Posts

Showing posts with the label nasa

ನಮ್ ಸೂರ್ಯ ಹೀಗಿದ್ದಾನಾ?

Image
ಆಕಾಶದಲ್ಲಿ ಅದ್ಯಾರೋ ಇಟ್ಟು ಬಂದಂಥ ಹಣ್ಣೋ ಎಂಬಂತೆ ಕಾಣುವ ಸೂರ್ಯ ನಿಜವಾಗಿಯೂ ಹೇಗೆಲ್ಲಾ ಕಾಣ್ತಾನೆ? ಸೂರ್ಯ ಅಷ್ಟೊಂದು ಬೆಳಕು ಕೊಡ್ತಾನಲ್ಲ, ಅದೆಷ್ಟು ಬೆಂಕಿ ಹೊತ್ತಿಕೊಂಡಿರಬಹುದು ಯೋಚಿಸಿ. ನಮ್ಮ ಕಣ್ಣಿಗೆ ಆತನ ಒಡಲಲ್ಲಿ ನಡೆಯುವಂಥ ಪ್ರಕ್ರಿಯೆಗಳು ಕಾಣಿಸುವುದೇ ಇಲ್ಲ. ಸೂರ್ಯನ ಒಡಲಲ್ಲಿ ನಡೆಯುವಂಥ ಕ್ರಿಯೆಗಳನ್ನು ನೋಡಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ವಿಜ್ಞಾನಿಗಳಿಗೂ ಈ ಸೂರ್ಯನನ್ನು ಕಂಡ್ರೆ ಅದೊಂಥರ ಪ್ರೀತಿ. ಈ ಬೆಂಕಿಯುಂಡೆಯ ರಹಸ್ಯಗಳನ್ನು ತಿಳಿದುಕೊಳ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ನಾಸಾ ಸೋಲಾರ್ ಡೈನಾಮಿಕ್ಸ್ ಅಬ್ಸರವೇಟರಿ ಸ್ಯಾಟಲೈಟನ್ನು ಉಡಾಯಿಸಿತ್ತು. ಆ ಉಪಗ್ರಹ ಈಗ ಸೂರ್ಯನ ಅಂತರಾಳವನ್ನು ಅರಿತುಕೊಂಡು, ಅದರ ಚಿತ್ರಗಳನ್ನು ಕಳುಹಿಸಿದೆ.   ಈ ಉಪಗ್ರಹವು ಪ್ರತಿದಿನ ಸುಮಾರು 1.5 ಟೆರಾಬೈಟ್ ನಷ್ಟು ದಾಖಲೆಗಳನ್ನು ವಿಜ್ಞಾನಿಗಳಿಗೆ ಕಳುಹಿಸಿಕೊಡುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ವಿಜ್ಞಾನಿಗಳು ಸೂರ್ಯನ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 1.5 ಟೆರಾಬೈಟ್ ಅಂದರೆ ಎಷ್ಟಾಗುತ್ತೆ ಗೊತ್ತೆ? ಎಂಪಿ3 ಪ್ಲೇಯರಿನಲ್ಲಿ 5 ಲಕ್ಷ ಹಾಡುಗಳನ್ನು ತುಂಬಿಸಿದಷ್ಟು. ಈ ಉಪಗ್ರಹವನ್ನು 2010ರ ಫೆಬ್ರುವರಿಯಲ್ಲಿ ಉಡಾವಣೆ ಮಾಡಲಾಗಿತ್ತು. 5 ವರ್ಷದ ಯೋಜನೆಯಲ್ಲಿ ಈ ಉಪಗ್ರಹವು ಸೂರ್ಯನ ಕಾಂತವಲಯವನ್ನು ಅಧ್ಯಯನ ನಡೆಸಲಿದ್ದು, ಸೂರ್ಯ ಹೇಗೆ ಕಾರ್ಯಾಚರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು...

ಇಬ್ಬರು ಸೂಯ೯ರ ಮುದ್ದಿನ ಗ್ರಹ!

Image
ಆ ಲೋಕದಲ್ಲಿ ಒಬ್ಬ ಸೂಯ೯ ಉದಯಿಸಿದ ಬೆನ್ನಲ್ಲೇ ಇನ್ನೊಬ್ಬ ಸೂಯ೯ ಉದಯಿಸುತ್ತಾನೆ. ಮೊದಲ ಸೂಯ೯ನೊಂದಿಗೇ ಗಿರಕಿ ಹೊಡೆಯುತ್ತಾನೆ. ಆ ಸೂಯ೯ ನಡುನೆತ್ತಿಗೆ ಬಂದಾಗ ಇವನೂ ನಡುನೆತ್ತಿಗೆ ಬರುತ್ತಾನೆ. ಆ ಸೂಯ೯ ಮುಳುಗುವುದೇ ತಡ ಈ ಸೂಯ೯ನೂ ಮುಳುಗುತ್ತಾನೆ. ಈ ಇಬ್ಬರೂ ಸೂಯ೯ರಿಗೆ ಒಂದು ಮುದ್ದಿನ ಗ್ರಹವಿದೆ. ಆ ಗ್ರಹಕ್ಕೆ ಎರಡೆರಡು ಸೂಯೋ೯ದಯ ಎರಡೆರಡು ಸೂಯಾ೯ಸ್ತ ನೋಡುವಂಥ ಭಾಗ್ಯ. ಯಾರಿಗುಂಟು? ಯಾರಿಗಿಲ್ಲ?   30 ವಷ೯ಗಳ ಹಿಂದೆ ತೆರೆ ಕಂಡಂಥ ಹಾಲಿವುಡ್ ಚಿತ್ರ ಸ್ಟಾರ್ ವಾರ್ಸ್ ನೋಡಿದವರಿಗೆ ಇದು ಅದರದ್ದೇ ಕಥೆ ಎನಿಸಬಹುದು. ಆದರೆ ಇದು ಕಥೆಯಲ್ಲ, ವಾಸ್ತವ. ಇಂಥದ್ದೊಂದು ಲೋಕವನ್ನು ನಾಸಾದ ಕೆಪ್ಲರ್ ಬಾಹ್ಯಾಕಾಶ ಮಿಶನ್ ಪತ್ತೆ ಮಾಡಿದೆ. ಭೂಮಿಯಿಂದ 200 ಜ್ಯೋತಿವ೯ಷ೯ (1 ಜ್ಯೋತಿವ೯ಷ೯ ಅಂದರೆ 9460730472580.8 ಕಿಲೋ ಮೀಟರ್) ದೂರದಲ್ಲಿ ಈ ಗ್ರಹ ಮತ್ತು ಸೂಯ೯ರು ಇದ್ದಾರೆ.   ಈ ಗ್ರಹವು ಸಾಕಷ್ಟು ತಂಪಾಗಿದೆ ಮತ್ತು ಅನಿಲಗಳಿಂದ ತುಂಬಿದೆ. ಆದರೆ ಅಲ್ಲಿ ಜೀವಾಸ್ತಿತ್ವ ಇರುವುದು ಕಷ್ಟ. ಆದಾಗ್ಯೂ, ವಾಸಯೋಗ್ಯ ವಾತಾವರಣ ಇದೆ. ಹೀಗಾಗಿ ಅಲ್ಲಿ ಜೀವಿಗಳನ್ನು ಪತ್ತೆ ಮಾಡುವುದಕ್ಕೆ ಅಥವಾ ಜೀವಿಗಳು ವಾಸಿಸುವುದು ಸಾಧ್ಯವೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಬಹುದು ಎಂದಿದ್ದಾರೆ ವಿಜ್ಞಾನಿಗಳು. ಈ ಗ್ರಹದ ಒಂದು ವಿಶೇಷವೆಂದರೆ ಇದು ಸೂಯ೯ರ ಸುತ್ತ ಪರಿಭ್ರಮಿಸುವುದಕ್ಕೆ ನಿಖರವಾದ ಕಾಲಮಾನವಿಲ್ಲ. ಅಂದರೆ, ನಮ್ಮ ಭೂಮಿ ಸೂಯ೯ನ ಸುತ್ತ ಪ...