ಬಂದಿದೆ ಹಿಗ್ಗಿಸಬಲ್ಲ ಬ್ಯಾಟರಿ!
ಒಂದು ಕಾಲದಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಗಳಂಥ ಬ್ಯಾಟರಿಗಳನ್ನು ಜನ ಬಳಸುತ್ತಿದ್ದರು . ತಂತ್ರಜ್ಞಾನ ಅಭಿವೃದ್ಧಿಯಾದಂತೆ ಬ್ಯಾಟರಿ ಗಾತ್ರ ಕಡಿಮೆಯಾಗುತ್ತಾ , ಸಾಮರ್ಥ್ಯ ಹೆಚ್ಚಾಗತೊಡಗಿತು . ಮೊಬೈಲ್ ಫೋನ್‌ಗಳ ಬಂದ ಆರಂಭದಲ್ಲಿ ಬಳಸುತ್ತಿದ್ದ ಬ್ಯಾಟರಿಗಳಿಗೂ ಈಗಿನ ಮೊಬೈಲ್‌ಗಳಲ್ಲಿ ಬಳಸುತ್ತಿರುವ ಬ್ಯಾಟರಿಗೂ ಹೋಲಿಕೆ ಮಾಡಿದರೆ ಬ್ಯಾಟರಿ ಉತ್ಪಾದನಾ ಕ್ಷೇತ್ರದಲ್ಲಾದ ತಂತ್ರಜ್ಞಾನ ಕ್ರಾಂತಿ ಎಂಥಾದ್ದು ಎಂಬುದು ವಿದಿತವಾಗುತ್ತದೆ . ಕಾಗದದ ಹಾಳೆಯಷ್ಟು ತೆಳ್ಳಗಿನ ಬ್ಯಾಟರಿಗಳು ಬಂದಿದ್ದು , ಬ್ಯಾಟರಿ ಕ್ಷೇತ್ರದಲ್ಲಿನ ಸಂಶೋಧನೆಗಳ ಓಘವೂ ಹೆಚ್ಚಾಗುತ್ತಿದೆ . ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಟರಿಗಳ ಪಟ್ಟಿಗೊಂದು ಹೊಸ ಸೇರ್ಪಡೆ ! ಅದು - ಬೇಕಾದಂತೆ ಹಿಗ್ಗಿಸಬಲ್ಲ ಮತ್ತು ಮೂಲಸ್ವರೂಪಕ್ಕೇ ಕುಗ್ಗಿಸಬಲ್ಲ ಬ್ಯಾಟರಿ ! ಈ ಬ್ಯಾಟರಿಯನ್ನು ಸಂಶೋಧನೆ ಮಾಡಿದ್ದು ಅಮೆರಿಕದ ಷಿಕಾಗೋದ ಇಲಿನೋಯಿಸ್‌ನಲ್ಲಿರುವ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಯೋಂಗಂಗ್ ಹಾಂಗ್ ಮತ್ತು ಯೂನಿವರ್ಸಿಟಿ ಆಫ್ ಇಲಿನೋಯಿಸ್‌ನ ಜಾನ್ ಎ . ರೋಗರ್ಸ್ . ಲೀಥಿಯಂ ಅಯಾನ್ ಬ್ಯಾಟರಿ ಇದಾಗಿದ್ದು , ಈ ಬ್ಯಾಟರಿಯಲ್ಲಿನ ಎಲೆಕ್ಟ್ರೋ ? ಗಳು ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿವೆ . ಅಷ್ಟೇ ಇವುಗಳನ್ನು ಚಾರ್ಜ್ ಮಾಡುವುದಕ್ಕಾಗಿ ಕೇಬಲ್ ಬಳಸಬೇಕೆಂದೂ ಇಲ್ಲ . ಎಲೆಕ್ಟ್ರೋ ? ಗಳು ಹಿಗ್ಗುವ ಗುಣ ಹೊಂದಿರುವುದರಿಂದಾಗಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಲು ಸಾ...