ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!
ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು. ಗರ್ಭಿಣಿಯೊಬ್ಬಳು ಪ್ರಸವಿಸಿದ ತಕ್ಷಣ ಆಕೆಯ ಕಡೆಯವರು ನೋಡುವುದು- ಮಗು ಗಂಡೋ ಹೆಣ್ಣೋ ಎಂದು. ಒಂದು ವೇಳೆ ಮಗು ಹೆಣ್ಣಾಗಿದ್ದರೆ ಮುಗಿಯಿತು ಅದರ ಕಥೆ! ಹೀಗೆಲ್ಲ ಆಗುತ್ತದೆಯೇ ಎಂಬ ಪ್ರಶ್ನೆ ಒಂದಷ್ಟು ವರ್ಗಗಳ ಜನರ ಮನಸ್ಸಿನಲ್ಲಿ ಮೂಡಬಹುದು. ಕಾರಣ- ಮಗು ಗಂಡಾಗಲಿ, ಹೆಣ್ಣಾಗಲಿ... ಸುಸೂತ್ರವಾಗಿ ಆದರೆ ಸಾಕು ಎಂದು ಭಾವಿಸುವ ಜನರಿದ್ದಾರೆ. ಮುಖ್ಯವಾಗಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣ ಭಾರತದ ಪರಿಸ್ಥಿತಿ ಹೀಗಿಲ್ಲ. ಗಂಡು ಮಗು ಮಾತ್ರ ನಮಗೆ ಬೇಕು ಎಂದು ಭಾವಿಸುವ ಅದೆಷ್ಟೋ ಜನ ಭಾರತದಲ್ಲಿದ್ದಾರೆ. ಮಗು ಹೆಣ್ಣು ಎಂದಾಕ್ಷಣ ಅದನ್ನು ಒಂದೋ ಸಾಯಿಸಿ ಬಿಡುತ್ತಾರೆ, ಇಲ್ಲವಾದಲ್ಲಿ ಬಿಟ್ಟು ಹೋಗುತ್ತಾರೆ. ಇದು ಹಳೇ ದಿನಗಳ ವಿಚಾರವಾಯಿತು. ಆದರೆ ಯಾವಾಗ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ವೈದ್ಯಲೋಕ ಬಳಸಿಕೊಳ್ಳಲಾರಂಭಿಸಿತೋ ಅಂದಿನಿಂದ ಹೆಣ್ಣು ಮಗು...