ಕ್ರೀಡಾಳುಗಳ `ಸಡತ್ ಡೆತ್'ಗೆ ಸಿಕ್ಕಿದೆ ಪರಿಹಾರ!
* ಇಸ್ರೇಲ್ ನ ಸಂಶೋಧಕರಿಂದ ಸಮಸ್ಯೆಯ ಮೂಲ ಪತ್ತೆ * ಮೊದಲೇ ಚಿಕಿತ್ಸೆ ಪಡೆದರೆ ಕ್ರೀಡಾಳು ಮೈದಾನದಲ್ಲೇ ಸಾಯುವ ಪ್ರಸಂಗ ಬರದು 2004 ರ ಡಿಸೆಂಬರ್ 5ನೇ ತಾರೀಕು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೂಟ್ಬಾಲ್ ಪಂದ್ಯ ನಡೆಯುತ್ತಿತ್ತು. ಅತ್ಯಂತ ಕುತೂಹಲದ ಘಟ್ಟದಲ್ಲಿ ಪಂದ್ಯ ಪೈಪೋಟಿಯಿಂದ ಸಾಗುತ್ತಿದ್ದಾಗ ಗೋವಾದ ಡೆಂಪೋ ಸ್ಪೋರ್ಟ್ಸ್ ಕ್ಲಬ್ ಪರ ಆಡುತ್ತಿದ್ದ ಕ್ರಿಸ್ಟಿಯಾನೋ ಡಿ ಲಿಮಾ (ಕ್ರಿಸ್ಟಿಯಾನೋ ಜೂನಿಯರ್) ಏಕಾಏಕಿ ಕುಸಿದು ಬಿದ್ದ. ಇದಕ್ಕೆ ನೆಪ ಎದುರಾಳಿ ಮೋಹನ್ ಬಗಾನ್ ತಂಡದ ಗೋಲ್ ಕೀಪರ್ ಗೆ ಡಿಕ್ಕಿ ಹೊಡೆದದ್ದು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದ ಕ್ರಿಸ್ಟಿಯಾನೋ. ಕ್ರಿಸ್ಟಿಯಾನೋ ಸಾವಿಗೆ ಎದುರಾಳಿ ಆಟಗಾರನಿಗೆ ಡಿಕ್ಕಿ ಹೊಡೆದದ್ದು ಕಾರಣವಲ್ಲ. ಆತನಿಗೆ `ಸಡನ್ ಡೆತ್ ಸಿಂಡ್ರೋಮ್' ಇತ್ತು. ಈ ಘಟನೆ ರಾಜ್ಯದ ಕ್ರೀಡಾಪ್ರೇಮಿಗಳ ಮನಸ್ಸಿನಿಂದ ಇನ್ನೂ ಮಾಸಿರಲಿಕ್ಕಿಲ್ಲ. ಇಂಥ ಘಟನೆಗಳು ಫೂಟ್ಬಾಲ್ ಕ್ಷೇತ್ರದಲ್ಲಿ ಹಲವಾರು. ಆಥ್ಲೀಟ್ ಗಳು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಪ್ರತಿ ವರ್ಷವೂ ನಡೆಯುತ್ತವೆ. ಈ ರೀತಿ ಕ್ರೀಡಾಳು ಮೃತಪಟ್ಟರೆ `ಸಾವಿಗೆ ಹೃದಯಾಘಾತ ಕಾರಣ' ಎಂಬ ವರದಿ ವೈದ್ಯರಿಂದ ಬರುತ್ತದೆ. ಸ್ಪಷ್ಟ ಕಾರಣ ಮತ್ತು ಕ್ರೀಡಾಳುಗಳು ಈ ರೀತಿ ಆಘಾತಕಾರಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಇದುವರೆಗೆ ರಹಸ್ಯವಾಗುಳಿದಿತ್ತು. ಇದೀಗ ಅದನ್ನು ...