Posts

Showing posts with the label sun

ನಮ್ ಸೂರ್ಯ ಹೀಗಿದ್ದಾನಾ?

Image
ಆಕಾಶದಲ್ಲಿ ಅದ್ಯಾರೋ ಇಟ್ಟು ಬಂದಂಥ ಹಣ್ಣೋ ಎಂಬಂತೆ ಕಾಣುವ ಸೂರ್ಯ ನಿಜವಾಗಿಯೂ ಹೇಗೆಲ್ಲಾ ಕಾಣ್ತಾನೆ? ಸೂರ್ಯ ಅಷ್ಟೊಂದು ಬೆಳಕು ಕೊಡ್ತಾನಲ್ಲ, ಅದೆಷ್ಟು ಬೆಂಕಿ ಹೊತ್ತಿಕೊಂಡಿರಬಹುದು ಯೋಚಿಸಿ. ನಮ್ಮ ಕಣ್ಣಿಗೆ ಆತನ ಒಡಲಲ್ಲಿ ನಡೆಯುವಂಥ ಪ್ರಕ್ರಿಯೆಗಳು ಕಾಣಿಸುವುದೇ ಇಲ್ಲ. ಸೂರ್ಯನ ಒಡಲಲ್ಲಿ ನಡೆಯುವಂಥ ಕ್ರಿಯೆಗಳನ್ನು ನೋಡಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ವಿಜ್ಞಾನಿಗಳಿಗೂ ಈ ಸೂರ್ಯನನ್ನು ಕಂಡ್ರೆ ಅದೊಂಥರ ಪ್ರೀತಿ. ಈ ಬೆಂಕಿಯುಂಡೆಯ ರಹಸ್ಯಗಳನ್ನು ತಿಳಿದುಕೊಳ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ನಾಸಾ ಸೋಲಾರ್ ಡೈನಾಮಿಕ್ಸ್ ಅಬ್ಸರವೇಟರಿ ಸ್ಯಾಟಲೈಟನ್ನು ಉಡಾಯಿಸಿತ್ತು. ಆ ಉಪಗ್ರಹ ಈಗ ಸೂರ್ಯನ ಅಂತರಾಳವನ್ನು ಅರಿತುಕೊಂಡು, ಅದರ ಚಿತ್ರಗಳನ್ನು ಕಳುಹಿಸಿದೆ.   ಈ ಉಪಗ್ರಹವು ಪ್ರತಿದಿನ ಸುಮಾರು 1.5 ಟೆರಾಬೈಟ್ ನಷ್ಟು ದಾಖಲೆಗಳನ್ನು ವಿಜ್ಞಾನಿಗಳಿಗೆ ಕಳುಹಿಸಿಕೊಡುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ವಿಜ್ಞಾನಿಗಳು ಸೂರ್ಯನ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 1.5 ಟೆರಾಬೈಟ್ ಅಂದರೆ ಎಷ್ಟಾಗುತ್ತೆ ಗೊತ್ತೆ? ಎಂಪಿ3 ಪ್ಲೇಯರಿನಲ್ಲಿ 5 ಲಕ್ಷ ಹಾಡುಗಳನ್ನು ತುಂಬಿಸಿದಷ್ಟು. ಈ ಉಪಗ್ರಹವನ್ನು 2010ರ ಫೆಬ್ರುವರಿಯಲ್ಲಿ ಉಡಾವಣೆ ಮಾಡಲಾಗಿತ್ತು. 5 ವರ್ಷದ ಯೋಜನೆಯಲ್ಲಿ ಈ ಉಪಗ್ರಹವು ಸೂರ್ಯನ ಕಾಂತವಲಯವನ್ನು ಅಧ್ಯಯನ ನಡೆಸಲಿದ್ದು, ಸೂರ್ಯ ಹೇಗೆ ಕಾರ್ಯಾಚರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು...

ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ನೀರಿನ ಆಗರ ಪತ್ತೆ!

Image
ನಮ್ಮ ಭೂಮಿಯಲ್ಲಿಯೇ ನೀರುರುವುದು, ನಾವೇ ಶ್ರೇಷ್ಠ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುತ್ತೇವೆ. ನಮಗಿಂತ ಹೆಚ್ಚು ಸಾಮಥ್ರ್ಯವುಳ್ಳವರು ಇಲ್ಲವೇ ಇಲ್ಲ ಎನ್ನುತ್ತೇವೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿರುತ್ತದಲ್ಲ? ಹೌದು, ನಮ್ಮ ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ಅಧಿಕ ನೀರುಳ್ಳಂಥ ಒಂದು ಲೋಕ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಖಗೋಳಶಾಸ್ತ್ರಜ್ಞರು ಈ ನೀರಿನ ಆಗರವನ್ನು ಪತ್ತೆ ಮಾಡಿದ್ದು ಇದು ನಮ್ಮ ಭೂಮಿಯಿಂದ ಸುಮಾರು 30 ಕೋಟಿ ಕೋಟಿ ಕೋಟಿ (30 ಬಿಲಿಯನ್ ಟ್ರಿಲಿಯನ್) ಮೈಲಿಗಳಷ್ಟು ದೂರದಲ್ಲಿದೆ. ಅಲ್ಲದೆ, ನಮ್ಮ ಸೂರ್ಯನಿಗಿಂತ 2000 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿದೆ. ಈ ಕ್ವಸ್ಸಾರ್ (ಕ್ವಾಸಿ-ಸ್ಟೆಲ್ಲಾರ್ ರೇಡಿಯೋ ಸೋರ್ಸ್ ಅಥವಾ ಗೆಲಾಕ್ಸಿಯ ನ್ಯೂಕ್ಲಿಯಸ್ ಅಥವಾ ಕೇಂದ್ರ) ನಮ್ಮ ಭೂಮಿಯಿಂದ ಅತಿ ದೂರದಲ್ಲಿರುವ ಕಾರಣ ಇಲ್ಲಿಂದ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು 1200 ಕೋಟಿ ವರ್ಷಗಳು ಬೇಕು. ವಿಜ್ಞಾನಿಗಳ ಲೆಕ್ಕದ ಪ್ರಕಾರ ಭೂಮಿಗೆ ಕೇವಲ 160 ಕೋಟಿ ವರ್ಷಗಳಿದ್ದಾಗ ಈ ಕ್ವಸ್ಸಾರ್ನ ಪತ್ತೆ ಸಿಕ್ಕಿದೆ, ಅಂದರೆ ಯೂನಿವರ್ಸ್ ಅಥವಾ ಬ್ರಹ್ಮಾಂಡ ಇನ್ನೂ ಹಳೆಯದು ಎಂದು ಹೇಳಿದಂತಾಗುತ್ತದೆ. ಅಷ್ಟೇ ಅಲ್ಲ ನೀರು ಕೇವಲ ಭೂಮಿಯಲ್ಲಿ ಮಾತ್ರ ಇರುವುದಲ್ಲ ಇದು ಸರ್ವವ್ಯಾಪಿ. ಯಾವುದೇ ಕಾಯಗಳಲ್ಲಿ ನೋಡಿದರೂ ಅಲ್ಲಿ ನೀರಿದ್ದೇ ಇದೆ. ಆದರೆ ಯಾವುದಾದರೂ ಒಂದು ರೂಪದಲ್ಲಿ ಈ ನೀರಿನ ಅಂಶವಿರಬಹುದು ಎಂಬುದು ಕೂಡಾ ಸ್...

ರಹಸ್ಯಗಳನ್ನು ಹುಡುಕತ್ತ...

Image
ಸೌರಮಂಡಲದ ತುದಿಯಲ್ಲಿ ನೀರಿನ ಗುಳ್ಳೆಗಳ್ಳಂಥ ಗುಳ್ಳೆಗಳಿವೆ. ಇವು 10 ಕೋಟಿ ಮೈಲಿಗಳಷ್ಟು ವಿಶಾಲವಾಗಿವೆ ಎಂಬುದನ್ನು ಕೂಡಾ ತಿಳಿಸಿದ್ದು ಇವೇ ವಾಯೇಜರ್ ನೌಕೆಗಳು. ಜಗತ್ತು ಹೇಗಿರಬಹುದು? ಎಂಬ ಕಲ್ಪನೆ ನಮ್ಮಲ್ಲಿ ವೇದ, ಪುರಾಣಗಳ ಕಾಲದಿಂದಲೂ ಬೆಳೆದು ಬಂದಿದೆ. ಆವಾಗ ಭೂಮಿಯಿಂದ ಬೇರೆ ಜಗತ್ತಿನತ್ತ ಚಲಿಸಲು ಈಗಿರುವಂಥ ರಾಕೆಟ್ಗಳಿರಲಿಲ್ಲ. ಗಗನನೌಕೆಗಳಿರಲಿಲ್ಲ. ಆದರೂ ಅಂದಿನ ದಿನಗಳಲ್ಲಿ ಹೇಳಿದ್ದು ಈಗ ಸತ್ಯವಾಗುತ್ತಿದೆ. ಹಾಗಿದ್ದರೆ ವೇದಗಳ ಕಾಲದಲ್ಲಿ ಜೀವಿಸಿದ್ದ ಜನರು ಯಾವ ಮಟ್ಟದ ಜ್ಞಾನವನ್ನು ಹೊಂದಿದ್ದರು? ಸಪ್ತ ಸಾಗರಗಳ ಬಗ್ಗೆ ವೇದಗಳು ಹೇಳುತ್ತವೆ. 14 ಲೋಕಗಳ ಬಗ್ಗೆಯೂ ನಮ್ಮ ಪುರಾಣಗಳಲ್ಲಿ ಪ್ರಸ್ತಾಪವಿದೆ.  ಈ ಪ್ರಪಂಚದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಏನೆಲ್ಲ ಇದೆ ಎಂಬ ಚಿಂತನೆ ಹಲವು ಕಾಲದಿಂದ ವಿಜ್ಞಾನಿಗಳ ಮನದಲ್ಲಿದೆ. ಅದರ ಬೆನ್ನು ಹತ್ತಿ ಹುಡುಕುವ ಪ್ರಯತ್ನಗಳೂ ನಡೆಯುತ್ತಿವೆ. ಭೂಮಿಯ ಹೊರತಾಗಿ ಬೇರೆ ಯಾವುದಾದದರೂ ಗ್ರಹಗಳು ವಾಸಕ್ಕೆ ಯೋಗ್ಯವಾಗಿವೆಯೇ? ಬೇರೆ ಯಾವುದಾದರೂ ಗ್ರಹಗಳಲ್ಲಿ ಜೀವಿಗಳಿವೆಯೇ? ಒಂದುವೇಳೆ ಇದ್ದದ್ದೇ ಆದಲ್ಲಿ ಆ ಅನ್ಯಗ್ರಹ ಜೀವಿಗಳು ಭೂಮಿಯನ್ನು ಮತ್ತು ನಮ್ಮನ್ನು ಗಮನಿಸುತ್ತಿರುವ ಸಾಧ್ಯತೆಗಳಿವೆಯೇ? ಎಂಬೆಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇಂಥದ್ದೇ ಪ್ರಯತ್ನವನ್ನು ನಡೆಸುತ್ತಿದೆ. ನಾಸಾದ ವಾ...