Posts

Showing posts with the label ane

ಬುದ್ಧಿವಂತಿಕೆ ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಇರುತ್ತೆ!

Image
ಮನುಷ್ಯ ತನ್ನನ್ನು ತಾನು ತೀರಾ ಬುದ್ಧಿವಂತ ಅಂದುಕೊಂಡುಬಿಟ್ಟಿದ್ದಾನೆ. ಆದರೆ ಪ್ರಾಣಿಗಳಿಗೂ ಬುದ್ಧಿ ಇದೆ, ಅವುಗಳಿಗೆ ನಮ್ಮ ರೀತಿಯಲ್ಲಿ ಸಂವಹನ ನಡೆಸುವುದಕ್ಕೆ ಗೊತ್ತಿಲ್ಲದೇ ಇರಬಹುದು. ಆದರೆ ಅವುಗಳದ್ದೇ ಆದ ರೀತಿಯ ಸಂವಹನ ಇದೆ ಎಂಬುದನ್ನು ನಾವು ಬಹಳಷ್ಟು ಬಾರಿ ನಿಲ೯ಕ್ಷಿಸುತ್ತೇವೆ. ನಮ್ಮ ಕೈಗೆಟುಕದ ವಸ್ತುಗಳನ್ನು ಪಡೆಯುವುದಕ್ಕೆ ನಾವು ಏಣಿ ಬಳಸುತ್ತೇವೆ. ಸಾಕೆಂದಾದಲ್ಲಿ ಸ್ಟೂಲನ್ನಾದರೂ ಬಳಸುತ್ತೇವೆ. ಹೀಗೆ ಅಗತ್ಯ ಬಿದ್ದಲ್ಲೆಲ್ಲ ಉಪಕರಣಗಳನ್ನು ಬಳಸಿಕೊಳ್ಳುವ ಸಾಮಥ್ಯ೯ ನಮ್ಮಲ್ಲಿದೆ ಅಂತ ಮಾನವರಾದ ನಾವು ಅಹಂನಿಂದ ಬೀಗುತ್ತೇವೆ. ಮಾನವನ ಈ ಅಹಂಗೆ ಪೆಟ್ಟುಕೊಡುವಂಥ ಸಂಶೋಧನೆಯೊಂದು ನಡೆದಿದೆ. ಅದು- ಅಗತ್ಯ ಬಿದ್ದಾಗ ಉಪಕರಣಗಳನ್ನು. ಸಲಕರಣೆಗಳನ್ನು ಬಳಸಿಕೊಳ್ಳುವುದರಲ್ಲಿ ಆನೆಗಳೂ ಏನೂ ಕಮ್ಮಿಯಿಲ್ಲ! ಹಾಗಿದ್ದರೆ ಈ ಸಂಶೋಧನೆ ಏನು ಎಂಬ ಕುತೂಹಲ ಇದೆಯಲ್ಲವೇ? ಮುಂದೆ ಓದಿ- ಅದು ಖಂಡೂಲಾ. ಏಳು ವಷ೯ ಪ್ರಾಯದ ಏಷ್ಯನ್ ಆನೆ. ನ್ಯೂಯಾಕ್೯ ಸಿಟಿ ಯೂನಿವಸಿ೯ಟಿಯ ಹಂಟರ್ ಕಾಲೇಜಿನ ಸಂಶೋಧಕರು ಆನೆಯ ನಡವಳಿಕೆಯ ಬಗ್ಗೆ ಸಂಶೋಧನೆ ಮಾಡಬೇಕು ಎಂದುಕೊಂಡಾಗ ಅವರ ಪರೀಕ್ಷೆಗೆ ಒಳಪಟ್ಟದ್ದು ಇದೇ ಖಂಡೂಲಾ. ಈ ಸಂಶೋಧಕರು ಆನೆ ಮತ್ತು ಡಾಲ್ಫಿನ್ ಗಳ ಬುದ್ಧಿಮತ್ತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ವಾಷಿಮಂಗ್ಟನ್ ಡಿಸಿಯ ಪ್ರಾಣಿಸಂಗ್ರಹಾಲಯದಲ್ಲಿದ್ದ ಗಂಡಾನೆ ಖಂಡೂಲಾದ ಬುದ್ಧಿಮತ್ತೆ ಪರೀಕ್ಷಿಸಬೇಕು ಅನ್ನಿಸಿತು ಸಂಶೋಧಕರಿಗೆ. ಅದಕ್ಕಾಗಿ ಮ...