ಸೋತು ಹೋಗುತ್ತೆ ತಾಜ್ ಮಹಲ್!


ಸುಂದರವಾದ ವಿನ್ಯಾಸವುಳ್ಳ ಕಟ್ಟಡಗಳಲ್ಲಿ ತಾಜ್ ಮಹಲ್ ಕೂಡಾ ಒಂದು. ಆದ್ರೆ ಇದರ ಈ ಪಟ್ಟ ಸದ್ಯದಲ್ಲೇ ಹೊರಟು ಹೋಗುತ್ತೆ. ಯಾಕೆ ಅಂತೀರಾ? ಅದಕ್ಕೊಂದು ಪ್ರತಿಸ್ಪಧಿ೯ ಬರ್ತಾ ಇದೆ.

      ಹೌದು, ಇದು ತಾಜ್ ಮಹಲ್ ಗಿಂತ ಸುಂದರವಾದ ಕಟ್ಟಡ ಮಾತ್ರವಲ್ಲ, ವಿಶ್ವದಲ್ಲೇ ಅತ್ಯಂತ ಸುಂದರ ಕಟ್ಟಡ ಎಂದು ಹೆಸರು ಗಳಿಸುವುದು ಖಚಿತ. ತಂತ್ರಜ್ಞಾನ ಮುಂದುವರಿದಂತೆ ಅದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದೆ. ವಾಸ್ತುಶಾಸ್ತ್ರದಲ್ಲಿಯೂ ತಂತ್ರಜ್ಞಾನದ ಬಳಕೆ ಅಧಿಕವಾಗಿದೆ. ಇದೇ ತಂತ್ರಜ್ಞಾನ ಈಗ ಒಂದು ಸುಂದರ ಕಟ್ಟಡದ ವಿನ್ಯಾಸಕ್ಕೆ ಸಹಕಾರಿಯಾಗಿದೆ.

ಕೋಲ್ಕೊತಾದಲ್ಲಿ ನಿಮಿ೯ಸಲು ಉದ್ದೇಶಿಸಿರುವ ಕಟ್ಟಡ
      ಇದು ಒಂದು ಥರಾ ಬಾಹ್ಯಾಕಾಶ ನಿಲ್ದಾಣದಂತೆ ಕಾಣಿಸುವಂಥ ಕಟ್ಟಡ. ಕೋಲ್ಕತಾದಲ್ಲಿ ಇದನ್ನು ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಈ ವರ್ಷಾಂತ್ಯದಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವಂಥ ವಿಶ್ವ ಶಿಲ್ಪಕಲಾ ಮೇಳದಲ್ಲಿ ಈ ಕಟ್ಟದ ವಿನ್ಯಾಸವೂ ಪ್ರದಶ೯ನಗೊಳ್ಳಲಿದೆ ಮತ್ತು ಸ್ಪಧೆ೯ಯಲ್ಲಿಯೂ ಭಾಗವಹಿಸಲಿದೆ. ಹಿಂದೂ ಸಾಂಪ್ರದಾಯಿಕ ಜೀವನದ ಹಿನ್ನೆಲೆಯನ್ನು ಇಟ್ಟುಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದ್ದು, ಸುಮಾರು 80 ಮನೆಗಳು ಇದರಲ್ಲಿವೆ. ಕೂಡುಕುಟುಂಬಕ್ಕೆ ಅನುಕೂಲವಾಗುವಂತೆ ಈ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ.

      ಈ ಕಟ್ಟಡದೊಳಗೇ ಒಂದು ಸುಂದರ ಕೈದೋಟವಿದೆ, ಆರ್ಟಿಫಿಶಿಯಲ್ ಬೀಚ್ ಇದೆ. ಬೋರ್ ಎನಿಸಿದಾಗ ಆಟವಾಡುವುದಕ್ಕೆ ಆಟದ ಮೈದಾನ, ಗೆಳೆಯರೊಂದಿಗೆ ಹರಟುವುದಕ್ಕೊಂದು ಜಾಗ... ಹೀಗೆ ಈ ಕಟ್ಟದಲ್ಲಿ ಏನಿದೆ ಎಂದು ಪಟ್ಟಿ ಮಾಡುವುದಕ್ಕೆ ಹೋದರೆ ಮುಗಿಯಲಿಕ್ಕೇ ಇಲ್ಲವೇನೋ?

      ಈ ಕಟ್ಟಡದ ವಿನ್ಯಾಸದ ಜೊತೆಗೆ ಇನ್ನೂ ಹಲವು ಕಟ್ಟಡಗಳ ವಿನ್ಯಾಸಗಳು ಸ್ಪಧೆ೯ಯಲ್ಲಿ ಪಾಲ್ಗೊಳ್ಳುತ್ತಿವೆ. ಸುಮಾರು 59 ದೇಶಗಳಿಂದ 700ಕ್ಕೂ ಅಧಿಕ ವಿನ್ಯಾಸಗಳು ಸ್ಪಧೆ೯ಯಲ್ಲಿ ಪಾಲ್ಗೊಳ್ಳುತ್ತಿವೆ. ಅವುಗಳಲ್ಲಿ ಕೆಲವದರ ಚಿತ್ರಗಳು...


ಟರ್ಕಿಯಲ್ಲಿ ನಿಮಿ೯ಸಲು ಉದ್ದೇಶಿಸಲಾಗಿರುವ ಚಾಕೊಲೇಟ್ ರಿಬ್ಬನ್ ಕಟ್ಟಡದ ರಾತ್ರಿ ನೋಟ

ಟರ್ಕಿಯಲ್ಲಿ ನಿಮಿ೯ಸಲು ಉದ್ದೇಶಿಸಲಾಗಿರುವ ಚಾಕೊಲೇಟ್ ರಿಬ್ಬನ್ ಕಟ್ಟಡದ ಹಗಲಿನ ನೋಟ

ತೈವಾನಿನ ತೈಪೆ ನ್ಯಾಂಗಾಂಗ್ ಆಫೀಸ್ ಟವರ್... ನೋಡಲು ಕಳ್ಳಿ ಸಸ್ಯದಂತೆ ಕಾಣುತ್ತದೆ

ಆಟದ ಮೈದಾನ ಹೀಗಿದ್ದರೆ ಹೇಗೆ?

ಮರುಭೂಮಿಯಲ್ಲಿ ಇಂಥದ್ದೊಂದು ಕಟ್ಟಡ ಇದ್ದರೆ?
 
ಇಂಥ ಕಟ್ಟಡ ನೋಡೋದಕ್ಕೇ ಖುಷಿ ಕೊಡುತ್ತೆ

ಕಲ್ಲುಗಳಿಂದಲೇ ಹೀಗೊಂದು ಐಷಾರಾಮಿ ಅಪಾಟ್೯ ಮೆಂಟ್ ಕಟ್ಟಿದರೆ....
ನಿಸಗ೯ದತ್ತವಾದ ಗುಹೆಯಂತೆ ಕಾಣುವ ಐಷಾರಾಮಿ ಗುಹೆ!


Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು