Posts

Showing posts with the label vajra

ಕ್ಷೀರಪಥದಲ್ಲೊಂದು ವಜ್ರಕಾಯ!

Image
ಈ ಗ್ರಹವನ್ನು ಇಡಿ ಇಡಿಯಾಗಿ ತಂದರೂ ಭೂಮಿಯ ಮೇಲಿರುವ ಎಲ್ಲ ದೇಶಗಳೂ ಶ್ರೀಮಂತವಾಗಬಹುದು! ಯಾಕೆ ಅಂತೀರಾ? ಇದು ಸಂಪೂಣ೯ವಾಗಿ ವಜ್ರಗಳಿಂದಲೇ ತುಂಬಿರುವಂಥ ಗ್ರಹ.    ಹೌದು, ಇಂಥದ್ದೊಂದು ಕಾಯ ನಮ್ಮ ಕ್ಷೀರಪಥ ಗೆಲಾಕ್ಸಿಯಲ್ಲಿಯೇ ಪತ್ತೆಯಾಗಿದೆ. ಮೆಲ್ಬನಿ೯ನ ಸ್ವಿನ್ ಬನ್೯ ಯೂನಿವಸಿ೯ಟಿ ಆಫ್ ಟೆಕ್ನಾಲಜಿಯ ಪ್ರೋವೈಸ್ ಛಾನ್ಸೆಲರ್ ಪ್ರೊ. ಮ್ಯಾಥ್ಯೂ ಬೇಲ್ಸ್ ಸಾರಥ್ಯದಲ್ಲಿನ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಈ ಕಾಯವನ್ನು ಪತ್ತೆ ಮಾಡಿದೆ. ಆಸ್ಟ್ರೇಲಿಯಾ, ಜಮ೯ನಿ, ಬ್ರಿಟನ್, ಇಟಲಿ ಮತ್ತು ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಈ ಕಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಲ್ಲವೇ? ಮುಂದೆ ಓದಿ-    ಕ್ಷೀರಪಥದಲ್ಲೇ ಇರುವಂಥ ಪಲ್ಸಾರ್ ಎಂದು ಕರೆಯಲ್ಪಡುವ ಒಂದು ಪುಟ್ಟ ನಕ್ಷತ್ರ. ಪಲ್ಸಾರ್ ಗಳೆಂದರೆ ಸುಮಾರು 20 ಕಿಲೋ ಮೀಟರ್ ವ್ಯಾಸದ ಪುಟ್ಟ ನಕ್ಷತ್ರಗಳು. ಈ ನಕ್ಷತ್ರಗಳು ಸದಾ ರೇಡಿಯೋ ತರಂಗಗಳನ್ನು ಹೊರಹೊಮ್ಮಿಸುತ್ತಲೇ ಇರುತ್ತವೆ. ಈ ನಕ್ಷತ್ರ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಇರುವಾಗ ಹೊರಹೊಮ್ಮುವಂಥ ರೇಡಿಯೋ ತರಂಗಗಳು ಭೂಮಿ ಸೇರಿದಂತೆ ಎಲ್ಲ ಆಕಾಶಕಾಯಗಳತ್ತಲೂ ಚಿಮ್ಮುತ್ತವೆ. ಇದೇ ರೇಡಿಯೋ ತರಂಗಗಳನ್ನು ಗುರುತಿಸುವ ಮೂಲಕ ವಿಜ್ಞಾನಿಗಳು ವಜ್ರಕಾಯವನ್ನು ಪತ್ತೆ ಮಾಡುವಲ್ಲಿ ಯಸಸ್ವಿಯಾಗಿದ್ದಾರೆ. ಈ ನಕ್ಷತ್ರಕ್ಕೆ ವಿಜ್ಞಾನಿಗಳು ಇಟ್ಟಂಥ ಹೆಸರು- ಪಿ ಎಸ್ ಆರ್ ಜೆ1719...

ಕ್ಯಾಂಡಲ್ ಬೆಳಕಿನಲ್ಲಿ ವಜ್ರವಿದೆ...!

Image
ಈ ಕೆಇಬಿಯವ್ರು ಎಷ್ಟು ಹೊತ್ತಿಗೆ ಪವರ್ ಕಟ್ ಮಾಡ್ತಾರೋ ಹೇಳೋದಕ್ಕೆ ಬರೋದಿಲ್ಲ. ಏನ್ ಮಾಡೋದು, ಮನೆಯಲ್ಲಿ ಕ್ಯಾಂಡಲ್ಲೋ, ಸೀಮೆಣ್ಣೆ ದೀಪಾನೋ ರೆಡಿ ಇರ್ಲೇ ಬೇಕು. ಹೆಚ್ಚಿನವ್ರು ಕ್ಯಾಂಡಲ್ ತಂದಿಟ್ಕೊಳ್ಳೋದನ್ನೇ ಇಷ್ಟಪಡ್ತಾರೆ. ಯಾವ ಟೈಮಲ್ಲಿ ಕರೆಂಟ್ ಹೋದ್ರೂ ಸಹ ಛಕ್ಕಂತ ಕ್ಯಾಂಡಲ್ ಉರಿಸಿ ಮನೆಯನ್ನು ಬೆಳಗುತ್ತಾರೆ. ಅದೆಷ್ಟೋ ವಷ೯ಗಳಿಂದ ನಾವು ಕ್ಯಾಂಡಲ್ ಜೊತೆ ಅವಿನಾಭಾವ ನಂಟಿ ಬೆಸೆದುಕೊಂಡಿದ್ದೇವೆ. ಕ್ಯಾಂಡಲ್ ನಲ್ಲಿರೋ ಮಹಿಮೆ ಮಾತ್ರ ಈಗ ವೈಜ್ಞಾನಿಕ ಜಗತ್ತಿನಿಂದ ಬೆಳಕಿಗೆ ಬರುತ್ತಾ ಇದೆ. ಏನಪ್ಪಾ ಅಂಥಾ ಮಹಿಮೆ ಅಂತ ನೀವು ಕೇಳ್ಬಹುದು. ವಜ್ರಗಳು, ಅದೇ ಡೈಮಂಡ್ಸ್! ಕ್ಯಾಂಡಲ್ ಮತ್ತು ವಜ್ರಕ್ಕೆ ಎತ್ತಣಿಂದೆತ್ತ ಸಂಬಂಧ? ಈ ಕ್ಯಾಂಡಲ್ಲೋ ಮೇಣ, ಸ್ವಲ್ಪ ಜಾಸ್ತಿ ಒತ್ತಿದ್ರೆ ಪುಡಿಯಾಗುವಂಥದ್ದು. ಆದ್ರೆ ವಜ್ರವನ್ನು ಪುಡಿ ಮಾಡುವುದಕ್ಕೆ ವಜ್ರವೇ ಆಗಬೇಕು. ಹಾಗಿರುವಾಗ ಕ್ಯಾಂಡಲ್ ಮತ್ತು ವಜ್ರಕ್ಕೆ ಸಂಬಂಧ ಇದೆ ಅಂತ ಹೇಳಿದ್ರೆ? ಪ್ರಶ್ನೆಗಳು ಸಹಜ, ಇದಕ್ಕೆ ಉತ್ತರ ಬೇಕೇ? ಮುಂದೆ ಓದಿ- ಕ್ಯಾಂಡಲ್ ಉರಿಯುತ್ತಿರಬೇಕಾದರೆ ಅಸಂಖ್ಯಾತ ವಜ್ರದ ಕಣಗಳು ಸಿಡಿಯುತ್ತವೆ ಎಂಬ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರತಿ ಸೆಕೆಂಡಿಗೆ ಸುಮಾರು 15 ಲಕ್ಷ ವಜ್ರದ ಕಣಗಳು ಉರಿಯುತ್ತಿರುವ ಕ್ಯಾಂಡಲ್ ನಿಂದ ಸಿಡುಯುತ್ತವೆ. ಕ್ಯಾಂಡಲ್ ಬೆಳಕಿನಲ್ಲಿ ಏನಿದೆ ಎಂದು ಕುತೂಹಲದಿಂದ ಸಂಶೋಧನೆ ನಡೆಸಿದಂಥ ಸೇಂಟ್ ಆಂಡ್ರೂಸ್ ಯೂನಿವಸಿ೯ಟಿಯ ವಿಜ್ಞಾನ...

ವಜ್ರವೂ ಆವಿಯಾಗುತ್ತೆ ಗೊತ್ತ?!

Image
ಭೂಮಿಯ ಮೇಲೆ ಯಾವುದೂ ಶಾಶ್ವತವಲ್ಲವೇ? ಅತ್ಯಂತ ಕಠಿಣವಾದ ವಸ್ತು ಅನ್ನಿಸಿಕೊಂಡ ವಜ್ರ ಶಾಶ್ವತವಾಗಿರಬಹುದು ಎಂದು ಹೇಳುವಿರಾದರೆ ಅದು ತಪ್ಪು ಎನ್ನುತ್ತಾರೆ ವಿಜ್ಞಾನಿಗಳು. ಸದಾ ಸೂರ್ಯನ ಬೆಳಕಿಗೆ ತೆರೆದುಕೊಂಡಿದ್ದರೆ ವಜ್ರವು ನಿಧಾನಕ್ಕೆ ತನ್ನಷ್ಟಕ್ಕೆ ತಾನು ಆವಿಯಾಗುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ.       ಮೆಕಾರಿ ವಿಶ್ವವಿದ್ಯಾಲಯದ ಫೋಟಾನಿಕ್ ರಿಸರ್ಚ್ ಸೆಂಟರ್ನ ರಿಚರ್ಡ್ ಮಿಲ್ಡ್ರನ್ ನೇತೃತ್ವದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ಇವರು ಒಂದು ಹರಳನ್ನು ಸತತವಾಗಿ ನೇರಳಾತೀತ ಕಿರಣಗಳಿಗೆ ಒಡ್ಡಿದಾಗ ಆ ಹರಳು ಕರಗಿ ಆವಿಯಾಗುವುದು ಕಂಡುಬಂತು. ಅದೇ ರೀತಿ ವಜ್ರವೂ ಆವಿಯಾಗುವುದನ್ನು ಇವರು ಕಂಡುಕೊಂಡಿದ್ದಾರೆ. ಇತರ ಬೆಳಕಿನ ಕಿರಣಗಳಿಗೆ ಅಂದರೆ ತೀವ್ರವಲ್ಲದ ಕಿರಣಗಳಿಗೆ ಒಡ್ಡಿದಾಗ ವಜ್ರ ಆವಿಯಾಗುವ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಆದರೆ ಈ ಆವಿಯಾಗುವ ಪ್ರಕ್ರಿಯೆ ಮಾತ್ರ ಕಂಡು ಬಂದಿತ್ತು. ಯಾವುದೇ ರೀತಿಯ ಬೆಳಕಿನ ಕಿರಣಗಳಿಗೆ ತೆರೆದುಕೊಂಡರೂ ಸಹ ವಜ್ರವು ಆಯಾ ಬೆಳಕಿನ ಕಿರಣಗಳ ತೀವ್ರತೆಗೆ ಅನುಗುಣವಾಗು ಕರಗಿ ಆವಿಯಾಗುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು. ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತ? ವಜ್ರನ ಆಭರಣಗಳನ್ನು ಧರಿಸುವವರಿಗೆ ಈ ವಿಷಯ ತಿಳಿಸಬೇಕೆಂದು! ನಾವು ಧರಿಸುವ ಯಾವುದೇ ಆಭರಣವಾದರೂ ಸಹ ಅದು ಬೆಳಕಿನ ಸ್ಪರ್ಶಕ್ಕೆ ಸಹಜವಾಗಿಯೇ ಒಳಗಾಗುತ್ತದೆ. `ವಜ್ರದ ಆಭರಣ ನನ್ನಲ್ಲಿ ಯಾವತ್ತೂ ಇರುತ್ತೆ' ಅಂ...