Posts

Showing posts with the label obesity

ಯುಎಸ್ಬಿ ಟೂಥ್ ಬ್ರಶ್ ಬಂದಿದೆ ಗೊತ್ತಾ?

Image
ಅಲ್ಲಾ ಸ್ವಾಮಿ, ಕಾಲ ಎಲ್ಲಿಗೆ ಬಂತು ಅಂತೀನಿ! ಮನುಷ್ಯ ತನ್ನ ಕೆಲ್ಸಗಳನ್ನು ತಾನೇ ಮಾಡಿಕೊಳ್ಳುವುದರಿಂದ ವಿಮುಖನಾಗುತ್ತಲೇ ಇದ್ದಾನೆ. ಅಥಾ೯ತ್ ಪಕ್ಕಾ ಸೋಮಾರಿಯಾಗುತ್ತಿದ್ದಾನೆ. ಬಟ್ಟೆ ತೊಳೆಯೋದಕ್ಕೂ ಮೆಷಿನ್ ಬೇಕು. ನಾಲ್ಕೆಜ್ಜೆ ಇಟ್ಟರೆ ತಲುಪಬಹುದಾದಂಥ ಸ್ಥಳಗಳಿಗೆ ತಲುಪೋದಕ್ಕೂ ಮೆಷಿನ್ ಬೇಕು. ಮನೆಕೆಲಸಗಳನ್ನು ಮಾಡ್ಕೊಡೋದಕ್ಕೂ ಒಂದು ರೋಬಟ್ ಮೆಷಿನ್ನು! ಇದುವರೆಗೆ ಈ ಮನುಷ್ಯ ತನ್ನ ಹಲ್ಲುಗಳನ್ನು ತಾನೇ ಉಜ್ಕೋತಾ ಇದ್ದ. ಇನ್ನೂ ಆ ಕೆಲ್ಸ ಕೂಡಾ ಆತ ಮಾಡೋಲ್ಲ. ಸುಮ್ನೇ ಬಾಯಿ "ಆ..." ಮಾಡಿಕೊಟ್ರೆ ಸಾಕು ಮೆಷಿನ್ನು ಹಲ್ಲುಜ್ಜುತ್ತೆ! ಆಶ್ಚಯ೯ ಬೇಡ, ಇದು ನಿಜ. ಇಂಥದ್ದೊಂದು ಟೂಥ್ ಬ್ರಶ್ ಮೆಷಿನ್ನಿನ ಬಗ್ಗೆ ಅಂತಜಾ೯ಲದಲ್ಲಿ ಮಾಹಿತಿ ಸಿಕ್ಕಾಗ ಅದನ್ನು ನನ್ನ ಮಿತ್ರರಿಗೂ ಹೇಳ್ಬೇಕು ಅನ್ನಿಸ್ತು ನೋಡಿ. ನಿಮ್ಗೆ ಯುಎಸ್ಬಿ ಬ್ಲೂಟೂಥ್, ಯುಎಸ್ಬಿ ಮೌಸ್, ಯುಎಸ್ಬಿ ಕೀಬೋಡ್೯.... ಇಂಥ ಕಂಪ್ಯೂಟರ್ ಭಾಷೆ ಕೇಳಿ ಗೊತ್ತು. ಇದೇ ಥರ ಈಗ ಯುಎಸ್ಬಿ ಟೂಥ್ ಬ್ರಶ್ ಬಂದಿದೆ. ಹಾಗಂತ ಇದೇನೂ ಕಂಪ್ಯೂಟರ್, ಲ್ಯಾಪ್ ಟಾಪ್ ಇಂಥ ಕಂಪ್ಯೂಟರ್ ಕುಟುಂಬದ ಮೆಷಿನ್ನುಗಳ ಹಲ್ಲು ಉಜ್ಜೋದಕ್ಕೆ ಇರುವಂಥದ್ದಲ್ಲ. ಸಾಕ್ಷಾತ್, ಈ ಮೆಷಿನ್ನುಗಳನ್ನೆಲ್ಲ ಕಂಡುಹಿಡಿದಂಥ ಮನುಷ್ಯನ ಹಲ್ಲುಗಳನ್ನೇ ಉಜ್ಜೋದಕ್ಕೆ ಇರುವಂಥದ್ದು. ಅಂದಹಾಗೆ, ಈ ಟೂಥ್ ಬ್ರಶ್ಶನ್ನು ಕಂಡುಹಿಡಿದದ್ದು ಸಾಧಾರಣ ಕಂಪನಿಯಲ್ಲ, ಜಗತ್ತಿನಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿರುವಂಥ ಫಿಲ...

ಮಕ್ಕಳು ತಿನ್ನುವ ಆಹಾರ ಅಮ್ಮನ ಮೇಲೆ ಅವಲಂಬಿತ

Image
ನಿಮ್ಮ ಮಕ್ಕಳು ಹಸಿರು ಆಹಾರವನ್ನೇ ಹೆಚ್ಚಾಗಿ ತಿನ್ನಬೇಕೆ? ಹಾಗಿದ್ದರೆ ಗಭಿ೯ಣಿಯಾಗಿದ್ದಾಗಲೇ ಹಸಿರು ಆಹಾರ ಮಾತ್ರ ತಿನ್ನಿ! ಹೀಗಂತ ಅಮೆರಿಕದ ವಿಜ್ಞಾನಿಗಳು ಸಂಶೋಧನೆ ನಡೆಸಿ ಅಮೆರಿಕದ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ಅಮೆರಿಕದ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳು ಸಸ್ಯಾಹಾರಿಗಳಾಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ಮಕ್ಕಳು ಸಸ್ಯಾಹಾರಕ್ಕೆ ಒಗ್ಗಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಇದಕ್ಕೆ ಪರಿಹಾರವೆಂದರೆ ಹೆಣ್ಣು ಮಕ್ಕಳು ಗಭಿ೯ಣಿಯಾಗಿದ್ದಾಗಲೇ ಸಸ್ಯಾಹಾರವನ್ನು ತಿನ್ನುವುದು ಎನ್ನುತ್ತದೆ ಸಂಶೋಧನೆ. ಅಷ್ಟಕ್ಕೂ ಸಸ್ಯಾಹಾರದ ಮೇಲೆ ವಿದೇಶಿಯರಿಗೆ ಅಷ್ಟೊಂದು ವ್ಯಾಮೋಹ ಯಾತಕ್ಕೆ? ನಾವು ಹೇಗೆ ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗಿ ಅವರನ್ನು ಅನುಕರಣೆ ಮಾಡುತ್ತಿದ್ದೇವೆಯೋ ಅವರೂ ಹಾಗೆಯೇ ನಮ್ಮನ್ನು ನೋಡಿ ಕಲಿತಿದ್ದಾರೆ. ಆದರೆ ಇಲ್ಲೊಂದು ವ್ಯತ್ಯಾಸವಿದೆ. ನಮ್ಮದು ಅಂಧಾನುಕರಣೆ, ಅವರು ಹಾಗಲ್ಲ, ನಮ್ಮ ಪ್ರತಿಯೊಂದು ಪದ್ಧತಿಯಲ್ಲೂ ಇರುವಂಥ ವೈಜ್ಞಾನಿಕ ಸತ್ಯಗಳನ್ನು ಅನ್ವೇಷಿಸಿ, ಸತ್ಯ ಕಂಡುಕೊಂಡು ಬಳಿಕ ಅದನ್ನು ಅನುಸರಿಸುತ್ತಿದ್ದಾರೆ. ಅವರ ಸಸ್ಯಾಹಾರ ಪ್ರೀತಿಗೆ ಇಷ್ಟೇ ಕಾರಣ ಅಲ್ಲ. ಮಾಂಸಾಹಾರದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ಇದೇ ಕಾರಣಕ್ಕೆ ಅಮೆರಿಕದಂಥ ದೇಶಗಳಲ್ಲಿನ ಶೇ.40ರಷ್ಟು ಜನ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬೊಜ್ಜನ್ನು ಹೇಗಾದರೂ ಕರಗಿಸಿಕೊಳ್ಳಬೇಕು ಎಂದು ಚಿಂತಿಸಿದ ಅವರಿ...

ರೋಗಗಳ ಗೂಡಾಗುತ್ತಿದೆ ಯುವಶಕ್ತಿ

Image
* 20 ವರ್ಷಕ್ಕೇ ಮಧುಮೇಹ, ಬೊಜ್ಜು, ಬಿಪಿ;  ಆರೋಗ್ಯದ ಬಗ್ಗೆ ಕಾಳಜಿಯಿಲ್ಲ * ನಗರ ಪ್ರದೇಶದ ಯುವಕರಲ್ಲೇ ಹೆಚ್ಚು ಸಮಸ್ಯೆ;   ಯುವತಿಯರಲ್ಲಿ ಬೊಜ್ಜಿನ ಪ್ರಮಾಣ ಅಧಿಕ ದೇಶದ ಜೀವಾಳ ಎಂದೇ ಪರಿಗಣಿಸಲ್ಪಡುವ ಯುಶಕ್ತಿ ರೋಗಗಳ ಗೂಡಾಗುತ್ತಿದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಗಳೆಲ್ಲ ಇಂದು 20 ವರ್ಷದ ಯುವಕರಲ್ಲೇ ಕಾಣಿಸಿಕೊಳ್ಳುತ್ತಿವೆ. ಮಧುಮೇಹ, ಬೊಜ್ಜು, ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತಿತರ ಹಲವಾರು ಸಮಸ್ಯೆಗಳಿಂದ ದೇಶದ ಯುವಶಕ್ತಿ ನರಳುತ್ತಿದೆ. ಯುವಶಕ್ತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಅಂದಹಾಗೆ ಇಂದು (ಆಗಸ್ಟ್ 12) ಅಂತಾರಾಷ್ಟ್ರೀಯ ಯುವ ದಿನ. ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವದಿನವೆಂದು ಪರಿಗಣಿತವಾಗಿರುವುದು ಆಗಸ್ಟ್ 12. ಇಂತಹ ಸಮಯದಲ್ಲಿ ಯುವಶಕ್ತಿ ಹಾದಿ ತಪ್ಪುತ್ತಿರುವುದರ ಬಗ್ಗೆ ಯೋಚಿಸಲೇಬೇಕಾದ ಅನಿವಾರ್ಯತೆಯಿದೆ. ಈ ಹಿಂದಿನ ದಿನಗಳಲ್ಲಿ ದೇಶದಲ್ಲಿ ಬೊಜ್ಜಿನ ಪ್ರಮಾಣ ಶೇ.2ರಷ್ಟಾಗಿತ್ತು. ಆದರೆ ಈಗ ಇದು ಶೇ.20-25ಕ್ಕೆ ಏರಿಕೆಯಾಗಿದೆ. ಭಾರತದ ಶೇ..25ರಷ್ಟು ಯುವಕರು ಇಂದು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿನ ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪ್ರಾಯವ...