Posts

Showing posts with the label light

ಇಂಥ ಸಂಶೋಧನೆಗಳು ಬೇಕಾ?

Image
ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.

ನಿರ್ವಾತದಲ್ಲಿ ಬೆಳಕಿನ ಸೃಷ್ಟಿ!

Image
ಕಾಂತವಲಯದ ದಿಕ್ಕನ್ನು ಪ್ರತಿ ಸೆಕೆಂಡಿಗೆ ಹಲವು ಬಿಲಿಯನ್ ಬಾರಿ ಬದಲಾಯಿಸುವ ಮೂಲಕ ವಿಜ್ಞಾನಿಗಳು ಈ ವಿಶೇಷ ಫಲಕವನ್ನು ಸೃಷ್ಟಿಸಿದ್ದಾರೆ. ಆದರೂ ಸಹ ಈ ಫಲಕವು ಬೆಳಕಿನ ವೇಗದ ಶೆಕಡಾ 25ರಷ್ಟು ವೇಗದಲ್ಲಷ್ಟೇ ಚಲಿಸುವುದಕ್ಕೆ ಸಾಧ್ಯವಾಯಿತು. ಆದಾಗ್ಯೂ ಇಷ್ಟು ವೇಗದಲ್ಲಿ ಫಲಕ ಚಲಿಸುತ್ತಿದ್ದ ಕಾರಣದಿಂದಾಗಿ ನಿರ್ವಾತದಲ್ಲಿ ಸೃಷ್ಟಿಯಾಗುತ್ತಿದ್ದ ಬೆಳಕಿನ ಕಣಗಳನ್ನು ಅರ್ಥಾತ್ ಜೊತೆ ಜೊತೆಯಾಗಿ (ಅವಳಿಗಳು) ಸೃಷ್ಟಿಯಾಗುತ್ತಿದ್ದ ಫೋಟಾನ್ಗಳನ್ನು ಗುರುತಿಸಿ ಅವುಗಳ ಗುಣಲಕ್ಷಣಗಳನ್ನು ಅಳೆಯುವುದಕ್ಕೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ನಿರ್ವಾತ ಎಂದರೆ ಸಂಪೂರ್ಣ ಖಾಲಿ ಎಂದರ್ಥವಲ್ಲ. ಅಲ್ಲಿ ಮಿಂಚಿ ಮರೆಯಾಗುಂಥ ಫೋಟಾನ್ಗಳಿರುತ್ತವೆ. ಅಂದರೆ ವರ್ಚುವಲ್ ಅಥವಾ ಭ್ರಾಮಕ ಫೋಟಾನ್ಗಳಿರುತ್ತವೆ. ಈ ರೀತಿ ನಿರ್ವಾತದಲ್ಲಿ ಸೃಷ್ಟಿಯಾಗುವಂಥ ವರ್ಚುವಲ್ ಫೋಟಾನ್ಗಳು ಅಥವಾ ಭ್ರಾಮಕ ಫೋಟಾನ್ಗಳನ್ನು ಬಹುತೇಕ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂಥ ಫಲಕದಿಂದ ಪ್ರತಿಫಲಿಸುವಂತೆ ಮಾಡಿದರೆ ನೈಜ ಫೋಟಾನ್ಗಳ ಅರ್ಥಾತ್ ಬೆಳಕಿನ ಸೃಷ್ಟಿಯಾಗುತ್ತದೆ.

ಕ್ಯಾಂಡಲ್ ಬೆಳಕಿನಲ್ಲಿ ವಜ್ರವಿದೆ...!

Image
ಈ ಕೆಇಬಿಯವ್ರು ಎಷ್ಟು ಹೊತ್ತಿಗೆ ಪವರ್ ಕಟ್ ಮಾಡ್ತಾರೋ ಹೇಳೋದಕ್ಕೆ ಬರೋದಿಲ್ಲ. ಏನ್ ಮಾಡೋದು, ಮನೆಯಲ್ಲಿ ಕ್ಯಾಂಡಲ್ಲೋ, ಸೀಮೆಣ್ಣೆ ದೀಪಾನೋ ರೆಡಿ ಇರ್ಲೇ ಬೇಕು. ಹೆಚ್ಚಿನವ್ರು ಕ್ಯಾಂಡಲ್ ತಂದಿಟ್ಕೊಳ್ಳೋದನ್ನೇ ಇಷ್ಟಪಡ್ತಾರೆ. ಯಾವ ಟೈಮಲ್ಲಿ ಕರೆಂಟ್ ಹೋದ್ರೂ ಸಹ ಛಕ್ಕಂತ ಕ್ಯಾಂಡಲ್ ಉರಿಸಿ ಮನೆಯನ್ನು ಬೆಳಗುತ್ತಾರೆ. ಅದೆಷ್ಟೋ ವಷ೯ಗಳಿಂದ ನಾವು ಕ್ಯಾಂಡಲ್ ಜೊತೆ ಅವಿನಾಭಾವ ನಂಟಿ ಬೆಸೆದುಕೊಂಡಿದ್ದೇವೆ. ಕ್ಯಾಂಡಲ್ ನಲ್ಲಿರೋ ಮಹಿಮೆ ಮಾತ್ರ ಈಗ ವೈಜ್ಞಾನಿಕ ಜಗತ್ತಿನಿಂದ ಬೆಳಕಿಗೆ ಬರುತ್ತಾ ಇದೆ. ಏನಪ್ಪಾ ಅಂಥಾ ಮಹಿಮೆ ಅಂತ ನೀವು ಕೇಳ್ಬಹುದು. ವಜ್ರಗಳು, ಅದೇ ಡೈಮಂಡ್ಸ್! ಕ್ಯಾಂಡಲ್ ಮತ್ತು ವಜ್ರಕ್ಕೆ ಎತ್ತಣಿಂದೆತ್ತ ಸಂಬಂಧ? ಈ ಕ್ಯಾಂಡಲ್ಲೋ ಮೇಣ, ಸ್ವಲ್ಪ ಜಾಸ್ತಿ ಒತ್ತಿದ್ರೆ ಪುಡಿಯಾಗುವಂಥದ್ದು. ಆದ್ರೆ ವಜ್ರವನ್ನು ಪುಡಿ ಮಾಡುವುದಕ್ಕೆ ವಜ್ರವೇ ಆಗಬೇಕು. ಹಾಗಿರುವಾಗ ಕ್ಯಾಂಡಲ್ ಮತ್ತು ವಜ್ರಕ್ಕೆ ಸಂಬಂಧ ಇದೆ ಅಂತ ಹೇಳಿದ್ರೆ? ಪ್ರಶ್ನೆಗಳು ಸಹಜ, ಇದಕ್ಕೆ ಉತ್ತರ ಬೇಕೇ? ಮುಂದೆ ಓದಿ- ಕ್ಯಾಂಡಲ್ ಉರಿಯುತ್ತಿರಬೇಕಾದರೆ ಅಸಂಖ್ಯಾತ ವಜ್ರದ ಕಣಗಳು ಸಿಡಿಯುತ್ತವೆ ಎಂಬ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರತಿ ಸೆಕೆಂಡಿಗೆ ಸುಮಾರು 15 ಲಕ್ಷ ವಜ್ರದ ಕಣಗಳು ಉರಿಯುತ್ತಿರುವ ಕ್ಯಾಂಡಲ್ ನಿಂದ ಸಿಡುಯುತ್ತವೆ. ಕ್ಯಾಂಡಲ್ ಬೆಳಕಿನಲ್ಲಿ ಏನಿದೆ ಎಂದು ಕುತೂಹಲದಿಂದ ಸಂಶೋಧನೆ ನಡೆಸಿದಂಥ ಸೇಂಟ್ ಆಂಡ್ರೂಸ್ ಯೂನಿವಸಿ೯ಟಿಯ ವಿಜ್ಞಾನ...