Posts

Showing posts from July, 2013

ಕೋತಿಗಳ ಸಾಮಾಜಿಕ ಸಂವಹನ...!

Image
ಫೇಸ್‌ಬುಕ್ , ಟ್ವಿಟರ್ ಅಂದಾಕ್ಷಣ ನಮ್ಮ ಮನಸು ಖುಷ್ ಖುಷ್ ಆಗುತ್ತೆ . ಸೋಶಿಯಲ್ ನೆಟ್‌ವರ್ಕಿಂಗ್ ಇರಲೇಬೇಕು , ಅದೇ ನಮ್ಮನ್ನು ಉಲ್ಲಸಿತರನ್ನಾಗಿ ಇರಿಸೋದು ಅಂತ ಮನಸು ಕೂಗಿ ಹೇಳುತ್ತೆ . ಹಾಗಂತ ಈ ಸಾಮಾಜಿಕ ಸಂಪರ್ಕ ತಾಣಗಳು ತಲತಲಾಂತರ ವರ್ಷಗಳಿಂದ ಮಾನವ ಜೀವನದ ಅವಿಭಾಜ್ಯ ಅಂಶವಾಗಿ ಬಂದದ್ದೇನೂ ಅಲ್ಲ . ಇಂಟರ್‌ನೆಟ್ ಯುಗದಲ್ಲಿ ಕಂಪ್ಯೂಟರ್ ಬಿಟ್ಟು ಕದಲುವುದಕ್ಕೇ ಸಾಧ್ಯವಿಲ್ಲದಷ್ಟು ಬ್ಯುಸಿಯಾಗಿರುವ ಮಾನವ ಜೀವಿಗಳ ನಡುವಿನ ಸಂಪರ್ಕದ ಕೊಂಡಿಯಾಗಿ ಈ ಅಂತರ್ಜಾಲ ತಾಣಗಳು ಬಳಕೆಯಾಗುತ್ತಿವೆ ಅಷ್ಟೆ ! ಹಾಗಂತ ‘ಸಾಮಾಜಿಕ ಸಂವಹನ’ ಈಚೀಚೆಗಿನ ವಿಚಾರವೇನೂ ಅಲ್ಲ . ಮಾನವನ ಪೂರ್ವಜರೆನ್ನಿಸಿಕೊಂಡಿರುವ ಕೋತಿಗಳು ಸಾವಿರಾರು ವರ್ಷಗಳಿಂದ ಸಾಮಾಜಿಕ ಸಂವಹನ ನಡೆಸುತ್ತಿವೆ . ಇದರ ಮೂಲಕವೇ ಪರಸ್ಪರ ಕ್ಷಿಪ್ರ ಸಂವಹನ ಬೆಳೆಸಿಕೊಂಡು ಜೀವನ ಸಾಗಿಸುತ್ತವೆಯಂತೆ ! ಸೇಂಟ್ ಆ್ಯಂಡ್ರೂಸ್ ಯೂನಿವರ್ಸಿಟಿಯ ಆ್ಯಂಡ್ರೂ ವೈಟೆನ್ ನೇತೃತ್ವದ ಸಂಶೋಧಕರ ತಂಡ ಕೋತಿಗಳ ಸಾಮಾಜಿಕ ಸಂವಹನ ಕಲೆಯನ್ನು ಗುರುತಿಸಿದೆ . ಕೋತಿಗಳ ಜೀವನದ ಪ್ರತಿಯೊಂದು ಕ್ಷಣ , ಘಟ್ಟವೂ ಸಾಮಾಜಿಕ ಸಂವಹನಗಳನ್ನು ಆಧರಿಸಿರುತ್ತದೆ . ಅವುಗಳ ನಡತೆಯನ್ನೂ ಈ ಸಂವಹನವೇ ರೂಪಿಸುತ್ತದೆ . ಯಾವುದೇ ಒಂದು ಹೊಸ ಸಂಗತಿ ಒಂದು ಕೋತಿಯ ಗಮನಕ್ಕೆ ಬಂದರೂ ಅದು ತಕ್ಷಣವೇ ಕೋತಿಗಳ ಸಮೂಹದಲ್ಲಿ ಪಸರಿಸುತ್ತದೆ . ಇದು ಅವುಗಳಲ್ಲಿರುವ ಸಾಮಾಜಿಕ ಸಂವಹನದ ಪ್ರಭಾವ ಎಂಬುದು ಸಂಶೋಧಕರ ಅಂಬೋಣ .