Posts

Showing posts from March, 2011

ವಿಜ್ಞಾನ`ಗರ್ಭ'ದಲಿ `ಭರವಸೆ'ಯ ಕುಡಿ

Image
ಕೆಲವೊಂದು ಬಾರಿ ಸೃಷ್ಟಿಯಾದ ಪ್ರಕೃತಿಯಲ್ಲಿ (ಸ್ತ್ರೀಯಲ್ಲಿ) ಲೋಪವಿರುತ್ತದೆ ಅಥವಾ ಪುರುಷನಲ್ಲಿ ದೋಷವಿರುತ್ತದೆ. ಅದು ಸೃಷ್ಟಿಯ ವೈಪರೀತ್ಯ. ಹಾರ್ಮೋನುಗಳ ವ್ಯತ್ಯಾಸ, ಮಾತಾಪಿತರಿಂದ ಹರಿದುಬಂದ ವಂಶವಾಹಿಗಳ ಅಸಮರ್ಥತೆ... ಪರಿಹಾರ ಕಂಡುಹಿಡಿಯಲೇಬೇಕೆಂಬ ತುಡಿತದಲ್ಲಿ, ಯೋಚನೆಗಳನ್ನು, ಚಿಂತನೆಗಳನ್ನು ಹೊತ್ತು ಸಂಶೋಧನಾ ಪಥದಲ್ಲಿ ಬೆಳೆಯುತ್ತಿದ್ದ ವಿಜ್ಞಾನಗರ್ಭದಲ್ಲಿ ಭರವಸೆಯ ಬೆಳಕೊಂದು ಚಿಮ್ಮಿದೆ. ಅಸಮರ್ಥತೆಗೊಂದು ಸಮರ್ಥ ಪರಿಹಾರ ಕಂಡುಕೊಳ್ಳುವ ಹಾದಿಯ ಶೋಧವಾಗಿದೆ.

ಆನುವಂಶಿಕ ರೋಗಗಳಿಗೆ ಪರಿಹಾರ ದೊರಕೀತೆ?

Image
ನ್ಯೂರೋಡಿಜನರೇಟಿವ್ ಡಿಸೀಸ್ಗೆ  ಒಳಗಾದ ರೋಗಿಗಳಲ್ಲಿ ಪ್ರೋಗ್ರಾನುಲಿನ್ ಅತ್ಯಲ್ಪ ಪ್ರಮಾಣದಲ್ಲಿ ಸ್ರವಿಸುತ್ತದೆ. ಹೀಗಾಗಿ ಅಪಾಪ್ಟಿಸ್ ನಿಯಂತ್ರಣಕ್ಕೆ ಬರುವುದಿಲ್ಲ. ಕೋಶಗಳು ಒಂದರ ಹಿಂದೊಂದರಂತೆ ಸ್ಫೋಟಕ್ಕೆ ಒಳಗಾಗಲಾರಂಭಿಸುತ್ತವೆ. ಹೊಸ ಕೋಶಗಳು ಹುಟ್ಟಿಕೊಳ್ಳುವ ಮೊದಲೇ ಸಾವಿರಾರು ಕೋಶಗಳು ನಶಿಸಿ ಹೋಗುತ್ತವೆ. ಆನುವಂಶಿಕವಾಗಿ ಹರಡುವ ಕಾಯಿಲೆಗಳು ಹಲವಾರಿವೆ. ಇವಕ್ಕೆಲ್ಲ ಕಾರಣವೇನು? ಆ ರೋಗಗಳನ್ನೂ ಗುಣಪಡಿಸುವ ವಿಧಾನವನ್ನು, ಅದಕ್ಕೆ ಅಗತ್ಯವಿರುವ ಔಷಧಿಯನ್ನು ಅಭಿವೃದ್ಧಿಪಡಿಸಬೇಕಿದೆ. ಇವೆಲ್ಲ ಯಾವತ್ತು ಸಾಧ್ಯವಾಗುತ್ತದೆಯೋ? 

ಅಣು ಅಣುವೂ ಮೃತ್ಯುಪಾಶದಂತೆ....

Image
ಗರ್ಭದಲ್ಲಿರುವ ಶಿಶು ಬೆಳೆಯಬೇಕು, ಅದಕ್ಕೊಂದು ಸುಂದರ ರೂಪ ಬೇಕು ಎಂದಾದರೆ ಗರ್ಭಕ್ಕೆ ಯಾವ ಅಪಾಯವೂ ಆಗಕೂಡದು. ಆದಿಶಕ್ತಿಯ ಗರ್ಭದಲ್ಲಿರುವ ನಾವು ಕೂಡಾ ಬೆಳೆಯಬೇಕು- ಗರ್ಭಕ್ಕೆ ಹಾನಿಯಾಗದಂತೆ. ಪ್ರಸ್ತುತ ಆದಿಶಕ್ತಿಯ ಗರ್ಭದಲ್ಲಿ ಆಗುತ್ತಿರುವುದು ನೈಸರ್ಗಿಕ ಬೆಳವಣಿಗೆಯೋ, ಕೃತಕವೋ? ಮುಂದಾಗಬೇಕಿರುವುದು ಸುಖ ಪ್ರಸವವೋ, ಅಬಾರ್ಷನ್ನೋ?

ವಿಶ್ವ ಕನ್ನಡ ಸಮ್ಮೇಳನಕ್ಕೆ ಅಕ್ಷರ ನಮನ....

Image
ವಿಶ್ವ ಕನ್ನಡ ಸಮ್ಮೇಳನಕ್ಕೆವಿಶೇಷ ಪುರವಣಿ ಮಾಡ್ತಿದ್ದೇವೆ ಒಂದು ಪುಟಕ್ಕಾಗುವಷ್ಟು ದೊಡ್ಡ ಲೇಖನ ಬೇಕು ಎಂದು ಹೊಸದಿಗಂತದಿಂದ ಕರೆ ಬಂದಾಗ ಅರೆ ಕ್ಷಣ ಯೋಚಿಸಿದ್ದೆ- ಇರುವುದು ಅತ್ಯಲ್ಪ ಸಮಯ. ಅದರಲ್ಲಿ ಏನು ಮಾಡೋಣ ಅಂತ. ಆದ್ರೆ ಅಂತಃಸ್ಪುರಣದಿಂದ ಲೇಖನವೊಂದು ಹೊಮ್ಮಿತು. ಹೇಗಾಗಿದೆಯೋ?- ಓದುಗರು ಹೇಳ್ಬೇಕು, ವಿಶ್ವ ಕನ್ನಡ ಸಮ್ಮೇಳನದ ಶುಭ ಸಂದರ್ಭದಲ್ಲಿ ಕನ್ನಡ ಮಾತೆಗೆ ಅಕ್ಷರ ನಮನ ಸಲ್ಲಿಸಿದ ತೃಪ್ತಿ ನನಗಿದೆ.

ಜಗದಲ್ಲಿ ನಿರಂತರ ವಿದ್ಯುತ್...

Image
೦೯ ಮಾರ್ಚ್ ೨೦೧೧

ಹರಾಜಾಗಿವೆ ಗ್ರಹಗಳು...

Image
೦೨ ಮಾರ್ಚ್ ೨೦೧೧