Posts

Showing posts from 2011

ನಿರ್ವಾತದಲ್ಲಿ ಬೆಳಕಿನ ಸೃಷ್ಟಿ!

Image
ಕಾಂತವಲಯದ ದಿಕ್ಕನ್ನು ಪ್ರತಿ ಸೆಕೆಂಡಿಗೆ ಹಲವು ಬಿಲಿಯನ್ ಬಾರಿ ಬದಲಾಯಿಸುವ ಮೂಲಕ ವಿಜ್ಞಾನಿಗಳು ಈ ವಿಶೇಷ ಫಲಕವನ್ನು ಸೃಷ್ಟಿಸಿದ್ದಾರೆ. ಆದರೂ ಸಹ ಈ ಫಲಕವು ಬೆಳಕಿನ ವೇಗದ ಶೆಕಡಾ 25ರಷ್ಟು ವೇಗದಲ್ಲಷ್ಟೇ ಚಲಿಸುವುದಕ್ಕೆ ಸಾಧ್ಯವಾಯಿತು. ಆದಾಗ್ಯೂ ಇಷ್ಟು ವೇಗದಲ್ಲಿ ಫಲಕ ಚಲಿಸುತ್ತಿದ್ದ ಕಾರಣದಿಂದಾಗಿ ನಿರ್ವಾತದಲ್ಲಿ ಸೃಷ್ಟಿಯಾಗುತ್ತಿದ್ದ ಬೆಳಕಿನ ಕಣಗಳನ್ನು ಅರ್ಥಾತ್ ಜೊತೆ ಜೊತೆಯಾಗಿ (ಅವಳಿಗಳು) ಸೃಷ್ಟಿಯಾಗುತ್ತಿದ್ದ ಫೋಟಾನ್ಗಳನ್ನು ಗುರುತಿಸಿ ಅವುಗಳ ಗುಣಲಕ್ಷಣಗಳನ್ನು ಅಳೆಯುವುದಕ್ಕೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ನಿರ್ವಾತ ಎಂದರೆ ಸಂಪೂರ್ಣ ಖಾಲಿ ಎಂದರ್ಥವಲ್ಲ. ಅಲ್ಲಿ ಮಿಂಚಿ ಮರೆಯಾಗುಂಥ ಫೋಟಾನ್ಗಳಿರುತ್ತವೆ. ಅಂದರೆ ವರ್ಚುವಲ್ ಅಥವಾ ಭ್ರಾಮಕ ಫೋಟಾನ್ಗಳಿರುತ್ತವೆ. ಈ ರೀತಿ ನಿರ್ವಾತದಲ್ಲಿ ಸೃಷ್ಟಿಯಾಗುವಂಥ ವರ್ಚುವಲ್ ಫೋಟಾನ್ಗಳು ಅಥವಾ ಭ್ರಾಮಕ ಫೋಟಾನ್ಗಳನ್ನು ಬಹುತೇಕ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂಥ ಫಲಕದಿಂದ ಪ್ರತಿಫಲಿಸುವಂತೆ ಮಾಡಿದರೆ ನೈಜ ಫೋಟಾನ್ಗಳ ಅರ್ಥಾತ್ ಬೆಳಕಿನ ಸೃಷ್ಟಿಯಾಗುತ್ತದೆ.

ಬುವಿಯ ಸುಡುತ್ತವೆಯೇ ಸೌರಜ್ವಾಲೆಗಳು?

Image
ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?... ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಅವಕ್ಕೆ ಸ್ಪಷ್ಟವಾದ ಉತ್ತರಗಳೂ ಇಲ್ಲ. ಇನ್ನು ಕೆಲವೇ ವಾರಗಳು. 2012ನೇ ಇಸವಿ ಕಾಲಿಡುತ್ತಿದೆ. `2012' ಎಂಬ ಧ್ವನಿ ಕೆಳಿದ ತಕ್ಷಣ ಬಹಳಷ್ಟು ಜನ ಜೀವನದ ಬಗೆಗಿನ ಎಲ್ಲ ಆಸೆಗಳನ್ನೂ, ಭರವಸೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಭೂಮಿಯ ಕಥೆಯೇ ಮುಗಿದು ಹೋಯಿತು; ಪ್ರಳಯ ಆಗುತ್ತೆ; ಸೂರ್ಯ ಉಗುಳಿದ ಸೌರಜ್ವಾಲೆಗಳು ಭೂಮಿಯನ್ನು ಸುಟ್ಟು ಹಾಕುತ್ತವೆ... ಎಂಬೆಲ್ಲ ಸುದ್ದಿಗಳು ಮೇಲಿಂದ ಮೇಲೆ ಪ್ರಸಾರವಾಗಿ ಜನರಲ್ಲಿನ ಭೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಹಲವು ಜನರಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಭೀತಿಯಿದೆ ನಿಜ. ಆದರೆ ಅವರೆಲ್ಲ ಇಂಥದ್ದೇನೂ ಆಗುವುದಿಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?... ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರ

ಮಂಗಳಪ್ರಯಾಣಕ್ಕೆ ಸಿದ್ಧತೆ...

Image
ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.  ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.

ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ...!

Image
ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು' ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.   ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.      ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ

ಮೃತ್ಯು ವೀಣೆಯಲ್ಲಿ ಮಿಡಿದ ಬಾಳ ಶೃತಿ...

Image
ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ ಹೋರಾಡಿದ ರೀತಿ ಅಭಿಮಾನದ ಹೊಳಹನ್ನು ಮೂಡಿಸುತ್ತದೆ.  ಆ ಒಂದು ಕ್ಷಣದಲ್ಲಿ ಉಸಿರುಗಟ್ಟಿದಂಥ ಅನುಭವವಾಗಿತ್ತು. ಕಷ್ಟಗಳು, ಸಮಸ್ಯೆಗಳು ಎಂದರೆ ಧೃತಿಗೆಡದೇ ಇದ್ದಂಥ ಜೀವ ಅಂದು ಥರಗುಟ್ಟಿತ್ತು. ಜೊತೆಗೇ ಅಚ್ಚರಿಯ ಆಘಾತ. ಮನೋಸ್ಥೈರ್ಯವನ್ನೇ ಉಸಿರಾಗಿಸಿಕೊಂಡಿರುವಂಥ ದಿಟ್ಟೆದೆಯ ವ್ಯಕ್ತಿತ್ವವನ್ನು ಕಂಡಾಗ ಅಭಿಮಾನದಿಂದ ಕಣ್ಣುಗಳು ಹನಿಗೂಡಿದ್ದರ ಅರಿವೂ ಆಗಿರಲಿಲ್ಲ. ಮಾತಾಡಲೋ, ಬೇಡವೋ, ಪ್ರಶ್ನೆಗಳನ್ನು ಕೇಳಿ ಜೀವನದ ಕಹಿಯನ್ನು ಕೆದಕಿ ಗಾಯದ ಮೇಲೆ ಬರೆ ಎಳೆಯುವಂಥ ದುಸ್ಸಾಹಸಕ್ಕೆ ಮುಂದಾಗಲೋ ಎಂದೆಲ್ಲ ಚಿಂತಿಸಿ, ತಲೆಕಡಿಸಿಕೊಂಡು ಕಡೆಗೂ ಮಾತು ಶುರುವಿಟ್ಟುಕೊಂಡರೆ ಜೀವನವನ್ನು ಎದುರಿಸುವಂಥ ಧೈರ್ಯ ಹೀಗಿರಬೇಕು ಎಂಬ ಭಾವನೆ ಮೂಡಿಸುವಂಥ ಮಾತುಗಳಿಗೆ ಮನಸ್ಸು ಶರಣಾಗಿತ್ತು. ಅಂಥದ್ದೊಂದು ಶರಣಾಗತಿಗೆ ನನ್ನ ಮನಸ್ಸು ಒಳಗಾದದ್ದು ಜಗತ್ತಿನಲ್ಲಿಡೀ ಪ್ರಖ್ಯಾತಿ ಪಡೆದಂಥ ವ್ಯಕ್ತಿಯೊಂದಿಗೆ ಮಾತನಾಡಿದಾಗ ಅಲ್ಲ. ಬಹುತೇಕ ಜನರು ಜಗತ್ತು ಎಂದರೇನೆಂಬುದನ್ನು, ಜೀವನದ ಸವಾಲುಗಳು ಹೇಗಿರುತ್ತವೆ ಎಂಬುದನ್ನು ಅರಿಯುವುದಕ್ಕೆ ಶುರು ಮಾಡುವಂಥ ಪ್ರಾಯದಲ್ಲಿ ಮೃತ್ಯುವಿನೊಂದಿಗೇ ಸೆಣಸಾಡಿ, ಮೃತ್ಯುಶಕ್ತಿಗೇ

ಎತ್ತ ಕಡೆ ಸಾಗುತ್ತಿದ್ದೇವೆ ನಾವು?

Image
ಪಾವನೆ ಎನಿಸಿಕೊಂಡಿದ್ದ ಗಂಗೆ ಕಲಿಷಿತಗೊಂಡಿದ್ದಾಳೆ. ಯಮುನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಗೋದಾವರಿಯ `ವರಿ' ನಿಜಕ್ಕೂ ಆತಂಕಕಾರಿ. ಸರಸ್ವತಿ ಸ್ವರ ಉಡುಗುತ್ತಿದೆ. ನರ್ಮದೆಯ ನೆಮ್ಮದಿಯೇ ಹಾಳಾಗಿದೆ. ಸಿಂಧು ಬತ್ತುತ್ತಿದ್ದಾಳೆ. ಕಾವೇರಿ ಅದೆಷ್ಟು ಕಾವೇರಿದ್ದಾಳೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಈ ಎಲ್ಲ ನದಿಗಳು ತಮ್ಮ ಹರಿವನ್ನು ನಿಲ್ಲಿಸಿದರೆ ಅವಿಭಜಿತ ಭಾರತ ಬರಡಾಗುತ್ತದೆ! ಭಾರತ ಪಾಕಿಸ್ತಾನದ ಸಂಬಂಧವನ್ನು ನೆನೆಸಿಕೊಂಡಾಗಲೆಲ್ಲ ಆಕೆ ನೆನಪಾಗುತ್ತಾಳೆ. ಭಾರತದಲ್ಲಿಯೇ ಹುಟ್ಟಿ, ಭಾರತದಲ್ಲಿಯೇ ಬೆಳೆದು, ತನ್ನ ಜನ್ಮಭೂಮಿಗೂ ಒಂದಷ್ಟು ಕೊಡುಗೆಯನ್ನು ನೀಡಿ ಈಕೆ ಪಾಕಿಸ್ತಾನ ಸೇರುತ್ತಾಳೆ. ಅಲ್ಲಿನ ನೆಲಕ್ಕೊಂದಷ್ಟು ಕೊಡುಗೆಯನ್ನು ನಿಡುತ್ತಾಳೆ. ತನ್ನ ಬೆಳವಣಿಗೆಯ ಜೊತೆ ಜೊತೆಗೆ, ನಾಡಿಗೇ ಒಳಿತನ್ನು ಬಯಸುತ್ತಾಳೆ. ನಾಡನ್ನೂ ಬೆಳೆಸುತ್ತಾಳೆ. ಭಾರತದ ಮುಕುಟಮಣಿಗೆ ಸಿಂಗಾರವಾಗಿದ್ದಂಥ ಈಕೆ ಇಂದು ಸೊರಗಿದ್ದಾಳೆ. ಕ್ಷಯರೋಗಿಯಂತೆ ಕ್ಷೀಣಿಸುತ್ತಿದ್ದಾಳೆ. ಸಂಪೂರ್ಣ ಕ್ಷಯಿಸಿ, ಸಾವನ್ನಪ್ಪುವುದು ನಿಶ್ಚಿತವೋ ಎಂಬಂತೆ ಕುಗ್ಗಿ ಹೋಗಿದ್ದಾಳೆ. ಈಕೆ ಸಿಂಧು. ಭಾರತ-ಪಾಕಿಸ್ತಾನದ ಉತ್ತರದ ಭಾಗಗಳ ಜೀವಿಗಳಿಗೆ ಜೀವಜಲವನ್ನು ಕೊಟ್ಟು ದಾಹವನ್ನು ತೀರಿಸುವ ಈಕೆ ಇಂದು ತನ್ನ ದಾಹವನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾಳೆ. ಈಕೆಯ ಒಡಲಿಂದ ಅಮೃತ ಸಮಾನವಾದ ಜಲವನ್ನು ಹೀರುತ್ತಿರುವಂಥ ಮಾನವ ಆಕೆಗೆ ವಿಷವಿಕ್ಕುತ್ತ

ಶುಕ್ರನಲ್ಲಿ ಓಜೋನ್; ಮಂಗಳನಲ್ಲಿ ನೀರಾವಿ

Image
ಒಂದೆಡೆಯಿಂದ ಮಂಗಳಗ್ರಹ ಮತ್ತೆ ಸುದ್ದಿ ಮಾಡಿದರೆ, ತಾನೇನೂ ಕಮ್ಮಿ ಇಲ್ಲ ಎಂಬಂತೆ ಶುಕ್ರನೂ ಸದ್ದು ಮಾಡುತ್ತಿದ್ದಾನೆ. ಈಗಾಗಲೇ ನೀರು ಪತ್ತೆಯಾಗಿರುವಂಥ ಮಂಗಳಗ್ರಹದಲ್ಲಿನ ವಾತಾವರಣದಲ್ಲಿ ನೀರಾವಿ ಪತ್ತೆಯಾಗಿದೆ. ಹೀಗಾಗಿ ಅಲ್ಲಿ ಮಳೆ ಸುರಿಯುತ್ತದೆಯೇ ಎಂಬ ಚಿಂತನೆಗೆ ಇನ್ನಷ್ಟು ಪ್ರಖರತೆಯನ್ನು ಕೊಟ್ಟಿದೆ. ಇತ್ತ ಶುಕ್ರಗ್ರಹದಲ್ಲಿ ಓಜೋನ್ ಪದರ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಂದರೆ, ಸೂರ್ಯನಿಂದ ಬರುವಂಥ ವಿಕಿರಣಗಳು ಶುಕ್ರನ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಖಾತ್ರಿಯಾಯಿತು. ವಿಕಿರಣಗಳ ಹಾನಿಯಿಲ್ಲ ಎಂದರೆ ಜೀವಾಸ್ತಿತ್ವದ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಭೂಮಿಯ ಹೊರತಾಗಿ ಬೇರಾವ ಗ್ರಹಗಳು ಅಥವಾ ಆಕಾಶಕಾಯಗಳೂ ಸಹ ಜೀವಾಸ್ತಿತ್ವ ಹೊಂದಲು ಯೋಗ್ಯವಾಗಿಲ್ಲ ಎಂದೇ ವೈಜ್ಞಾನಿಕ ಜಗತ್ತು ತೀರಾ ಇತ್ತೀಚಿನ ವರ್ಷಗಳವರೆಗೂ ನಂಬಿತ್ತು. ಒಂದೊಂದೇ ಸಂಶೋಧನೆಗಳ ಫಲಿತಾಂಶದೊಂದಿಗೆ ಒಂದೊಂದು ಆಕಾಶಕಾಯಗಳಲ್ಲಿನ ವಿಸ್ಮಯಗಳೂ ಹೊರಬಿದ್ದಾಗ ನಂಬಿಕೆ ಬದಲಾಗುತ್ತಾ ಹೋಯಿತು. ಭೂಮಿಯಲ್ಲದೇ ಇನ್ನೂ ಯಾವುದಾದರೂ ಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದು. ಅದಕ್ಕೆ ಬೇಕಾದಂತಹ ವಾತಾವರಣವನ್ನು ಹಲವಾರು ಕಾಯಗಳು ಹೊಂದಿವೆ ಎಂಬ ಸತ್ಯ ಗೊತ್ತಾದಾಗ ಆಕಾಶ ಕಾಯಗಳ ಬಗೆಗಿನ ವೈಜ್ಞಾನಿಕ ಚಿಂತನೆಯೇ ಬದಲಾಗಿ ಹೋಯಿತು. ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವದ ಸಾಧ್ಯತೆಯನ್ನು ಅಥವಾ ಜೀವಾಸ್ತಿತ್ವ ಇರುವುದಕ್ಕೆ ಪೂರಕವಾದ ವಾತಾವರಣವನ್ನು ಕಂಡುಕ

ಕೃಷ್ಣಕುಹರದೊಳಗೆ ಜೀವಾಸ್ತಿತ್ವ!!!

Image
ಅದ್ಯಾಕೋ ಇತ್ತೀಚೆಗೆ ಈ ಕೃಷ್ಣಕುಹರಗಳು ಅರ್ಥಾತ್ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು ತುಂಬಾನೇ ಕಾಡುತ್ತಾ ಇವೆ; ನನ್ನನ್ನು ಮಾತ್ರವಲ್ಲ, ವಿಜ್ಞಾನಿಗಳನ್ನು ಕೂಡಾ! ಕೃಷ್ಣಕುಹರಗಳು ಇವೆ ಎಂಬ ಸಂಗತಿ ವೈಜ್ಞಾನಿಕ ಜಗತ್ತಿಗೆ ಗೊತ್ತಾದಂಥ ದಿನದಿಂದಲೇ ಇವುಗಳ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ನಡೆಸುವಂಥ ಪ್ರುಯತ್ನಗಳು ನಡೆಯುತ್ತಿವೆ. ಅದಕ್ಕಾಗಿಯೇ ಹಲವಾರು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಮೊನ್ನೆ 5ನೇ ತಾರೀಕಿನಂದು ಕೃಷ್ಣಕುಹರದ ರಹಸ್ಯಗಳು ಎಂಬ ಲೇಖನ ಬರೆದಾಗ; ಆ ಲೇಖನಕ್ಕೆ ಬಂದಂಥ ಪ್ರತಿಕ್ರಿಯೆಗಳು ಕೃಷ್ಣಕುಹರಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಜಾಲಾಡುವಂತೆ ನನ್ನನ್ನು ಪ್ರೇರೇಪಿಸಿದ್ದಂತೂ ನಿಜ. ಅದರಲ್ಲೂ ಮುಖ್ಯವಾಗಿ, ಫೇಸ್ ಬುಕ್ ಮಿತ್ರರೂ, ಹಿರಿಯರೂ ಆದಂಥ ಶ್ರೀಪಾದ ರಾವ್ ಅವರು ಭಾಗವತದಲ್ಲಿನ ಒಂದು ವಿಚಾರವನ್ನು- ಮಹಾಭಾರತ ಯುದ್ಧ ಮುಗಿದ ಮೇಲೆ ಶ್ರೀಕೃಷ್ಣ ಅರ್ಜುನನನ್ನು ಕರೆದುಕೊಂಡು ಗಾಢಾಂಧಕಾರವಿರುವಂಥ ಕೃಷ್ಣಕುಹರದೊಳಗೆ ಕರೆದುಕೊಂಡು ಹೋಗಿ ಅಲ್ಲಿ ಆದಿನಾರಾಯಣನ ದರ್ಶನ ಮಾಡಿದ- ಉಲ್ಲೇಖಿಸಿದ್ದನ್ನು ನೋಡಿದಾಗ ಒಂದು ಕ್ಷಣದಲ್ಲಿಯೇ ಅದರ ಬಗ್ಗೆ ಮನಸ್ಸಿನೊಳಗೆ ಹಲವು ರೀತಿಯ ಯೋಚನೆಗಳು ಸುಳಿದಾಡಿ ಮಾಯವಾದವು. ವೈಜ್ಞಾನಿಕ ಜಗತ್ತಿನ ಬೇರೆ ಬೇರೆ ಹೊಸ ವಿಚಾರಗಳು ಗಮನಕ್ಕೆ ಬಂದಾಗ ಅದು ಮರೆತೇ ಹೋಗಿತ್ತು. ಇಂತಿರುವಾಗ ಈ ವಿಚಾರವನ್ನು ಮತ್ತೆ ನೆನಪು ಮಾಡಿದ್ದು ರಷ್ಯಾದ ವಿಶ್ವವಿಜ್ಞಾನಿ ( ಕಾಸ್ಮೊಲಾಜಿ ಸ್

ಮಾನವ ಮೀನಿನ ರೂಪಾಂತರವೇ?

Image
ಬಹುಶಃ ಇಂಥದ್ದೊಂದು ಪ್ರಶ್ನೆ ಕೇಳಿದರೆ, ಮನುಷ್ಯನನ್ನು ಇಷ್ಟೊಂದು ಲೇವಡಿ ಮಾಡುತ್ತಿದ್ದಾರೆಯೇ ಎಂದು ಯಾರಾದರೂ ಭಾವಿಸಬಹುದೋ ಏನೋ? ಆದರೂ ಈ ಮನುಷ್ಯನೆಂಬೋ ಜೀವಿ ಭೂಮಿಗೆ ಬಂದದ್ದಾದರೂ ಎಲ್ಲಿಂದ? ತಾನೇ ತಾನಾಗಿ ಭೂಮಿಯ ಮೇಲೆ ಪ್ರತ್ಯಕ್ಷನಾದನೇ? ಅಥವಾ ಜೀವ ವಿಕಾಸದ ಹಂತದಲ್ಲಿ ಯಾವುದೋ ಪುಟ್ಟ ಜೀವಿ ವಿಕಾಸ ಹೊಂದಿ ಮನುಷ್ಯ ರೂಪವನ್ನು ತಾಳಿತೋ? ನಿಜ, ಈ ಎಲ್ಲ ಪ್ರಶ್ನೆಗಳ ಬಗ್ಗೆ ವೈಜ್ಞಾನಿಕ ಲೋಕದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. `ಮಂಗನಿಂದ ಮಾನವ'ನ ವಿಕಾಸವಾಯಿತು ಎಂದು ಇದುವರೆಗೆ ಹೇಳುತ್ತಲೇ ಬಂದಿದ್ದೇವೆ. ಇದಕ್ಕೂ ಹಿಂದಿನ ವಿಕಾಸವಾದದ ಹಂತಗಳೇನಾದರೂ ಇವೆಯೇ ಎಂಬ ಚಿಂತನೆ ವೈಜ್ಞಾನಿಕ ಜಗತ್ತಿನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದರ ಫಲವೇ ಹಲವಾರು ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಶೋಧನೆಗಳ ಪೈಕಿ, ಮೋನಾಶ್ ಯೂನಿವರ್ಸಿಟಿ ಯಲ್ಲಿನ ಆಸ್ಟ್ರೇಲಿಯನ್ ರಿಜನರೇಟಿವ್ ಮೆಡಿಸಿನ್ ಸಂಸ್ಥೆಯ ಪ್ರೊ. ಪೀಟರ್ ಕ್ಯೂರಿ ಮತ್ತು ಯೂನಿವರ್ಸಿಟಿ ಆಫ್ ಸಿಡ್ನಿ ಯ ಪ್ರೊ. ನಿಕೊಲಸ್ ಕೋಲ್ ನೇತೃತ್ವದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಅಚ್ಚರಿ ಹುಟ್ಟಿಸುವಂತಿದೆ. ಕಾರಣ, ಇವರ ಸಂಶೋಧನೆಯಿಂದ ತಿಳಿದು ಬಂದದ್ದು ಏನೆಂದರೆ- ಮಾನವರು ಮೀನಿನ ರೂಪಾಂತರವಾಗಿರಬೇಕು!

ಭೂಮಿಗೆ ನೀರು, ಜೀವಿಗಳು ಬಂದದ್ದು ಎಲ್ಲಿಂದ?

Image
ನಮ್ಮ ಭೂಮಿಯಲ್ಲಿ ಎಲ್ಲಿಯೇ ನೋಡಿ, ನೀರಿನ ಆಗರ ಕಾಣಿಸುತ್ತದೆ. ಕೆಲವೊಂದು ಮರುಭೂಮಿಗಳಲ್ಲಿ ಮೇಲ್ಪದರದಲ್ಲಿ ನೀರು ಸಿಗುವುದಿಲ್ಲ, ಇನ್ನು ಕೆಲವು ಪ್ರದೇಶಗಳಲ್ಲಿ ನೀರಿನಂಶ ಕಡಿಮೆ ಇದೆ ಎನ್ನುವುದನ್ನು ಬಿಟ್ಟರೆ ನೀರಿಲ್ಲವೇ ಇಲ್ಲ ಎಂಬಂಥ ಪರಿಸ್ಥಿತಿ ಇಲ್ಲ. ಸಾಗರದಲ್ಲಿ ನೀರಿನ ರಾಶಿ ಕಂಡಾಗ, ಹಿಮಾಲಯದ ನೀಗ೯ಲ್ಲುಗಳನ್ನು ಕಂಡಾಗ, ನದಿಯುದ್ದಕ್ಕೂ ಹರಿಯುವಂಥ ತಣ್ಣನೆಯ ನೀರನ್ನು ಕಂಡಾಗ ಇಷ್ಟೊಂದು ನೀರು ಎಲ್ಲಿಂದ ಬಂತು ಎಂದು ಆಶ್ಚಯ೯ವಾಗುತ್ತದೆ.  ವಿಜ್ಞಾನಿಗಳ ಪ್ರಕಾರ ಈ ಭೂಮಿ ಎಂಬ ಗ್ರಹ ಸೃಷ್ಟಿಯಾಗಿ 80 ಲಕ್ಷ ವಷ೯ಗಳಾಗುವವರೆಗೂ ಇಲ್ಲಿ ನೀರಿನ ಲವಲೇಶವೂ ಇರಲಿಲ್ಲ. ಅಷ್ಟು ವಷ೯ಗಳ ಬಳಿಕವೇ ಭೂಮಿಯಲ್ಲಿ ನೀರು ಕಾಣಿಸಿಕೊಂಡದ್ದು ಮತ್ತು ಈ ನೀರೇ ಇಂದು ಜೀವಿಗಳಿಗೆ ಆಸರೆಯಾಗಿರುವುದು. ಇದೀಗ ನಡೆದಿರುವಂಥ ಹೊಸ ಸಂಶೋಧನೆ ಭೂಮಿಯ ಮೇಲೆ ನೀರು ಹೇಗೆ ಬಂತು ಎಂಬ ಬಗ್ಗೆ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ. ಈ ನೂತನ ಸಂಶೋಧನೆಯ ಪ್ರಕಾರ ಧೂಮಕೇತುಗಳಿಂದಾಗಿಯೇ ಭೂಮಿಯಲ್ಲಿ ನೀರು ಕಾಣಿಸಿಕೊಂಡಿದೆ. ಹಾಗಾದರೆ ಈ ಧೂಮಕೇತುಗಳೇ ಭೂಮಿಗೆ ನೀರನ್ನು ತಂದು ತಂದು ಸುರಿದಿವೆಯೇ?.....

ಕಂಡಿರಾ ನೀಲಿ ಗುಲಾಬಿಯ...

Image
ಬುಹಶಃ ಇಂಥದ್ದೊಂದು ಗುಲಾಬಿ ಇದೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಬಿಳಿ, ಕೆಂಪು, ತಿಳಿಗೆಂಪು... ಹೀಗೆ ಕೆಲವೇ ಬಣ್ಣಗಳಲ್ಲಿ ಸಿಗುತ್ತಾ ಇದ್ದಂಥ ಗುಲಾಬಿಯನ್ನು ಏಕಾಏಕಿ ನೀಲಿ ಬಣ್ಣದಲ್ಲೂ ಸಿಗುತ್ತೆ ಅಂದ್ರೆ ನಂಬೋದಕ್ಕಾದ್ರೂ ಹೇಗೆ ಸಾಧ್ಯ? ಅದ್ರಲ್ಲೂ ಗುಲಾಬಿ ಅಂದ್ರೆ ಪಂಚಪ್ರಾಣ ಅಂದುಕೊಳ್ಳುವ ಮಹಿಳೆಯರಿಗಂತೂ ಒಂದೇ ಒಂದು ಬಾರಿ ಈ ಗುಲಾಬಿಯನ್ನು ಮುಡಿದು ನೋಡ್ಲೇಬೇಕು ಅನ್ನಿಸಿರಬಹುದು.   ನಿಜ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ನಿಜ. ನೀಲಿ ಗುಲಾಬಿ ಬಂದಿದೆ. ಈಗಾಗಲೇ ಮಾರುಕಟ್ಟೆಗೆ ಬರೋದಕ್ಕೂ ಸಿದ್ಧವಾಗಿದೆ. ನವೆಂಬರ್ ಹೊತ್ತಿಗೆ ಇದು ಮಾರುಕಟ್ಟೆಗೆ ಲಗ್ಗೆ ಇಡೋದಕ್ಕೆ ರೆಡಿಯಾಗಿದೆ. ಹಾಂ, ಕೊಂಡುಕೊಂಡೇ ಸಿದ್ಧ ಅಂತ ಮಾರುಕಟ್ಟೆಗೆ ಹಾಗೇ ಹೊರಟು ಬಿಟ್ಟೀರಿ! ಈ ಗುಲಾಬಿ ಬಂದಿರೋದು ಭಾರತದಲ್ಲಲ್ಲ, ಅಮೆರಿಕದಲ್ಲಿ. ಅಮೆರಿಕದಲ್ಲಿರುವಂಥವರಿಗಂತೂ ನೀಲಿ ಗುಲಾಬಿಯನ್ನು ಮುಡಿಯೋದಕ್ಕೆ ಒಂದು ಅಪೂವ೯ ಅವಕಾಶವೇ ಸಿಕ್ಕಿದೆ. ಇದು ಸಾಧ್ಯವಾ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು, ಅಲ್ಲವೇ?   ಇದು ಸಾಧ್ಯವಾದದ್ದು ಕುಲಾಂತರಿ ತಂತ್ರಜ್ಞಾನ ದಿಂದ. ಇನ್ನೂ ಒಂದು ವಿಷಯ ಗೊತ್ತಾ? ಇದು ಈಗಾಗಲೇ ಜಪಾನಿನಲ್ಲಿ ಮಾರಾಟವಾಗುತ್ತಿದೆ. ಯಾಕಂದ್ರೆ ಈ ಗುಲಾಬಿಯನ್ನು ಹುಟ್ಟಿಸಿದ್ದು ಜಪಾನೀಯರೇ. ನೀಲಿ ಬಣ್ಣದ ಹೂವುಗಳಲ್ಲಿ ಕಾಣಿಸಿಕೊಳ್ಳುವಂಥ ವಂಶವಾಹಿಗಳನ್ನು ಗುಲಾಬಿಯ ವಂಶವಾಹಿಗಳ ಜೊತೆಗೆ ಸಂಯೋಗಿಸುವ ಮೂಲಕ ಹೊಸ ವಂಶವಾಹಿಯನ್

ಕೃಷ್ಣಕುಹರದ ರಹಸ್ಯಗಳು....

Image
ಕಪ್ಪು ರಂಧ್ರಗಳು ಸಾಮಾನ್ಯವಾಗಿ ಅತ್ಯಧಿಕ ರಾಶಿಯನ್ನು ಹೊಂದಿರುತ್ತವೆ. ಮರ್ಕಾರಿಯನ್  509 ಗೆಲಾಕ್ಸಿಯಲ್ಲಿ ಇರುವಂಥ, ನಮ್ಮ ಸೂರ್ಯನಿಗಿಂತ 30 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿರುವಂಥ ಕಪ್ಪುರಂಧ್ರವನ್ನು ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಒಳಪಡಿಸಿದಾಗ ಈ ವಿಸ್ಮಯಗಳು ಹೊರ ಬಿದ್ದಿವೆ. ಬಾಹ್ಯಾಕಾಶ ವಿಜ್ಞಾನವೇ ಹಾಗೆ. ತಿಳಿದಷ್ಟೂ ಹೆಚ್ಚು ಹೆಚ್ಚು ವಿಸ್ಮಯಗಳು ಅನಾವರಣಗೊಳ್ಳುತ್ತಾ, ಕುತೂಹಲವನ್ನು, ಕೌತುಕವನ್ನು ಹೆಚ್ಚಿಸುತ್ತಾ ಇರುತ್ತವೆ. ಗ್ರಹಗಳು , ನಕ್ಷತ್ರಗಳು , ಧೂಮಕೇತುಗಳು ... ಹೀಗೆ ಪ್ರತಿಯೊಂದು ಆಕಾಶಕಾಯಗಳೂ ವಿಸ್ಮಯಗಳ ಆಗರ. ಒಂದೊಂದು ಕಾಯವೂ ವೈಜ್ಞಾನಿಕ ಜಗತ್ತನ್ನು ತನ್ನ ವಿಸ್ಮಯಗಳಿಂದಲೇ ತನ್ನತ್ತ ಸೆಳೆದುಕೊಳ್ಳುವಂಥ ಸಾಮರ್ಥ್ಯ ಉಳ್ಳವುಗಳು. ಅದರಲ್ಲಿಯೂ ವಿಜ್ಞಾನಿಗಳನ್ನು ಇಂದಿಗೂ ಕಾಡುತ್ತಿರುವಂಥ ಕಾಯಗಳೆಂದರೆ ಕೃಷ್ಣಕುಹರಗಳು, ಅಂದರೆ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು . ಈ ಕೃಷ್ಣಕುಹರಗಳೊಳಗೆ ಹಲವಾರು ಸಹಸ್ಯಗಳು ಅಡಗಿವೆ. ಜಗತ್ತಿನ ಸೃಷ್ಟಿಯ ಬಗ್ಗೆ, ಸೃಷ್ಟಿಯ ಮೂಲದ ಬಗ್ಗೆ, ಈ ಬ್ರಹ್ಮಾಂಡ ದ ಭವಿಷ್ಯದ ಬಗ್ಗೆ ಇವುಗಳಿಂದಲೇ ಮಾಹಿತಿ ಸಿಗಬಹುದು ಎಂದು ವಿಜ್ಞಾನಿಗಳು ಅಂದುಕೊಂಡಿದ್ದಾರೆ. ಕಪ್ಪು ರಂಧ್ರಗಳು ತಮ್ಮ ಗುರುತ್ವಾಕರ್ಷಣ ಶಕ್ತಿ ಗೆ ಸಿಲುಕಿದಂಥ ಎಲ್ಲವನ್ನು ಸ್ವಾಹಾ ಮಾಡುತ್ತವೆ, ಬೆಳಕನ್ನು ಸಹ ಬಿಡುವುದಿಲ್ಲ ಎಂದೂ ವೈಜ್ಞಾನಿಕ ಜಗತ್ತು ಭಾವಿಸಿತ್ತು. ಇದರ ಹಿಂದಿನ ರಹಸ್ಯಗಳು ಹೀಗೆ ಇರ

ನಮ್ ಸೂರ್ಯ ಹೀಗಿದ್ದಾನಾ?

Image
ಆಕಾಶದಲ್ಲಿ ಅದ್ಯಾರೋ ಇಟ್ಟು ಬಂದಂಥ ಹಣ್ಣೋ ಎಂಬಂತೆ ಕಾಣುವ ಸೂರ್ಯ ನಿಜವಾಗಿಯೂ ಹೇಗೆಲ್ಲಾ ಕಾಣ್ತಾನೆ? ಸೂರ್ಯ ಅಷ್ಟೊಂದು ಬೆಳಕು ಕೊಡ್ತಾನಲ್ಲ, ಅದೆಷ್ಟು ಬೆಂಕಿ ಹೊತ್ತಿಕೊಂಡಿರಬಹುದು ಯೋಚಿಸಿ. ನಮ್ಮ ಕಣ್ಣಿಗೆ ಆತನ ಒಡಲಲ್ಲಿ ನಡೆಯುವಂಥ ಪ್ರಕ್ರಿಯೆಗಳು ಕಾಣಿಸುವುದೇ ಇಲ್ಲ. ಸೂರ್ಯನ ಒಡಲಲ್ಲಿ ನಡೆಯುವಂಥ ಕ್ರಿಯೆಗಳನ್ನು ನೋಡಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ವಿಜ್ಞಾನಿಗಳಿಗೂ ಈ ಸೂರ್ಯನನ್ನು ಕಂಡ್ರೆ ಅದೊಂಥರ ಪ್ರೀತಿ. ಈ ಬೆಂಕಿಯುಂಡೆಯ ರಹಸ್ಯಗಳನ್ನು ತಿಳಿದುಕೊಳ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ನಾಸಾ ಸೋಲಾರ್ ಡೈನಾಮಿಕ್ಸ್ ಅಬ್ಸರವೇಟರಿ ಸ್ಯಾಟಲೈಟನ್ನು ಉಡಾಯಿಸಿತ್ತು. ಆ ಉಪಗ್ರಹ ಈಗ ಸೂರ್ಯನ ಅಂತರಾಳವನ್ನು ಅರಿತುಕೊಂಡು, ಅದರ ಚಿತ್ರಗಳನ್ನು ಕಳುಹಿಸಿದೆ.   ಈ ಉಪಗ್ರಹವು ಪ್ರತಿದಿನ ಸುಮಾರು 1.5 ಟೆರಾಬೈಟ್ ನಷ್ಟು ದಾಖಲೆಗಳನ್ನು ವಿಜ್ಞಾನಿಗಳಿಗೆ ಕಳುಹಿಸಿಕೊಡುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ವಿಜ್ಞಾನಿಗಳು ಸೂರ್ಯನ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 1.5 ಟೆರಾಬೈಟ್ ಅಂದರೆ ಎಷ್ಟಾಗುತ್ತೆ ಗೊತ್ತೆ? ಎಂಪಿ3 ಪ್ಲೇಯರಿನಲ್ಲಿ 5 ಲಕ್ಷ ಹಾಡುಗಳನ್ನು ತುಂಬಿಸಿದಷ್ಟು. ಈ ಉಪಗ್ರಹವನ್ನು 2010ರ ಫೆಬ್ರುವರಿಯಲ್ಲಿ ಉಡಾವಣೆ ಮಾಡಲಾಗಿತ್ತು. 5 ವರ್ಷದ ಯೋಜನೆಯಲ್ಲಿ ಈ ಉಪಗ್ರಹವು ಸೂರ್ಯನ ಕಾಂತವಲಯವನ್ನು ಅಧ್ಯಯನ ನಡೆಸಲಿದ್ದು, ಸೂರ್ಯ ಹೇಗೆ ಕಾರ್ಯಾಚರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ನೆರ

ವೈರಸ್ ಕೊಲ್ಲೋ ಶಾರ್ಕ್!

Image
ಸೂಕ್ಷ್ಮಾಣು ಜೀವಿಗಳು ಜೀವಕೋಶವನ್ನು ಪ್ರವೇಶಿಸಿ ಧನಾತ್ಮಕ ವಿದ್ಯುದಾವೇಶದ ಪ್ರೋಟೀನ್ಗಳಿಗಾಗಿ ಹುಡುಕಾಡುತ್ತವೆ. ಸೂಕ್ಷ್ಮಾಣುಜೀವಿಗಳು, ಮುಖ್ಯವಾಗಿ ವೈರಸ್ಗಳು ವಂಶಾಭಿವೃದ್ಧಿ ಮಾಡಬೇಕು ಎಂದಾದರೆ ಈ ಪ್ರೋಟೀನ್ಗಳು ಅವುಗಳಿಗೆ ಸಿಗಲೇಬೇಕು. ಸ್ಕ್ವಾಲಮೈನ್ ಹೊದಿಕೆಯಿರುವಾಗ ಸೂಕ್ಷ್ಮಾಣುಜೀವಿಗಳಿಗೆ ಈ ಪ್ರೋಟೀನ್ಗಳು ಸಿಗುವುದಾದರೂ ಹೇಗೆ?   ಸೂಕ್ಷ್ಮಾಣು ಜೀವಿಗಳ ಬಗ್ಗೆ ಮನುಷ್ಯ ಅದೆಷ್ಟು ಭಯಭೀತನಾಗಿದ್ದನೆ! ಒಂದೊಂದು ಹೊಸ ಹೊಸ ರೋಗಗಳು ಸಹ ತನ್ನನ್ನು ಕಾಡಿದಾಗ ಈ ಎಲ್ಲ ರೋಗಗಳನ್ನು ಹರಡುವಂಥ ಸೂಕ್ಷ್ಮಾಣು ಜೀವಿಗಳನ್ನು, ಮುಖ್ಯವಾಗಿ ವೈರಸ್ಗಳನ್ನು ಹೇಗಾದ್ರೂ ಮಾಡಿ ನಾಶ ಮಾಡಿಬಿಡಬೇಕು ಎಂಬಷ್ಟು ಸಿಟ್ಟು ಬಂದಿರುತ್ತೆ. ಅದ್ಯಾಕಾದ್ರೂ ಈ ರೋಗಗಳೆಲ್ಲ ವಕ್ಕರಿಸಿಕೊಳ್ತವೋ, ಒಂದು ರೋಗ ಗುಣ ಮಾಡಿದ್ರೆ ಇನ್ನೊಂದು ರೋಗ ಹುಟ್ಟಿಕೊಳ್ಳುತ್ತೆ. ವೈರಸ್ಗಳೂ ಸಹ ರೋಗಲಸಿಕೆಗಳು ತಮಗೆ ಏನೂ ತೊಂದರೆ ಮಾಡದಂತೆ ನಿರೋಧಕ ಶಕ್ತಿ ಬೆಳೆಸಿಕೊಳ್ತವೆ. ಏನ್ ಮಾಡೋದು? ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲೇ ಇದ್ದಾರೆ ವಿಜ್ಞಾನಿಗಳು. ವೈರಸ್ಗಳನ್ನು ಸುಲಭವಾಗಿ ಹತೋಟಿಗೆ ತೆಗೆದುಕೊಳ್ಳುವಂಥ ಒಂದು ಉಪಾಯ ಬೇಕು ಎಂಬ ಚಿಂತನೆ ಗಾಢವಾಗಿ ಕಾಡತೊಡಗಿತ್ತು. ಆದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುವುದು ಸುಲಭವಲ್ಲ. ಇನ್ನೂ ಕೆಲವೊಂದು ಬಾರಿ ಏನನ್ನೋ ಹುಡುಕುತ್ತಿರುವಾಗ ಇನ್ನೇನೋ ಸಿಕ್ಕಿಬಿಡುತ್ತೆ. ಯಾವುದೋ ಒಂದು ಸಂಶೋಧನೆ ನಡೆಸುವಾಗ

ಬೆಳಕಿಗಿಂತ ವೇಗವಾಗಿ ಚಲಿಸಬಹುದಾದದ್ದು ಯಾವುದು?

Image
ಸೆರ್ನ್ ವಿಜ್ಞಾನಿಗಳ ಪ್ರಯೋಗ ಭೌತಶಾಸ್ತ್ರದ ಮೂಲನಿಯಮವನ್ನೇ ಅಲ್ಲಾಡಿಸುತ್ತಿದೆಯಲ್ಲ ಎಂಬ ಚಿಂತೆ ಈಗಾಗಲೇ ಹಲವರಲ್ಲಿ ಮೂಡಿದೆ. ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಹೇಗೆ ಸಾಧ್ಯ? ಇದನ್ನು ಆರಂಭದಲ್ಲಿ ಸೆರ್ನ್ ವಿಜ್ಞಾನಿಗಳೂ ನಂಬಲಿಲ್ಲ. ಆದರೆ ತಮ್ಮ ಯಂತ್ರೋಪಕರಣಗಳಲ್ಲಿ, ಲೆಕ್ಕಾಚಾರಗಳಲ್ಲಿ ಯಾವುದೇ ದೋಷ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಅವರು ಮಾಹಿತಿಯನ್ನು ಹೊರಹಾಕಿದ್ದಾರೆ. ಹಾಗಿದ್ದರೆ ಐನ್ ಸ್ಟೀನನ ಸಿದ್ಧಾಂತವೇ ತಪ್ಪೇ?  ಇದರ ಬಗ್ಗೆಯೇ ಚಿಂತಿಸುತ್ತಾ ಅಂತರ್ಜಾಲದಲ್ಲಿ ಹುಡುಕಾಡುತ್ತಿರಬೇಕಾದರೆ ಟ್ರುಥ್ ಡೈವ್ ಎಂಬ ಅಂತರ್ಜಾಲತಾಣದಲ್ಲಿ ಕವಿ, ಲೇಖಕ, ಎಂಜಿನಿಯರ್ ಮನೋಹರನ್ ಸಂಬಂದಮ್ (Manoharan Sambandam)  ಎಂಬವರು ಬರೆದಿದ್ದಂಥ ಲೇಖನ ಸಿಕ್ಕಿತು. ಅವರ ವಾದಸರಣಿ ನಿಜಕ್ಕೂ ಮನಸ್ಸಿಗೆ ನಾಟಿತು. ನನ್ನ ಬ್ಲಾಗ್ ಮಿತ್ರರಿಗಾಗಿ ಈ ಲೇಖನದ ಯಥಾವತ್ ಕನ್ನಡಾನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ. ಇಲ್ಲಿಂದ ಮನೋಹರನ್ ಲೇಖನ.... ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬ ತತ್ತವದ ಆಧಾರದಲ್ಲಿರುವ ನಮ್ಮ ಎಲ್ಲ ಕಥೆಗಳು, ಗ್ರಹಿಕೆಗಳು, ಸಿದ್ಧಾಂತಗಳು, ಲೆಕ್ಕಾಚಾರಗಳು ಈಗ ತಲೆಕೆಳಗಾಗುತ್ತವೆ. ಯೂರೋಪಿನಲ್ಲಿ ಇತ್ತೀಚೆಗೆ ನಡೆಸಲಾದಂಥ ಸಂಶೋಧನೆಯ ಪ್ರಕಾರ ಅಣುವಿಗಿಂತಲೂ ಚಿಕ್ಕದಾದಂಥ ಕಣ ಬೆಳಕಿಗಿಂತ ತುಸು ವೇಗದಲ್ಲಿ ಚಲಿಸುತ್ತದೆ. ಹಾಗಿದ್ದರೆ ಐನ್ ಸ್ಟೀನನನ್ನು ಗತಕಾಲದವನು ಅಥವಾ ಔಟ್ ಡೇಟೆಡ

ಐನ್ ಸ್ಟೀನನ ಸಿದ್ಧಾಂತ ಸುಳ್ಳಾದರೆ ನನ್ನ ಬಾಕ್ಸಿಂಗ್ ಚಡ್ಡಿ ತಿನ್ನುವೆ ಎಂದ ಜಿಮ್!

Image
ನಿನ್ನೆಯಷ್ಟೇ ಜಿನೇವಾದಲ್ಲಿನ ಲಾಜ್೯ ಹ್ಯಾಡ್ರಾನ್ ಕೊಲೈಡರ್ ನಿಂದ ಬಂದಂಥ ಸುದ್ದಿ ವೈಜ್ಞಾನಿಕ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಯಾವ ಸಿದ್ಧಾಂತದ ಮೇಲೆ ಇಷ್ಟು ವಷ೯ ಭೌತಶಾಸ್ತ್ರವೇ ನಿಂತಿತ್ತೋ ಆ ಸಿದ್ಧಾಂತವೇ ಅಲುಗಾಡಿದೆ ಎಂದರೆ ಮನೆಯ ಅಡಿಪಾಯವೇ ಬಿರಿದಂತೆ. ನಿಜ, ವಿಜ್ಞಾನ ಎಂದರೆ ಮೂಗು ಮುರಿದು ಅದು ಯಾರಿಗೆ ಅಥ೯ವಾಗುತ್ತೆ ಮಾರಾಯಾ ಅನ್ನುವವರು ಕೂಡಾ ಐನ್ ಸ್ಟೀನನ ಸಿದ್ಧಾಂತ ಸುಳ್ಳಾಗುತ್ತಿದೆ ಎಂಬ ಸುದ್ದಿಯನ್ನು ಚೂಯಿಂಗ್ ಗಮ್ ನಂತೆ ಜಗಿದಿದ್ದಾರೆ. ಒಂದಷ್ಟು ಹೊತ್ತು ಚಚೆ೯ ನಡೆಸಿ ಬಳಿಕ ಇವರು ಹೇಳಿದ್ದು ಅದೇ ಹಳೇ ಮಾತನ್ನು- ವಿಜ್ಞಾನ ಯಾರಿಗೆ ಅಥ೯ವಾಗುತ್ತೆ?   ಇವರ ವಿಚಾರ ಒತ್ತಟ್ಟಿಗಿರಲಿ, ಈ ಸಂಶೋಧನೆಯ ಬಗ್ಗೆ ವಿಜ್ಞಾನಿಗಳು ಯಾವ ಪ್ರತಿಕ್ರಿಯೆಯನ್ನೇ ಕೊಡಲಿಲ್ಲವೇ? ಕೊಟ್ಟಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಬ್ಬರು ಅದೆಷ್ಟು ಪೂವಾ೯ಗ್ರಪೀಡಿತರಾಗಿ ವತಿ೯ಸಿದ್ದಾರೆ ಎಂದರೆ, ಒಂದು ಸಂಶೋಧನೆಯ ಫಲಿತಾಂಶವನ್ನು ಕನಿಷ್ಟಪಕ್ಷ ಚಚಿ೯ಸುವಂಥ ಮನಃಸ್ಥಿತಿಯನ್ನೂ ಅವರು ಪ್ರದಶಿ೯ಸಿಲ್ಲ. ಇಂಥ ಪೂವಾ೯ಗ್ರಹಗಳು ಹೊಸದೇನಲ್ಲ ಬಿಡಿ. ಐನ್ ಸ್ಟೀನ್ ತನ್ನ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವಾಗಲೂ ಅಂದಿನ ವಿಜ್ಞಾನಿಗಳು ಪೂವಾ೯ಗ್ರಹಪೀಡಿತರಂತೆ ವತಿ೯ಸಿದ್ದರು. ನ್ಯೂಟನ್ ಗುರುತ್ವಾಕಷ೯ಣ ಶಕ್ತಿಯನ್ನು ಕಂಡು ಹಿಡಿದಾಗಲೂ ಒಂದಷ್ಟು ಅಪಸ್ವರಗಳು ಪುಟಿದೆದ್ದು ಬಂದಿದ್ದವು. ಇರಲಿ, ಅಂದಿನ ವಿಚಾರಗಳು ಈ

ಆಲ್ಬರ್ಟ್ ಐನ್ ಸ್ಟೀನನ ಸಿದ್ಧಾಂತವೇ ಸುಳ್ಳೇ?

Image
ಭೌತಶಾಸ್ತ್ರಕ್ಕೊಂದು  ಮೂಲಭೂತ ನಿಯಮ ಎನ್ನುವುದನ್ನು ಕೊಟ್ಟದ್ದು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್. ಅದು ವಿಶೇಷ ಸಾಪೇಕ್ಷತಾ ಸಿದ್ಧಾಂತ. ಇದೀಗ ಈ ಸಿದ್ಧಾಂತವೇ ಸುಳ್ಳಾಗಿರಬಹುದೇ ಎಂಬ ಚಿಂತನೆಯನ್ನು ಹಚ್ಚಿದೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ. ಐನ್ ಸ್ಟೀನನ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಒಂದು ವ್ಯವಸ್ಥೆ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ಸಮರ್ಪಕವಾಗಿ ಸಾಬೀತುಪಡಿಸುತ್ತದೆ ಎಂದಾದರೆ ಆ ವ್ಯವಸ್ಥೆಯ ಜೊತೆಗೆ ಸಂಬಂಧ ಹೊಂದಿರುವಂಥ ಇನ್ನೊಂದು ವ್ಯವಸ್ಥೆಯೂ ಸಹ ಭೌತಶಾಸ್ತ್ರದ ಎಲ್ಲ ನಿಯಮಗಳಿಗೂ ಅನ್ವಯವಾಗಿರಲೇಬೇಕು. ಈ ಸಿದ್ಧಾಂತದ ಪ್ರಕಾರವೇ ಐನ್ ಸ್ಟೀನ್ ರಾಶಿ ಮತ್ತು ಶಕ್ತಿಯ ನಡುವಿನ ಸಂಬಂಧದ ಸೂತ್ರವನ್ನು ಕೊಟ್ಟ. ಇದುವೇ ಮಾಸ್ ಎನರ್ಜಿ ರಿಲೇಶನ್, E= mc2. ಇಲ್ಲಿ E ಅಂದರೆ ಶಕ್ತಿ, m ಅಂದರೆ ಕಣದ ರಾಶಿ ಮತ್ತು c ಬೆಳಕಿನ ವೇಗ. ಇವುಗಳ ಪೈಕಿ ಬೆಳಕಿನ ವೇಗವನ್ನು ಸ್ಥಿರಾಂಕವೆಂದು ಪರಿಗಣಿಸಲಾಗಿತ್ತು. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ  186,282 ಮೈಲಿಗಳು ಎಂಬುದು ಇದುವರೆಗಿನ ಲೆಕ್ಕಾಚಾರ. ಬೆಳಕಿನ ವೇಗವನ್ನು ಈ ಸಂಖ್ಯೆಗೆ ಸ್ಥಿರಗೊಳಿಸಿಯೇ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ರೂಪಿಸಲಾಗಿದೆ. ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ ಬೆಳಕಿನ ವೇಗವನ್ನೇ ಪ್ರಶ್ನಿಸಿದೆ. ಅಂದರೆ ನಿಗದಿತ ಶಕ್ತಿ ಮಟ್ಟದಲ್ಲಿ, ನಿಗದಿತ ರಾಶಿಯ ಒಂದು ಕಣ ಗರಿಷ್ಠ ಎಂದರೆ ಬೆಳಕಿನ ವೇಗದಲ್ಲಿ ಚಲ

ಇಂಗಾಲವಿಲ್ಲದ ಜೀವಗಳು...!

Image
ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ!  ಅನ್ವೇಷಣೆ ಅನ್ನುವಂಥದ್ದು ಸದಾ ಚಲನಶೀಲ. ಒಂದು ವಿಚಾರದ ಅನ್ವೇಷಣೆಯಾದರೆ ಅದನ್ನು ಮತ್ತೊಂದಷ್ಟು ಒರೆಗೆ ಹಚ್ಚಿ ಆ ಅನ್ವೇಷಣೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನ ನಡೆಯುತ್ತದೆ. ಇಂಥ ಪ್ರಯತ್ನದಲ್ಲಿ ಎಷ್ಟೋ ಬಾರಿ ಮೊದಲಿನ ಅನ್ವೇಷಣೆಯೇ ಸುಳ್ಳು ಎಂಬ ಫಲಿತಾಂಶ ಬರುತ್ತದೆ. ಮಹತ್ತರವಾದಂಥ ನಿರೀಕ್ಷೆಗಳನ್ನಿಟ್ಟುಕೊಂಡು ಪ್ರಯೋಗ ಶುರು ಮಾಡುತ್ತೇವೆ. ಫಲಿತಾಂಶ ಬಂದಾಗ ಎಲ್ಲವೂ ತಲೆಕೆಳಗಾಗಿರುತ್ತದೆ. ಹಾಗಂತ ಪ್ರಯತ್ನಗಳು ನಿಲ್ಲುವುದಿಲ್ಲ. ಅದು ವಿಜ್ಞಾನದ ತಾಕತ್ತು. ಅದೆಷ್ಟೇ ವೈಫಲ್ಯಗಳು ಎದುರಾದರೂ ಮರಳೆ ಯತ್ನವ ಮಾಡುವಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತನ್ನು ಕಂಡು ಇತರರು ಅಚ್ಚರಿಗೊಳ್ಳುವಂತೆ ಮಾಡುತ್ತದೆ. ಇಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ! ಪ್ರಸ್ತುತ ಭೂಮಿಯಲ್ಲಿ ಕಾರ್ಬನ್ ಅಥವಾ ಇಂಗಾಲವನ್ನು ಹೊಂದಿಲ್ಲದಂಥ ಜೀವಿಗಳನ್ನು ಹುಡುಕುವುದು ಕಷ್ಟ. ಯಾವುದೇ ಜೀವಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೂ ಆ ಜೀವಿಯಲ್ಲಿ ಇಂಗಾಲ ಇದ್ದೇ ಇರುತ್ತದೆ. ನಾವು ಉಸಿರಾಡುವ ಗಾಳಿಯ ಮೂಲಕವೇ ಇಂಗಾಲ ನಮ್ಮ ದೇಹ ಸೇರುತ್ತಿರುವಾಗ ಬೇರೆ ಪ್ರಶ್ನೆ ಬೇಕ

ಪ್ಲೂಟೋದಲ್ಲಿ ಸಾಗರ ಗಭ೯!

Image
ಒಂದು ಕಾಲದಲ್ಲಿ ನಮ್ಮ ಸೌರಮಂಡಲದ ಒಂಬತ್ತನೇ ಗ್ರಹವಾಗಿದ್ದಂಥ ಪ್ಲೂಟೋವನ್ನು ಗ್ರಹದ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಈಗ ಅದೇ ಪ್ಲೂಟೋದಿಂದಲೇ ಒಂದು ವಿಸ್ಮಯ ಹೊರಬಿದ್ದಿದೆ. ಅದು... ಪ್ಲೂಟೋದಲ್ಲಿರುವಂಥ ಸಾಗರ ಗಭ೯!     ನಮ್ಮ ಸೌರಮಂಡಲದಲ್ಲಿನ ಅತ್ಯಂತ ಶೀತಕಾಯ ಎಂದೇ ಖ್ಯಾತಿ ಪಡೆದಂಥದ್ದು ಈ ಪ್ಲೂಟೋ. ಇದರಲ್ಲಿರುವಂಥ ಮೈಲಿಗಟ್ಟಲೆ ದಪ್ಪದ ಮಂಜಿನ ಪದರದಡಿ ಸಾಗರ ಇರುವಂಥ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕ್ಯಾಲಿಫೋನಿ೯ಯಾ ಯೂನಿವಸಿ೯ಟಿಯ ವಿಜ್ಞಾನಿಗಳು. ಈ ಪ್ಲೂಟೋ ಅತ್ಯಂತ ಶೀತಲವಾಗಿದ್ದರೂ ಸಹ ಅದರಲ್ಲಿರುವಂಥ ವಿಕಿರಣ ವಸ್ತುಗಳು ಸೂಸುವಂಥ ವಿಕಿರಣಗಳ ಕಾರಣದಿಂದಾಗಿ ಈ ಕುಬ್ಜ ಗ್ರಹವು ತನ್ನೊಳಗೆ ಸಾಗರವನ್ನು ಹೊಂದುವುದಕ್ಕೆ ಅಗತ್ಯವಿರುವಷ್ಟು ಶಾಖ ಹೊಂದಿರುವ ಸಾಧ್ಯತೆಗಳಿವೆ.   ಈಗಾಗಲೇ ಶನಿಯ ಚಂದ್ರರಾದ ಟೈಟಾನ್ ಮತ್ತು ಎನ್ಸಿಲಾಡಸ್ ಗಳಲ್ಲಿ ನೀರಿನ ಸಾಗರ ಇದೆ ಎಂದು ಸಾಬೀತಾಗಿದೆ. ಒಂದು ವೇಳೆ ಪ್ಲೂಟೋದಲ್ಲಿಯೂ ಸಾಗರ ಇರುವುದು ಖಾತ್ರಿಯಾದರೆ ಅದು ಕೂಡಾ ಈ ಕಾಯಗಳ ಪಟ್ಟಿಗೆ ಸೇರುತ್ತದೆ. ಪ್ಲೂಟೋದ ಮೇಲ್ಪದರವು ಸುಮಾರು 200 ಕಿಲೋಮೀಟರ್ ಗಳಷ್ಟು ಮಂಜಿನ ಗಟ್ಟಿಯಿಂದ ಕೂಡಿದೆ. ಈ ಮಂಜಿನ ಪದರದಿಂದ ಸುಮಾರು 100ರಿಂದ 170 ಕಿಲೋಮೀಟರ್ ಗಳಷ್ಟು ಆಳದಲ್ಲಿ ತಾಜಾ ನೀರಿನ ಸಾಗರವಿರುವ ಸಾಧ್ಯತೆಗಳಿವೆ.   ಪ್ಲೂಟೋದಲ್ಲಿ ಮುಖ್ಯವಾಗಿ ಪೊಟ್ಯಾಶಿಯಂ- 40 ಮತ್ತಿತರ ವಿಕಿರಣ ವಸ್ತುಗಳಿವೆ. ಈ ವಿಕಿರಣ ವಸ್ತುಗಳ ಸದಾ ಸೂಸುತ್ತಿರುವಂಥ ಶಾಖದ

ಇಬ್ಬರು ಸೂಯ೯ರ ಮುದ್ದಿನ ಗ್ರಹ!

Image
ಆ ಲೋಕದಲ್ಲಿ ಒಬ್ಬ ಸೂಯ೯ ಉದಯಿಸಿದ ಬೆನ್ನಲ್ಲೇ ಇನ್ನೊಬ್ಬ ಸೂಯ೯ ಉದಯಿಸುತ್ತಾನೆ. ಮೊದಲ ಸೂಯ೯ನೊಂದಿಗೇ ಗಿರಕಿ ಹೊಡೆಯುತ್ತಾನೆ. ಆ ಸೂಯ೯ ನಡುನೆತ್ತಿಗೆ ಬಂದಾಗ ಇವನೂ ನಡುನೆತ್ತಿಗೆ ಬರುತ್ತಾನೆ. ಆ ಸೂಯ೯ ಮುಳುಗುವುದೇ ತಡ ಈ ಸೂಯ೯ನೂ ಮುಳುಗುತ್ತಾನೆ. ಈ ಇಬ್ಬರೂ ಸೂಯ೯ರಿಗೆ ಒಂದು ಮುದ್ದಿನ ಗ್ರಹವಿದೆ. ಆ ಗ್ರಹಕ್ಕೆ ಎರಡೆರಡು ಸೂಯೋ೯ದಯ ಎರಡೆರಡು ಸೂಯಾ೯ಸ್ತ ನೋಡುವಂಥ ಭಾಗ್ಯ. ಯಾರಿಗುಂಟು? ಯಾರಿಗಿಲ್ಲ?   30 ವಷ೯ಗಳ ಹಿಂದೆ ತೆರೆ ಕಂಡಂಥ ಹಾಲಿವುಡ್ ಚಿತ್ರ ಸ್ಟಾರ್ ವಾರ್ಸ್ ನೋಡಿದವರಿಗೆ ಇದು ಅದರದ್ದೇ ಕಥೆ ಎನಿಸಬಹುದು. ಆದರೆ ಇದು ಕಥೆಯಲ್ಲ, ವಾಸ್ತವ. ಇಂಥದ್ದೊಂದು ಲೋಕವನ್ನು ನಾಸಾದ ಕೆಪ್ಲರ್ ಬಾಹ್ಯಾಕಾಶ ಮಿಶನ್ ಪತ್ತೆ ಮಾಡಿದೆ. ಭೂಮಿಯಿಂದ 200 ಜ್ಯೋತಿವ೯ಷ೯ (1 ಜ್ಯೋತಿವ೯ಷ೯ ಅಂದರೆ 9460730472580.8 ಕಿಲೋ ಮೀಟರ್) ದೂರದಲ್ಲಿ ಈ ಗ್ರಹ ಮತ್ತು ಸೂಯ೯ರು ಇದ್ದಾರೆ.   ಈ ಗ್ರಹವು ಸಾಕಷ್ಟು ತಂಪಾಗಿದೆ ಮತ್ತು ಅನಿಲಗಳಿಂದ ತುಂಬಿದೆ. ಆದರೆ ಅಲ್ಲಿ ಜೀವಾಸ್ತಿತ್ವ ಇರುವುದು ಕಷ್ಟ. ಆದಾಗ್ಯೂ, ವಾಸಯೋಗ್ಯ ವಾತಾವರಣ ಇದೆ. ಹೀಗಾಗಿ ಅಲ್ಲಿ ಜೀವಿಗಳನ್ನು ಪತ್ತೆ ಮಾಡುವುದಕ್ಕೆ ಅಥವಾ ಜೀವಿಗಳು ವಾಸಿಸುವುದು ಸಾಧ್ಯವೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಬಹುದು ಎಂದಿದ್ದಾರೆ ವಿಜ್ಞಾನಿಗಳು. ಈ ಗ್ರಹದ ಒಂದು ವಿಶೇಷವೆಂದರೆ ಇದು ಸೂಯ೯ರ ಸುತ್ತ ಪರಿಭ್ರಮಿಸುವುದಕ್ಕೆ ನಿಖರವಾದ ಕಾಲಮಾನವಿಲ್ಲ. ಅಂದರೆ, ನಮ್ಮ ಭೂಮಿ ಸೂಯ೯ನ ಸುತ್ತ ಪರಿಭ್ರಮಿಸು

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

Image
ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ನಿಮ್ಮ ನೆನಪುಗಳನ್ನೇ ಹಾಳುಮಾಡಬಹುದು, ಸ್ಮರಣಶಕ್ತಿಗೆ ಹೊಡೆತ ನೀಡಬಹುದು ಎಚ್ಚರ. ಆವಿಷ್ಕಾರಗಳು ಪ್ರಪಂಚಕ್ಕೆ ಉಪಕಾರಿಯಾಗುವುದರ ಜೊತೆ ಜೊತೆಗೆ ಹಲವು ಬಾರಿ ಕಂಟಕವಾಗಿಯೂ ಪರಿಣಮಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗರ್ಭನಿರೋಧಕ ಗುಳಿಗೆಗಳು. ಬೇಡದ ಗರ್ಭವನ್ನು ತಡೆಗಟ್ಟುವಂಥ ಈ ಗುಳಿಗೆಗಗಳನ್ನು ಇಂದು ಅತಿಯಾಗಿ ಬಳಸುತ್ತಿರುವುದು ಯುವ ಸಮುದಾಯ. ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಇದರಿಂದಾಗಬಹುದಾದಂಥ ಅಪಾಯಗಳೆಲ್ಲ ಆ ಕ್ಷಣದಲ್ಲಿ ನೆನಪಿಗೆ ಬರುವುದೇ ಇಲ್ಲ! ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ಬಂಜೆತನಕ್ಕೆ ಕಾರಣವಾಗಬಹುದು ಎಂಬ ಸತ್ಯವನ್ನು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ. ಈ ವಿಚಾರ ಗೊತ್ತಿದ್ದರೂ ಯುವಸಮುದಾಯ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವಂಥ ಪ್ರಸಂಗ ಬರದಂತೆ ಎಚ್ಚರವಹಿಸುವುದೇ ಇಲ್ಲ. ಇದೀಗ ವಿಜ್ಞಾನಿಗಳು ಈ ಗರ್ಭನಿರೋಧಕ ಗುಳಿಗೆಗಳ ಇನ್ನೊಂದು

ಅಳಿವ ಜೀವಿಗೆ ಕಾಂಡಕೋಶದ ರಕ್ಷೆ?

Image
ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಆದರೆ ಈ ರೀತಿ ಜೀವಿಗಳು ಸೃಷ್ಟಿಯಾಗಿ ಅವುಗಳ ಸಂಖ್ಯೆ ಹೆಚ್ಚಾದರೆ ವಾಸಿಸುವುದೆಲ್ಲಿ?  ಮಾನವನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದಕ್ಕೆ ತತ್ಸಮಾನವಾಗಿ ಇತರ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ತನ್ನ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಹಕ್ಕಿದೆ ಎಂಬುದನ್ನು ಆತ ನಿರ್ಲಕ್ಷಿಸುತ್ತಿದ್ದಾನೆ. ಪರಿಣಾಮ ಹಲವಾರು ಜೀವಿಗಳು ಇಂದು ಕಣ್ಮರೆಯಾಗಿವೆ. ಇನ್ನೂ ಉನವಾರು ಪ್ರಭೇದದ ಜೀವಿಗಳು ಅದೇ ಹಾದಿಯಲ್ಲಿ ಸಾಗುತ್ತಿವೆ. ಅಳಿವಿನ ಅಂಚಿಗೆ ಬಂದು ನಿಂತ ಪ್ರಾಣಿಗಳನ್ನು ರಕ್ಷಿಸಬೇಕು ಎಂಬ ಕುಗು ದಶದಿಕ್ಕುಗಳಲ್ಲೂ ಮಾರ್ದನಿಸುತ್ತಿದೆ. ರಕ್ಷಣೆಯ ಬಗ್ಗೆ ನಡೆದಿರುವಂಥ ಕಾರ್ಯಗಳು ಮಾತ್ರ ಬಹುತೇಕ ನಿಷ್ಪ್ರಯೋಜಕ! ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಪ್ರತಿಯೊಂದು ಜೀವಿಗಳ ಜೀವಕೋಶಗಳಿಗೂ ಮೂಲಕೋಶಗಳಾಗಿರುವುದು ಕಾಂಡಕೋಶ. ಇಂಥ ಕಾಂಡಕೋಶಗಳನ್ನು ಪಡೆದು ಮಾನವನ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ವೈಜ್ಞಾನಿಕ

ದೇವರು ಕಾಣಲೇ ಇಲ್ಲ...!

Image
ದೇವಕಣ ವಿಜ್ಞಾನಿಗಳನ್ನು ಪೇಚಿಗೆ ಸಿಕ್ಕಿಸಿದೆ. ಇದರ ರಾಶಿ ಇಷ್ಟೇ ಎಂದುಕೊಂಡಾಗ ಇನ್ನೂ ಅಧಿಕವಾಗಿರಬೇಕು ಎಂಬ ಚಿಂತನೆ ಮೂಡಿಸಿದೆ. ಇಲ್ಲ, ಇನ್ನೂ ಅಧಿಕ ರಾಶಿಯಿರಬೇಕು ಎಂದುಕೊಂಡಾಗ ತೀರಾ ಹಗುರಾಗಿ ರಾಶಿಯನ್ನೇ ಹೊಂದಿರದ ಕಣವೋ ಎಂಬ ಭ್ರಮೆ ಮೂಡಿಸಿದೆ. ಯಾವುದು ಸತ್ಯ ಎಂಬ ಸಂದಿಗ್ಧ ವಿಜ್ಞಾನಿಗಳ ಪಾಲಾಗಿದೆ.  ದೇವರನ್ನು ಅರ್ಥಾತ್ ದೇವಕಣವನ್ನು ಹುಡುಕಬೇಕು, ಈ ಸೃಷ್ಟಿಯ ಮೂಲ ಹೇಗಾಯಿತು ಎಂಬುದನ್ನು ಕಂಡುಕೊಳ್ಳಬೇಕು, ಬ್ರಹ್ಮಾಂಡ ಸೃಷ್ಟಿಯಾದ ಆರಂಭದಲ್ಲಿ ಜೀವಾಸ್ತಿತ್ವ ಹೇಗಿತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂಬೆಲ್ಲ ಉತ್ಕಟಾಪೇಕ್ಷೆಯಲ್ಲಿದ್ದ ವಿಜ್ಞಾನಿಗಳು ಭ್ರಮನಿರಸನಗೊಂಡಿದ್ದಾರೆ. ಸೃಷ್ಟಿಯ ಮೂಲಕಣವೆಂದು ವೈಜ್ಞಾನಿಕ ಜಗತ್ತು ಪರಿಗಣಿಸಿರುವಂಥ ಹಿಗ್ಸ್ ಬೋಸಾನ್ಗಳನ್ನು ನೋಡಬೇಕು, ಅವುಗಳ ಸ್ವರೂಪವನ್ನು ಅರಿಯಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಸ್ವಿಜರ್ಲೆಂಡಿನ ಜಿನೇವಾ ಸಮೀಪದ ಸಿಇಆರೆನ್ ಎಂಬಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಸ್ಥಾಪಿಸಿದ್ದರು. ಈ ಮೂಲಕವಾಗಿ ದೇವಕಣವನ್ನು ಕಂಡುಕೊಳ್ಳುವ ಚಿಂತನೆಯಿತ್ತು. ಆದರೆ ಅದೀಗ ತಲೆಕೆಳಗಾಗಿದೆ. ಯಾವ ದೇವಕಣವನ್ನು ಅಂದರೆ ಹಿಗ್ಸ್ ಬೋಸಾನನ್ನು ಕಾಣಬೇಕು ಎಂದು ವಿಜ್ಞಾನಿಗಳು ಬಯಸಿದ್ದರೋ ಆ ದೇವಕಣ ವಿಜ್ಞಾನಿಗಳ ಜೊತೆ ಕಣ್ಣಾಮುಚ್ಚಾಲೆಯಾಡಿದೆ. ದೇಬಕಣವನ್ನು ಕಂಡೆವು, ಇದೇ ದೇವಕಣ ಎಂದು ಗುರುತಿಸುವಷ್ಟು ಕಾಲಾವಕಾಶವನ್ನು ವಿಜ್ಞಾನಿಗಳಿಗೆ ಕೊಡಲಿಲ್ಲ ಈ ದೇವಕಣ. ಮಿಂಚಿನಂತೆ ಮಿಂಚಿ

ಸೋತು ಹೋಗುತ್ತೆ ತಾಜ್ ಮಹಲ್!

Image
ಸುಂದರವಾದ ವಿನ್ಯಾಸವುಳ್ಳ ಕಟ್ಟಡಗಳಲ್ಲಿ ತಾಜ್ ಮಹಲ್ ಕೂಡಾ ಒಂದು. ಆದ್ರೆ ಇದರ ಈ ಪಟ್ಟ ಸದ್ಯದಲ್ಲೇ ಹೊರಟು ಹೋಗುತ್ತೆ. ಯಾಕೆ ಅಂತೀರಾ? ಅದಕ್ಕೊಂದು ಪ್ರತಿಸ್ಪಧಿ೯ ಬರ್ತಾ ಇದೆ.       ಹೌದು, ಇದು ತಾಜ್ ಮಹಲ್ ಗಿಂತ ಸುಂದರವಾದ ಕಟ್ಟಡ ಮಾತ್ರವಲ್ಲ, ವಿಶ್ವದಲ್ಲೇ ಅತ್ಯಂತ ಸುಂದರ ಕಟ್ಟಡ ಎಂದು ಹೆಸರು ಗಳಿಸುವುದು ಖಚಿತ. ತಂತ್ರಜ್ಞಾನ ಮುಂದುವರಿದಂತೆ ಅದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದೆ. ವಾಸ್ತುಶಾಸ್ತ್ರದಲ್ಲಿಯೂ ತಂತ್ರಜ್ಞಾನದ ಬಳಕೆ ಅಧಿಕವಾಗಿದೆ. ಇದೇ ತಂತ್ರಜ್ಞಾನ ಈಗ ಒಂದು ಸುಂದರ ಕಟ್ಟಡದ ವಿನ್ಯಾಸಕ್ಕೆ ಸಹಕಾರಿಯಾಗಿದೆ. ಕೋಲ್ಕೊತಾದಲ್ಲಿ ನಿಮಿ೯ಸಲು ಉದ್ದೇಶಿಸಿರುವ ಕಟ್ಟಡ       ಇದು ಒಂದು ಥರಾ ಬಾಹ್ಯಾಕಾಶ ನಿಲ್ದಾಣದಂತೆ ಕಾಣಿಸುವಂಥ ಕಟ್ಟಡ. ಕೋಲ್ಕತಾದಲ್ಲಿ ಇದನ್ನು ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಈ ವರ್ಷಾಂತ್ಯದಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವಂಥ ವಿಶ್ವ ಶಿಲ್ಪಕಲಾ ಮೇಳದಲ್ಲಿ ಈ ಕಟ್ಟದ ವಿನ್ಯಾಸವೂ ಪ್ರದಶ೯ನಗೊಳ್ಳಲಿದೆ ಮತ್ತು ಸ್ಪಧೆ೯ಯಲ್ಲಿಯೂ ಭಾಗವಹಿಸಲಿದೆ. ಹಿಂದೂ ಸಾಂಪ್ರದಾಯಿಕ ಜೀವನದ ಹಿನ್ನೆಲೆಯನ್ನು ಇಟ್ಟುಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದ್ದು, ಸುಮಾರು 80 ಮನೆಗಳು ಇದರಲ್ಲಿವೆ. ಕೂಡುಕುಟುಂಬಕ್ಕೆ ಅನುಕೂಲವಾಗುವಂತೆ ಈ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ.       ಈ ಕಟ್ಟಡದೊಳಗೇ ಒಂದು ಸುಂದರ ಕೈದೋಟವಿದೆ, ಆರ್ಟಿಫಿಶಿಯಲ್ ಬೀಚ್ ಇದೆ. ಬೋರ್ ಎನಿಸಿದಾಗ ಆಟವಾಡು