತೀರಾ? ಮರದ ಮೇಲಿಟ್ಟಿದ್ದ ಹಣ್ಣುಗಳನ್ನು ಕಿತ್ತುಕೋ ಅಂತ ಸಂಶೋಧಕರು ಖಂಡೂಲಾಕ್ಕೆ ಉದ್ದನೆಯ ಕೋಲನ್ನು ಕೊಟ್ಟರಂತೆ. ಅದನ್ನು ತೆಗೆದುಕೊಂಡ ಖಂಡೂಲಾ ಸುಮ್ಮನೇ ಬೆನ್ನು ತುರಿಸಿಕೊಂಡು ಬಳಿಕ ಅದನ್ನು ಅತ್ತ ಎಸೆದು ಪ್ಲಾಸ್ಟಿಕ್ ಪಾತ್ರೆಯನ್ನು ಹುಡುಕಿಕೊಂಡು ಹೋಯಿತಂತೆ ಖಂಡೂಲಾ! ಆಗ ಸಂಶೋಧಕರು ಇದನ್ನು ಸ್ಪಷ್ಟಪಡಿಸಿಕೊಂಡರು- ಆನೆಗಳು ಕೋಲು ಬಳಸುವುದು ಬೆನ್ನು ತುರಿಸುವುದಕ್ಕೆ ಮಾತ್ರ (ಈ ವಿಚಾರ ಈ ಮೊದಲೇ ಕಂಡುಕೊಂಡಿದ್ದರು ಸಂಶೋಧಕರು).

ತನಗೇನು ಬೇಕು? ಯಾವ ಸಂದಭ೯ಕ್ಕೆ ಯಾವ ರೀತಿಯ ಉಪಕರಣಗಳು ಸೂಕ್ತವಾಗುತ್ತವೆ? ಆ ಉಪಕರಣಗಳು, ಸಲಕರಣೆಗಳನ್ನು ಎಲ್ಲಿಂದ ಪಡೆದುಕೊಳ್ಳಬೇಕು? ಎಂಬೆಲ್ಲ ವಿಚಾರಗಳನ್ನು ಚಿಂತಿಸುವಷ್ಟು ಆನೆಯ ಮಿದುಳು ಸಮಥ೯ವಾಗಿದೆ.

Comments

  1. tumba channagiddu. ee ritiya buddhivantike sumaaragi ella pranigalallu irtu. aneka psychologist kooda ee riti research maadidda. avru hechchagi madiddu chimpanji mele. i think idakke insightful learning anta helta.

    ReplyDelete
  2. nija shruthi. idu insightful learning. ella pranigalallu ee buddhivantike irtu. manava matra adra artha madkandu opkollodakke ready ille

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು