ತಮಾಷೆಯಲ್ಲ, ಇನ್ನೇನಿದ್ರೂ ವೈರ್ಲೆಸ್ ಕರೆಂಟ್ ಕಾಲ!
* ಮೆಟಾಮೆಟೀರಿಯಲ್ಗಳಿಂದ ಇದು ಸಾಧ್ಯ * ಉತ್ತರ ಕೆರೋಲಿನಾ ಎಂಜಿನಿಯರ್ಗಳಿಂದ ಈ ಸಾಧನೆ ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವುದಕ್ಕೆ ಯರೋಸ್ಲಾವ್ ಅವರ ತಂಡ ಬಳಸಿಕೊಂಡದ್ದು ಮೆಟಾಮೆಟೀರಿಯಲ್ಗಳನ್ನು. ಅದೃಶ್ಯ ಗಂಟೆ (ಇನ್ವಿಸಿಬಲ್ ಕ್ಲಾಕ್)ಯನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿರುವ ವಸ್ತುಗಳೇ ಮೆಟಾಮೆಟೀರಿಯಲ್ಗಳು. ಸಾಮಾನ್ಯವಾಗಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುವಾಗ ಭಾರೀ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ. ಮೆಟಾಮೆಟೀರಿಯಲ್ಗಳಲ್ಲಿ ಆ ಸಮಸ್ಯೆ ಇಲ್ಲ. ವಿಷ್ಣುಪ್ರಿಯ ಬೆಂಗಳೂರು: ಎಲ್ಲಿ ನೋಡಿದ್ರೂ ವೈರ್ಲೆಸ್ ಫೋನ್, ವೈರ್ಲೆಸ್ ಇಂಟರ್ನೆಟ್, ವೈರ್ಲೆಸ್ ಡಾಟಾ ಟ್ರಾನ್ಸ್ಫರ್... ಹೀಗೆ ಎಲ್ಲವೂ ವೈರ್ಲೆಸ್ ಆಗುತ್ತಿರುವ ಈ ಕಾಲದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ವೈರ್ಲೆಸ್ ತಂತ್ರಜ್ಞಾನವನ್ನು ಅಪೇಕ್ಷಿಸುವುದು ತಪ್ಪಲ್ಲ. ಹೊಸ ಸುದ್ದಿ ಎಂದರೆ ಈ ವೈರ್ಲೆಸ್ ವಿಚಾರ ನಂಬಲೇ ಅಸಾಧ್ಯವಾದ ಕ್ಷೇತ್ರವೊಂದಕ್ಕೆ ಕಾಲಿಟ್ಟಿದೆ. ಅದು ವಿದ್ಯುತ್ ಕ್ಷೇತ್ರ. ವಿದ್ಯುತ್ ಪ್ರಸರಣಕ್ಕೆ ದೊಡ್ಡ ದೊಡ್ಡ ತಂತಿಗಳು ಅನಿವಾರ್ಯ. ಈಗಲೂ ಇದನ್ನೇ ನಂಬಲೇಬೇಕು. ಆದರೆ ಸಂಶೋಧಕರು ಸುಮ್ಮನೇ ಕುಳಿತುಕೊಳ್ಳುವುದಿಲ್ಲವಲ್ಲ? ಏನಾದರೊಂದು ಆವಿಷ್ಕಾರ ನಡೆಸುತ್ತಲೇ ಇರುವ ವೈಜ್ಞಾನಿಕ ಜಗತ್ತು ಇದೀಗ ವಿದ್ಯುತ್ತನ್ನು ಕೂಡಾ ತಂತಿ ಇಲ್ಲದೇ ಪ್ರಸಾರ ಮಾಡುವ ಸಾಧನೆಗೆ ಕೈ ಹಚ್ಚಿದೆ. ಈ ದಿಶೆಯಲ್ಲಿ ಯಶಸ್ಸು ಸಾಧಿಸಿದೆ ಕೂಡಾ. ಉತ್ತರ ಕೆರೋಲಿನಾದ ಡ್ಯೂ...