ಪುರುಷರಿಗೆ ಗರ್ಭನಿರೋಧಕ: ಮತ್ತೊಂದು ಅವಾಂತರವೇ?
ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು ಕೊಲಂಬಿಯಾ ಯೂನಿವ ರ್ಸಿ ಟಿಯ ವೈದ್ಯ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ಜಗತ್ತಿನ ಪ್ರಥಮ ಸ್ಟಿರಾಯಿಡ್ ರಹಿತ ಗರ್ಭನಿರೋಧಕ ಗುಳಿಗೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಆದರೆ ಗರ್ಭನಿರೋದಕ್ಕೆ ಸಂಬಂಧಿಸಿದಂತೆ ನಡೆಯುವ ಒಂದೊಂದು ಸಂಶೋಧನೆಗಳು ಕೂಡಾ ಯುವ ಸಮುದಾಯವನ್ನು ಪ್ರಚೋದಿಸಿದಂತಾಗುವುದಿಲ್ಲವೇ? ಈ ವಿಚಾರವಾಗಿ ಗಟ್ಟಿ ಚಿಂತನೆಯ ಅಗತ್ಯವಿದೆ. ಬೇಕು ಬೇಕಾದ ವಿಷಯಗಳನ್ನು ತಿಳಿದುಕೊಳ್ಳು ಟಿವಿ, ಇಂಟ ರ್ನೆ ಟ್. ತಿಳಿದುಕೊಂಡ ವಿಷಯಗಳ ಬಗ್ಗೆ ಪ್ರಾಕ್ಟಿಕಲ್ ಜ್ಞಾನ (?) ಸಂಪಾದಿಸುವ ಹುಚ್ಚು. ಜೊತೆಗೆ ಹರೆಯದ ಆಕರ್ಷಣೆ. ಈ ಕ್ಷಣದಲ್ಲಿ ಸಂಗಾತಿ ಬೇಕೇ ಬೇಕು ಎಂಬ ದಾಹ, ನಂತರದ ಕ್ಷಣದಲ್ಲಿ ಏನೇ ಆದರೂ ಚಿಂತಿಲ್ಲ. ಹಾಗೂ ಒಂದುವೇಳೆ ದಾಹ ಹೆಚ್ಚಾದರೂ ಸಮಸ್ಯೆಯಾಗದಂತ ಸಲಕರಣೆಗಳು, ಗುಳಿಗೆಗಳು ಇರುವಾಗ ಚಿಂತೆ ಮಾಡೋದಕ್ಕೆ ಯಾರು ಹೋಗ್ತಾರೆ? 18 ವರ್ಷಕ್ಕಿಂತ ಚಿಕ್ಕವರಿಗೆ ಇವುಗಳನ್ನೆಲ್ಲ ಕೊಡಬಾರದು ಎಂಬ ಕಾನೂನು ಇದ್ದರೂ ಸಹ `ಕಾನೂನುಗಳು ಇರುವುದೇ ಉಲ್ಲಂಘಿಸುವುದಕ್ಕೆ' ಎಂದು ತಿಳಿದುಕೊಂಡವರೇ ಹೆಚ್ಚು. ಅದರಲ್ಲೂ ಗರ್ಭನಿರೋಧಕ ಗುಳಿಗೆಗಳು ಆ ಸಮಯದಲ್ಲಿ `ಅದ್ಭುತ' ಎನ್ನಿಸಿದರೂ ಅದು ಉಂಟುಮಾಡುವ ಅಡ್ಡಪರಿಣಾಮಗಳನ್ನು ನಿವಾರಿಸಿಕೊಳ್ಳುವುದಕ್ಕೆ ಒಂದು ಜನ್ಮವಂತೂ ಸಾಲದು. ಇಂತಿರುವಾಗ ಪುರುಷರಿಗಾಗಿಯೇ ವಿಶೇಷ ಗರ್ಭನಿರೋಧಕ ಗುಳಿಗೆಗಳನ್ನು ಕೊಲಂಬಿಯಾ ಯೂನಿವ ರ್ಸಿ ...