Posts

Showing posts from July, 2011

ಚೀನೀಯರು ಸಮುದ್ರದಾಳ ನೋಡಲು ಹೊರಟಿದ್ದಾರೆ...

Image
ಬಾಹ್ಯಾಕಾಶ ಯಾನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಸಮುದ್ರದಾಳದ ಬಗ್ಗೆ? ಅಲ್ಪ ಸ್ವಲ್ಪ ಗೊತ್ತಿದೆ. ಆದರೆ ಸಮುದ್ರ ಎಷ್ಟು ಆಳವಿದೆ? ಅದಕ್ಕೆ ಕೊನೆಯೆಂಬುದು ಇದೆಯಾ? ಇದ್ದರೆ ಆ ಕೊನೆಯಲ್ಲಿ ಏನಿದೆ? ಎಂಬೆಲ್ಲ ವಿಚಾರಗಳ ಬಗ್ಗೆ ಯಾರಲ್ಲಿಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಹೊರಟಿದ್ದಾರೆ ಚೀನಾ ಸಾಧಕರು! ಹೌದು, ಎಲ್ಲರೂ ಏನಾದರೂ ಸಾಧನೆ ಮಾಡುವುದಕ್ಕೆ ಹೊರಟರೆ ಚೀನೀಯರು ಯಾವತ್ತೂ ಬೇರೆಯದೇ ರೀತಿಯಲ್ಲಿ ಸಾಧನೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ತಮ್ಮದೇ ಆದ ಸಾಧನೆಗಳಿಂದ ಅವರು ಗುರುತಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲರ ಗಮನ ಬಾಹ್ಯಾಕಾಶದ ಕಡೆಗಿದ್ದರೆ ಸಮುದ್ರದ ಆಳವನ್ನು ನೋಡಲು ಹೊರಡುವ ಮೂಲಕ ಜಗತ್ತಿನ ಗಮನವನ್ನೇ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ. ಸಮುದ್ರ ಎಷ್ಟು ಆಳವಿದೆಯೋ ಗೊತ್ತಿಲ್ಲ. ಆದರೆ ಪ್ರಸ್ತುತ ನಾವು ಅಂದುಕೊಂಡಿರುವ ಪ್ರಕಾರ ಸಮುದ್ರ ಗರಿಷ್ಠ ಆಳವಾಗಿರುವುದು ಪೆಸಿಫಿಸಿಕ್ ಸಾಗರದಲ್ಲಿರುವ ಮರೀನಾ ಟ್ರೆಂಚ್ ಎಂಬಲ್ಲಿ. ಇಲ್ಲಿ ಸಮುದ್ರ 11,035 ಮೀಟರ್ ಆಳವಿದೆ. ಜಿಯಲಾಂಗ್ ಅಂಡರ್ವಾಟರ್ ಕ್ರಾಫ್ಟ್ ಹೆಸರಿನ ನೌಕೆಯ ಮೂಲಕ ಚೀನೀಯರು ಸಮುದ್ರದಾಳಕ್ಕೆ ಇಳಿಯಲಿದ್ದಾರೆ. 26 ಅಡಿ ಉದ್ದು ಈ ನೌಕೆಯ ಮೂಲಕ ಮುಂದಿನ ವರ್ಷ 7000 ಮೀಟರ್ ಆಳಕ್ಕೆ ಇಳಿಯಲಿದ್ದಾರೆ. ಈಗಾಗಲೇ ಇವರು 5,000 ಮೀಟರ್ ಆಳಕ್ಕೆ ಇಳಿದಿದ್ದಾರೆ. ನಂತರ 11,000 ಮೀಟರ್ಗಳಿಗೂ ಅಧಿಕ ಆಳಕ್ಕೆ

ಶನಿಯ ಉಪಗ್ರಹದಿಂದ ನೀರು ಚಿಮ್ಮುತ್ತೆ....!

Image
ಈ ಬ್ರಹ್ಮಾಂಡದಲ್ಲಿ ಎಲ್ಲೆಲ್ಲ ನೀರಿದೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ನಮ್ಮ ಸೌರಮಂಡಲದಲ್ಲೇ ಇರುವಂಥ ಯಾವ್ಯಾವ ಗ್ರಹಗಳಲ್ಲಿ ನೀರಿದೆ ಎಂಬ ಸಂಶೋಧನೆಗಳೂ ನಡೆದಿವೆ. ಶನಿಗ್ರಹದ 16 ಚಂದ್ರರಲ್ಲಿಯೂ (ಉಪಗ್ರಹಗಳು) ನೀರಿರುವ ಸಾಧ್ಯತೆಗಳಿವೆ ಎನ್ನುತ್ತದೆ ಒಂದು ಸಂಶೋಧನೆ. ಅದರಲ್ಲೂ ಮುಖ್ಯವಾಗಿ ಶನಿಯ ಪ್ರಮುಖ ಚಂದ್ರಾದ ಟೈಟಾನ್ ಮತ್ತು ಎನ್ಸಿಲಾಡಸ್ನಲ್ಲಿ ನೀರಿರುವವುದು ಖಚಿತವಾಗಿ ಈ ಹಿಂದೆಯೇ ತಿಳಿದು ಬಂದಿತ್ತು. ಇದೀಗ ಇನ್ನೂ ಒಂದು ಮಹತ್ವದ ವಿಚಾರವನ್ನು ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದು- ಶನಿಯ ಚಂದ್ರ ಎನ್ಸಿಲಾಡಸ್ ಸತತವಾಗಿ ನೀರನ್ನು ಚಿಮ್ಮುತ್ತಲೇ ಇರುತ್ತದೆ. ಈ ರೀತಿ ಈರು ಚಿಮ್ಮುವ ಕಾರಣ ಶನಿಗ್ರಹದ ಸುತ್ತಲೂ ನೀರಿನ ಕಣಗಳು ಹರಿದಾಡುತ್ತಿವೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಹರ್ಷಲ್ ಬಾಹ್ಯಾಕಾಶ ದೂರದರ್ಶಕ ತೆಗೆದಂತ ಚಿತ್ರಗಳನ್ನು ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ. ಎನ್ಸಿಲಾಡಸ್ ಪ್ರತಿ ಸೆಕೆಂಡಿಗೆ 250 ಕೆ.ಜಿ.ಯಷ್ಟು ನೀರನ್ನು ಚಿಮ್ಮುತ್ತದೆ. ಶನಿಯ ಸುತ್ತಲೂ ನೀರಿನ ಅಂಶಗಳಿವೆ ಎಂದು 1997ರಲ್ಲೇ ಕಂಡುಕೊಳ್ಳಲಾಗಿತ್ತು. ಆದರೆ ಆ ನೀರಿನ ಅಂಶ ಎಲ್ಲಿಂದ ಬರುತ್ತದೆ? ಹೇಗೆ ಬರುತ್ತದೆ? ಎಂಬುದನ್ನು ಅರಿತುಕೊಳ್ಳುವ ಸಲುವಾಗಿ ವಿಜ್ಞಾನಿಗಳ 14 ವರ್ಷಗಳ ಸತತ ಸಂಶೋಧನೆ ನಡೆಸಿದ್ದಾರೆ. ಇಂಥದ್ದೊಂದು ಪ್ರಕ್ರಿಯೆ ಬೇರಿನ್ನಾವ ಗ್ರಹಗಳಲ್ಲೂ ಕಂಡುಬರುವುದಿಲ್ಲ. ಶನಿಗ್ರಹದಲ್ಲಿ ನೀರಿನ ಅಂಶವಿದೆ ಎಂಬುದಾಗ

ಸಂತಾನಹೀನತೆಯ ಕಾರಣ ಶೋಧಿಸುತ್ತ....

Image
ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್  ಡಿಇಎಫ್ ಬಿ  126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?  `ಮಕ್ಕಳಿರಲವ್ವ ಮನೆತುಂಬ' ಎಂದರು ಹಿರಿಯರು. ಸುಮ್ಮನೇ ಹೇಳಿರುತ್ತಾರೆಯೇ? ಈ ಬಯಕೆಯ ಹಿಂದೊಂದು ವಾಸ್ತವವಿದೆ. ಮಕ್ಕಳು ಮನೆಯಲ್ಲಿದ್ದರೆ ಅದೆಷ್ಟೋ ನೋವುಗಳು ತಮ್ಮಷ್ಟಕ್ಕೇ ಶಮನಗೊಳ್ಳುತ್ತವೆ. ಮಗುವಿನ ಕಿಲಕಲ ನಗು, ಅದರ ಅಳು, ರಂಪಾಟ, ಅದರ ಚೇಷ್ಟೆಗಳು, ಆಟಗಳು... ಮಗುವಿನ ಒಂದೊಂದು ಕ್ಷಣದಲ್ಲೂ ಬೆರೆತುಕೊಂದಡರೆ ದೊಡ್ಡವರೂ ಕೂಡಾ ಮಕ್ಕಳೇ ಆಗುತ್ತಾರೆ! ಆ ಕಂದಮ್ಮಗಳೊಂದಿಗೆ ತಾವೂ ತೊದಲುನುಡಿಯಲ್ಲಿ ಮಾತನಾಡುತ್ತಾರೆ. ಮಕ್ಕಳೊಂದಿಗೆ ಕಳೆಯುವ ಆ ಕ್ಷಣಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವೇನೋ? ಮುದ್ದಾದ ಮಕ್ಕಳನ್ನು ಕಂಡಾಗ ಭಾವುಕರಾಗದವರು ಯಾರಿದ್ದಾರೆ? ಇಂಥದ್ದೇ ಒಂದು ಮ

ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ನೀರಿನ ಆಗರ ಪತ್ತೆ!

Image
ನಮ್ಮ ಭೂಮಿಯಲ್ಲಿಯೇ ನೀರುರುವುದು, ನಾವೇ ಶ್ರೇಷ್ಠ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುತ್ತೇವೆ. ನಮಗಿಂತ ಹೆಚ್ಚು ಸಾಮಥ್ರ್ಯವುಳ್ಳವರು ಇಲ್ಲವೇ ಇಲ್ಲ ಎನ್ನುತ್ತೇವೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿರುತ್ತದಲ್ಲ? ಹೌದು, ನಮ್ಮ ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ಅಧಿಕ ನೀರುಳ್ಳಂಥ ಒಂದು ಲೋಕ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಖಗೋಳಶಾಸ್ತ್ರಜ್ಞರು ಈ ನೀರಿನ ಆಗರವನ್ನು ಪತ್ತೆ ಮಾಡಿದ್ದು ಇದು ನಮ್ಮ ಭೂಮಿಯಿಂದ ಸುಮಾರು 30 ಕೋಟಿ ಕೋಟಿ ಕೋಟಿ (30 ಬಿಲಿಯನ್ ಟ್ರಿಲಿಯನ್) ಮೈಲಿಗಳಷ್ಟು ದೂರದಲ್ಲಿದೆ. ಅಲ್ಲದೆ, ನಮ್ಮ ಸೂರ್ಯನಿಗಿಂತ 2000 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿದೆ. ಈ ಕ್ವಸ್ಸಾರ್ (ಕ್ವಾಸಿ-ಸ್ಟೆಲ್ಲಾರ್ ರೇಡಿಯೋ ಸೋರ್ಸ್ ಅಥವಾ ಗೆಲಾಕ್ಸಿಯ ನ್ಯೂಕ್ಲಿಯಸ್ ಅಥವಾ ಕೇಂದ್ರ) ನಮ್ಮ ಭೂಮಿಯಿಂದ ಅತಿ ದೂರದಲ್ಲಿರುವ ಕಾರಣ ಇಲ್ಲಿಂದ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು 1200 ಕೋಟಿ ವರ್ಷಗಳು ಬೇಕು. ವಿಜ್ಞಾನಿಗಳ ಲೆಕ್ಕದ ಪ್ರಕಾರ ಭೂಮಿಗೆ ಕೇವಲ 160 ಕೋಟಿ ವರ್ಷಗಳಿದ್ದಾಗ ಈ ಕ್ವಸ್ಸಾರ್ನ ಪತ್ತೆ ಸಿಕ್ಕಿದೆ, ಅಂದರೆ ಯೂನಿವರ್ಸ್ ಅಥವಾ ಬ್ರಹ್ಮಾಂಡ ಇನ್ನೂ ಹಳೆಯದು ಎಂದು ಹೇಳಿದಂತಾಗುತ್ತದೆ. ಅಷ್ಟೇ ಅಲ್ಲ ನೀರು ಕೇವಲ ಭೂಮಿಯಲ್ಲಿ ಮಾತ್ರ ಇರುವುದಲ್ಲ ಇದು ಸರ್ವವ್ಯಾಪಿ. ಯಾವುದೇ ಕಾಯಗಳಲ್ಲಿ ನೋಡಿದರೂ ಅಲ್ಲಿ ನೀರಿದ್ದೇ ಇದೆ. ಆದರೆ ಯಾವುದಾದರೂ ಒಂದು ರೂಪದಲ್ಲಿ ಈ ನೀರಿನ ಅಂಶವಿರಬಹುದು ಎಂಬುದು ಕೂಡಾ ಸ್

ವಜ್ರವೂ ಆವಿಯಾಗುತ್ತೆ ಗೊತ್ತ?!

Image
ಭೂಮಿಯ ಮೇಲೆ ಯಾವುದೂ ಶಾಶ್ವತವಲ್ಲವೇ? ಅತ್ಯಂತ ಕಠಿಣವಾದ ವಸ್ತು ಅನ್ನಿಸಿಕೊಂಡ ವಜ್ರ ಶಾಶ್ವತವಾಗಿರಬಹುದು ಎಂದು ಹೇಳುವಿರಾದರೆ ಅದು ತಪ್ಪು ಎನ್ನುತ್ತಾರೆ ವಿಜ್ಞಾನಿಗಳು. ಸದಾ ಸೂರ್ಯನ ಬೆಳಕಿಗೆ ತೆರೆದುಕೊಂಡಿದ್ದರೆ ವಜ್ರವು ನಿಧಾನಕ್ಕೆ ತನ್ನಷ್ಟಕ್ಕೆ ತಾನು ಆವಿಯಾಗುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ.       ಮೆಕಾರಿ ವಿಶ್ವವಿದ್ಯಾಲಯದ ಫೋಟಾನಿಕ್ ರಿಸರ್ಚ್ ಸೆಂಟರ್ನ ರಿಚರ್ಡ್ ಮಿಲ್ಡ್ರನ್ ನೇತೃತ್ವದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ಇವರು ಒಂದು ಹರಳನ್ನು ಸತತವಾಗಿ ನೇರಳಾತೀತ ಕಿರಣಗಳಿಗೆ ಒಡ್ಡಿದಾಗ ಆ ಹರಳು ಕರಗಿ ಆವಿಯಾಗುವುದು ಕಂಡುಬಂತು. ಅದೇ ರೀತಿ ವಜ್ರವೂ ಆವಿಯಾಗುವುದನ್ನು ಇವರು ಕಂಡುಕೊಂಡಿದ್ದಾರೆ. ಇತರ ಬೆಳಕಿನ ಕಿರಣಗಳಿಗೆ ಅಂದರೆ ತೀವ್ರವಲ್ಲದ ಕಿರಣಗಳಿಗೆ ಒಡ್ಡಿದಾಗ ವಜ್ರ ಆವಿಯಾಗುವ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಆದರೆ ಈ ಆವಿಯಾಗುವ ಪ್ರಕ್ರಿಯೆ ಮಾತ್ರ ಕಂಡು ಬಂದಿತ್ತು. ಯಾವುದೇ ರೀತಿಯ ಬೆಳಕಿನ ಕಿರಣಗಳಿಗೆ ತೆರೆದುಕೊಂಡರೂ ಸಹ ವಜ್ರವು ಆಯಾ ಬೆಳಕಿನ ಕಿರಣಗಳ ತೀವ್ರತೆಗೆ ಅನುಗುಣವಾಗು ಕರಗಿ ಆವಿಯಾಗುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು. ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತ? ವಜ್ರನ ಆಭರಣಗಳನ್ನು ಧರಿಸುವವರಿಗೆ ಈ ವಿಷಯ ತಿಳಿಸಬೇಕೆಂದು! ನಾವು ಧರಿಸುವ ಯಾವುದೇ ಆಭರಣವಾದರೂ ಸಹ ಅದು ಬೆಳಕಿನ ಸ್ಪರ್ಶಕ್ಕೆ ಸಹಜವಾಗಿಯೇ ಒಳಗಾಗುತ್ತದೆ. `ವಜ್ರದ ಆಭರಣ ನನ್ನಲ್ಲಿ ಯಾವತ್ತೂ ಇರುತ್ತೆ' ಅಂತ ಭಾವಿಸಿಕೊ

ಜೀವಿಗಳೊಳಗೊಂದು ಲೋಕ!

Image
ಡಾ.ಸೂಸ್ ಅವರ ಕಾದಂಬರಿ ಆಧರಿತ ಆನಿಮೇಶನ್ ಚಿತ್ರ `ಹಾರ್ಟನ್ ಹಿಯರ್ಸ್ ಎ ಹೂ!' ನೋಡಿದ್ದೀರಾ? ಇಲ್ಲವೆಂದಾದ್ರೆ ಒಮ್ಮೆ ನೋಡಿ. ಈ ಸಿನೆಮಾದಲ್ಲಿ ಬರುವಂಥ ಕಾಲ್ಪನಿಕ ಪಾತ್ರಗಳು ಅಚ್ಚರಿ ಹುಟ್ಟಿಸುತ್ತವೆ. ದೊಡ್ಡ ಹೂವಿನೊಳಗೆ ಇರುವಂಥ ಕಾಲ್ಪನಿಕ ಲೋಕದ ಕಥೆಯಿದು. ಹೂವಿನೊಳಗೊಂದು ಲೋಕ ಇದೆಯೇ? 1 2 3 4   5   6 ಇದೇ ಜಿಜ್ಞಾಸೆಯಲ್ಲಿ ವಿಜ್ಞಾನಿ ಗ್ಯಾರಿ ಗ್ರೀನ್ ಬರ್ಗ್ ಅವರು ವಿವಿಧ ರೀತಿಯ ಜೀವಿಗಳನ್ನು ತಮ್ಮ ಸೂಕ್ಷ್ಮದರ್ಶಕದ ಮೂಲಕ 300 ಪಟ್ಟು ದೊಡ್ಡದಾಗಿಸಿ ನೋಡಿದರು. ಆಗ ಕಂಡಂಥ ಚಿತ್ರಗಳನ್ನು ನೋಡಿದರೆ ಮೇಲೆ ಹೇಳಿದ ಸಿನೆಮಾದ ಪಾತ್ರಗಳು ನೆನಪಾಗುತ್ತವೆ. ಗ್ಯಾರಿ ಅವರು ಮ್ಯಾಗ್ನಿಫೈ ಮಾಡಿ ನೋಡಿದ ಹೂವುಗಳು, ಎಲೆಗಳು ಮತ್ತಿತರ ಭಾಗಗಳನ್ನು ಗಮನಿಸಿದರೆ ಜೀವಿಗಳೊಳಗೆ ಮತ್ತೊಂದು ಲೋಕವಿದೆಯೇನೋ ಎನಿಸುತ್ತದೆ. ಈ ಸಿನೆಮಾದಲ್ಲಿ ಕೂಡಾ ತೋರಿಸಿರುವಂಥದ್ದು ಇಂಥದ್ದೇ ಒಂದು ಲೋಕವನ್ನು. ಪ್ರಕೃತಿ ತುಂಬಾ ರಹಸ್ಯಗಳನ್ನು ತನ್ನೊಳಗೆ ಹೊತ್ತುಕೊಂಡಿದೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಎಲ್ಲೆಡೆಯೂ ಇಂಥ ವಿಚಿತ್ರಗಳೇ ಕಾಣಸಿಗುತ್ತವೆ ಎನ್ನುತ್ತಾರೆ ಗ್ಯಾರಿ. ಗ್ಯಾರಿ ತಮ್ಮದೇ ಆದ 3ಡಿ ಮೈಕ್ರೋಸ್ಕೋಪನ್ನು ಅಭಿವೃದ್ಧಿಪಡಿದ್ದಾರೆ. ಈ ಮೈಕ್ರೋಸ್ಕೋಪನ್ನು ಕ್ಯಾಮರಾ ರೀತಿಯಲ್ಲಿ ಬಳಸಿಕೊಂಡು 300 ಪಟ್ಟು ಮ್ಯಾಗ್ನಿಫೈ (ಹಿಗ್ಗಿಸುವುದು) ಮಾಡಿದಂಥ ಚಿತ್ರಗಳನ್ನು ತೆಗೆದಿದ್ದಾರೆ. ಕಳೆದ 21 ವರ್ಷಗಳಿಂದ ಇಂಥ ಚಿತ್ರ

ನಾಯಿಗೂ ಬೂಟ್ ಬಂದೈತೆ!

Image
ಹಲವು ಶತಮಾನಗಳಿಂದ ಮಾನವನ ಮನೆಯ ಕಾವಲುಗಾರನಾಗಿದ್ದ ನಾಯಿಗೆ ಬಡ್ತಿ ಸಿಕ್ಕಿ, ಅದು ಫ್ಯಾಶನ್ ಲೋಕವನ್ನು ಪ್ರವೇಶಿಸಿದ್ದು ಈಗ ಹಳೇ ಸುದ್ದಿ. ಸರಿ, ನಾಯಿ ಫ್ಯಾಶನ್ ಲೋಕಕ್ಕೇನೋ ಪ್ರವೇಶ ಪಡೆಯಿತು. ಅಲ್ಲೇ ನಿಂತಿರೋದಕ್ಕೆ ಆಗುತ್ತದೆಯೇ? ಹೊಸ ಸುದ್ದಿ ಏನಪ್ಪಾ ಅಂದ್ರೆ ಇನ್ನು ನಿಮ್ಮ ಮುದ್ದಿನ ನಾಯಿಗೂ ಬೂಟು ತೊಡಿಸಿ ಖುಷಿ ಪಡಬಹುದು.   ಅಲ್ಲಾ ಕಾಲ ಎಲ್ಲಿಗೆ ಬಂತು ಅಂತೀನಿ! ನಾಯಿಗೂ ಬೂಟ್ ಬೇರೆ ಬಂದಿದೆಯೇ? ನಿಜವಾಗಿಯೂ ನಾಯಿ ಬೂಟ್ ಬಂದಿದೆ. ಅದು ಕೂಡಾ ವಾಟರ್ ಪ್ರೂಫ್! ನಾಯಿ ಮಣ್ಣಿನ ಮೇಲೆ ನಡೀಲಿ, ಕೆಸರು ಗದ್ದೆಯಲ್ಲೇ ಓಡಾಡ್ಲಿ, ಮಂಜಿನ ಹನಿಗಳ ಮೇಲೆ ಕುಣಿದಾಡಲಿ... ಮಾನವನ ಮನೆಯ ರಕ್ಷಕ ನಾಯಿಯ ಕಾಲಿನ ರಕ್ಷಕವಾಗಿ ಈ ಬೂಟ್ ಇರುತ್ತೆ. ಕೆಲವೊಂದು ಬಾರಿ ನಾಯಿ ತನ್ನ ಕಾಲನ್ನ ತಾನೇ ಕಡಿದುಕೊಳ್ಳುತ್ತೆ. ಆಗ ಎಲ್ಲೋ ಇರುವೆ ಕಚ್ಚಿರ್ಬೇಕು ಅಂತ ನಾವು ಹೇಳ್ತೇವೆ. ಇನ್ನು ಮುಂದೆ ನಾಯಿಗೆ ಇರುವೆ ಕಚ್ಚೋ ಪ್ರಮೇಯವೇ ಇಲ್ಲ.  ಅಂದಹಾಗೆ ಈ ನಾಯಿ ಬೂಟ್ ಬೆಲೆ 25 ಡಾಲರ್. ವಿವಿಧ ಸೈಜ್ ನಲ್ಲಿ ಈ ಬೂಟ್ ಗಳು ಸಿಗುತ್ತವಂತೆ! ವಿವಿಧ ಬಣ್ಣಗಳು ಕೂಡಾ ಇವೆ. ಜೈವಿಕವಾಗಿ ಕೊಳೆತು ಹೋಗುವಂಥ ರಬ್ಬರ್ ನಿಂದ ಇವುಗಳನ್ನು ತಯಾರಿಸಲಾಗಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಅನ್ನೋ ಭಯವೂ ಇಲ್ಲವಂತೆ! ಆದರೆ.... ಸಾಮಾನ್ಯವಾಗಿ ನಾಯಿಗಳಿಗೆ ಏನು ಸಿಕ್ಕರೂ ಕಚ್ಚಿ ಕಚ್ಚಿ ತಿನ್ನೋ ಅಭ್ಯಾಸ ಇರುತ್ತೆ. ಚಪ್ಪಲಿ, ಬೂಟ್ ಸಿಕ್ಕರಂತೂ ಕೇಳೋದೇ ಬೇಡ. ನಾಯಿಗೆ ಸಿಗೋ ಹ

ವಿಜ್ಞಾನವೆಂದರೆ ನಮಗೇಕೆ ಅಲರ್ಜಿ?

Image
ಸಾಮಾನ್ಯ ಗಾರೆ ಕೆಲಸದ ಮೇಸ್ತ್ರಿಗೆ ಕಾಲೇಜಿನಲ್ಲಿ ಕಲಿತು ಡಿಗ್ರಿ ಪಡೆದುಕೊಂಡವರಿಗಿಂತ ಚೆನ್ನಾಗಿ ಗಣಿತ ಗೊತ್ತಿರುತ್ತದೆ. ಆದರೆ ಓದು, ಬರೆಹ ಅಂದರೆ ಜನ ಹಿಂದೆ ಸರಿಯುತ್ತಿರುವುದೇಕೆ? ಪತ್ರಿಕೆಗಳು, ಶಿಕ್ಷಣ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಬಿಂಬಿಸಿದ್ದರ ಪಡಿಣಾಮ ಇದು. ಇಂಥ ಭ್ರಮೆಯನ್ನು ಹೋಗಲಾಡಿಸಲು ಮರಾಠಿಯ ಮಾಸಿಕ `ಸೃಷ್ಟಿಜ್ಞಾನ'ದ ಸಾಧನೆಯನ್ನು ವಿವರಿಸಿ ಹೇಳಬೇಕು...  ವಿಜ್ಞಾನ, ಗಣಿತ ಎಂದರೆ ಸಾಕು ಮಾರು ದೂರ ಹೋಗುತ್ತೇವೆ. ಅಷ್ಟಿದ್ದರೂ ಕೂಡ ಕಬ್ಬಿಣದ ಕಡಲೆ ಎಂದೇ ಪರಿಗಣಿತವಾದ ವಿಜ್ಞಾನ ಮತ್ತು ಗಣಿತವನ್ನು ನಿತ್ಯ ಜೀವನದಲ್ಲಿ ಅರಿವಿಲ್ಲದೆಯೇ ಬಳಸಿಕೊಳ್ಳುತ್ತೇವೆ. ಸಾಮಾನ್ಯ ಗಾರೆ ಕೆಲಸದ ಮೇಸ್ತ್ರಿಗೆ ಕಾಲೇಜಿನಲ್ಲಿ ಕಲಿತು ಡಿಗ್ರಿ ಪಡೆದುಕೊಂಡವರಿಗಿಂತ ಚೆನ್ನಾಗಿ ಗಣಿತ ಗೊತ್ತಿರುತ್ತದೆ. ಇದು ವಾಸ್ತವ ಆದರೆ ಎಷ್ಟೇ ಚೆನ್ನಾಗಿ ಲೆಕ್ಕಗಳನ್ನು ಮಾಡಲು ಗೊತ್ತಿದ್ದರೂ, ವಿಜ್ಞಾನದ ವಿಚಾರಗಳ ಬಗ್ಗೆಯೇ ನಿರರ್ಗಳವಾಗಿ ಮಾತಾಡುವುದಕ್ಕೆ ಸಾಧ್ಯವಿದ್ದರೂ ವಿಜ್ಞಾನದ ಓದು, ಬರೆಹ ಅಂದರೆ ಜನ ಹಿಂದೆ ಸರಿಯುತ್ತಿರುವುದೇಕೆ? ಪತ್ರಿಕೆಗಳು, ಶಿಕ್ಷಣ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಬಿಂಬಿಸಿದ್ದರ ಪಡಿಣಾಮ ಇದು. ಎಷ್ಟೋ ಪತ್ರಿಕೆಗಳನ್ನು, ಪತ್ರಕರ್ತರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತದ ಬಗ್ಗೆ ಕೇಳಿ ನೋಡಿ- `ಅದೆಲ್ಲಾ ಯಾರಿಗೆ ಅರ್ಥವಾ

ಬರುತ್ತಿದೆ ಸೋಲಾರ್ ಕಸದಬುಟ್ಟಿ!

Image
ತ್ಯಾಜ್ಯ ವಿಲೇವಾರಿಯ ಬಗ್ಗೆ ಇತ್ತೀಚೆಗೆ ತುಂಬಾ ಮಾತುಗಳು, ಚಚೆ೯ಗಳು ಕೇಳಿಬರುತ್ತಿವೆ. ಪರಿಸರವನ್ನು ರಕ್ಷಿಸಬೇಕು, ಹೀಗಾಗಿ ತ್ಯಾಜ್ಯವನ್ನು ಎಸೆಯುವಾಗ ಸ್ವಲ್ಪ ವಿವೇಚನ ಇರಲಿ ಎಂಬ ಹಿತವಚನವೂ ಇದರ ಜೊತೆಗೂಡುತ್ತದೆ. ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಸುಲಭದ ಮಾತೇನಲ್ಲ. ಭೂಮಿಗೆ ಎಸೆದರೆ ಭೂಮಿ ಮಲಿನವಾಗುತ್ತದೆ, ನೀರಿಗೆ ಹಾಕಿದರೆ ಜಲಮಾಲಿನ್ಯ, ಸುಟ್ಟರೆ ವಾಯುಮಾಲಿನ್ಯ! ಹಾಗಿದ್ದರೆ ತ್ಯಾಜ್ಯವನ್ನು ಏನು ಮಾಡುವುದು? ಹಾಗೇ ಇಟ್ಟುಕೊಳ್ಳುವುದಂತೂ ಇವೆಲ್ಲವುಗಳಿಗಿಂತಲೂ ಮಾರಕ. ವಿಲೇವಾರಿಗೆ ಒಂದು ದಾರಿ ಬೇಕಲ್ಲ? ಸದ್ಯದಲ್ಲೇ ಇದಕ್ಕೊಂದು ಪರಿಹಾರವಾಗಿ 21ನೇ ಶತಮಾನದ ಅದ್ಭುತವೊಂದು ನಿಮ್ಮೆದುರಿಗಿರಲಿದೆ. ಇದು ಸೋಲಾರ್ ಕಸದಬುಟ್ಟಿ! ಕಂಪ್ಯೂಟರ್ ಸಾಫ್ಟ್ ವೇರ್ ಮೂಲಕ ನಿಯಂತ್ರಿಸಲ್ಪಡುವ ಈ ಸೌರ ಕಸದಬುಟ್ಟಿ ಖಂಡಿತಕ್ಕೂ ತ್ಯಾಜ್ಯ ವಿಲೇವಾರಿ ವಿಚಾರಕ್ಕೊಂದು ಪರಿಹಾರ ಕೊಟ್ಟಿದೆ ಎಂದು ಭಾವಿಸಬಹುದು. 3200 ಪೌಂಡ್ ಬೆಲೆಯ ಈ ಕಸದಬುಟ್ಟಿಯ ತಯಾರಿಯ ಹಿಂದಿರುವುದು ಐರಿಷ್ ಸಂಶೋಧಕರ ಮಿದುಳು. ಕೊಳೆತು ಹೋಗುವಂಥ ತ್ಯಾಜ್ಯಗಳನ್ನು ಈ ಕಸದಬುಟ್ಟಿ ತಾನಾಗಿಯೇ ಪುಡಿ ಮಾಡುತ್ತೆ. ಪುನಬ೯ಳಕೆ ಮಾಡಬಹುದಾದಂಥದ್ದನ್ನು ಪ್ರತ್ಯೇಕಿಸುತ್ತೆ. ಅವುಗಳನ್ನು ಕೂಡಾ ಪುಡಿ ಮಾಡುತ್ತೆ. ಬುಟ್ಟಿ ತುಂಬಿದಾಗ ಈ ಬುಟ್ಟಿಯಲ್ಲಿರುವ ಕಂಪ್ಯೂಟರ್ ಅಟೊಮೆಟಿಕ್ ಈಮೇಲನ್ನು ತನ್ನ ಮಾಲೀಕನಿಗೆ ಕಳುಹಿಸುತ್ತೆ. ಸಾವ೯ಜನಿಕ ಸ್ಥಳಗಳಲ್ಲಿ ಇದನ್ನು ಇಟ್ಟದ್ದು ಎಂದಾದರೆ ಈ ವ್ಯಾ

ಇದು ಕಾಮನಬಿಲ್ಲಲ್ಲ; ಚಂದ್ರಬಿಲ್ಲು!

Image
ಕಾಮನಬಿಲ್ಲನ್ನು ನೋಡಿ ಅದರ ಅಂದವನ್ನು ಸವಿಯದವರು ಯಾರಿದ್ದಾರೆ ಹೇಳಿ. ನೀಲಾಗಸದಲ್ಲಿ ಬೆಳಕಿನ ಕಣಗಳು ಚದುರಿದಾಗ ಕಾಣುವ ಮನಮೋಹಕ ಬೆಳಕಿನ ಚಿತ್ತಾರ. ಹೆಣ್ಣಿನ ಹುಬ್ಬುಗಳೊಂದಿಗೆ ಹೋಲಿಸಲ್ಪಡುವ ಈ ಕಾಮನಬಿಲ್ಲಿನ ಕಥೆ ಒತ್ತಟ್ಟಿಗಿರಲಿ. ಚಂದ್ರಬಿಲ್ಲುಗಳನ್ನು ಅಥಾ೯ತ್ `ಮೂನ್ ಬೋ'ಗಳನ್ನು ನೋಡಿದ್ದೀರಾ? ಇದೇನು ಚಂದ್ರಬಿಲ್ಲು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಕಾಮನಬಿಲ್ಲುಗಳು ಹಗಲು ಗೋಚರಿಸಿದರೆ ಚಂದ್ರಬಿಲ್ಲುಗಳು ಶಶಿಯ ತಂಪನೆಯ ಬೆಳಕಿನ ಪ್ರತಿಫಲವಾಗಿದೆ. ಕಾಮನಬಿಲ್ಲನ್ನು ಜಗತ್ತಿನ ಯಾವುದೇ ಭಾಗದಲ್ಲಾದರೂ ನೋಡಬಹುದು. ಆದರೆ ಚಂದ್ರಬಿಲ್ಲನ್ನು ಹಾಗೆ ನೋಡುವುದಕ್ಕೆ ಸಾಧ್ಯವಿಲ್ಲ. ಕೆಲವೇ ಕೆಲವು ಸ್ಥಳಗಳಲ್ಲಿ ಕಾಣಿಸುವ ಈ ಚಂದ್ರಬಿಲ್ಲುಗಳ ಸೌಂದಯ೯ ಎಂಥ ಅರಸಿಕರನ್ನೇ ಆದರೂ ಹಿಡಿದಿಡುತ್ತದೆ. ಅಂದಹಾಗೆ, ಈ ಚಂದ್ರಬಿಲ್ಲುಗಳ ನೆನಪಾದದ್ದು ಕ್ಯಾಲಿಫೋನಿ೯ಯಾದ ಯೋಸೆಮಿಟ್ ನ್ಯಾಶನಲ್ ಪಾಕ್೯ ನಲ್ಲಿರುವ ಜಲಪಾತದಲ್ಲಿ ಇವು ಕಾಣಿಸಿಕೊಂಡ ಸುದ್ದಿ ನನ್ನ ಕಣ್ಣಿಗೆ ಬಿದ್ದಾಗ. ಬಹುತೇಕ ಜನರು ಚಂದ್ರಬಿಲ್ಲುಗಳಿವೆ ಅಥಾ೯ತ್ ರಾತ್ರಿಯ ವೇಳೆಯೂ ಕಾಮನಬಿಲ್ಲುಗಳನ್ನು ಕಾಣಬಹುದು ಎಂದರೆ ನಂಬುವುದೇ ಇಲ್ಲ. ಇದೇನೋ ಮಾನವ ನಿಮಿ೯ತ ಬೆಳಕಿನ ಚಿತ್ತಾರ ಇರಬೇಕು ಎಂದೇ ಭಾವಿಸುತ್ತಾರೆ. ಆದರೆ ಮಂದ್ರನ ಬೆಳಕು ನೇರವಾಗಿ ಬಿದ್ದು ಚದುರಿ ಹೋಗುವಂಥ ಸ್ಥಳಗಳಲ್ಲಿ ಚಂದ್ರಬಿಲ್ಲುಗಳನ್ನೂ ಕಾಣಬಹುದು. ಮುಖ್ಯವಾಗಿ ಜಲಪಾತಗಳಲ್ಲಿ ಇಂಥ ಚಂದ್ರಬಿಲ್ಲುಗಳು ಕಾಣಸಿಗುತ್ತವ

ರಹಸ್ಯಗಳನ್ನು ಹುಡುಕತ್ತ...

Image
ಸೌರಮಂಡಲದ ತುದಿಯಲ್ಲಿ ನೀರಿನ ಗುಳ್ಳೆಗಳ್ಳಂಥ ಗುಳ್ಳೆಗಳಿವೆ. ಇವು 10 ಕೋಟಿ ಮೈಲಿಗಳಷ್ಟು ವಿಶಾಲವಾಗಿವೆ ಎಂಬುದನ್ನು ಕೂಡಾ ತಿಳಿಸಿದ್ದು ಇವೇ ವಾಯೇಜರ್ ನೌಕೆಗಳು. ಜಗತ್ತು ಹೇಗಿರಬಹುದು? ಎಂಬ ಕಲ್ಪನೆ ನಮ್ಮಲ್ಲಿ ವೇದ, ಪುರಾಣಗಳ ಕಾಲದಿಂದಲೂ ಬೆಳೆದು ಬಂದಿದೆ. ಆವಾಗ ಭೂಮಿಯಿಂದ ಬೇರೆ ಜಗತ್ತಿನತ್ತ ಚಲಿಸಲು ಈಗಿರುವಂಥ ರಾಕೆಟ್ಗಳಿರಲಿಲ್ಲ. ಗಗನನೌಕೆಗಳಿರಲಿಲ್ಲ. ಆದರೂ ಅಂದಿನ ದಿನಗಳಲ್ಲಿ ಹೇಳಿದ್ದು ಈಗ ಸತ್ಯವಾಗುತ್ತಿದೆ. ಹಾಗಿದ್ದರೆ ವೇದಗಳ ಕಾಲದಲ್ಲಿ ಜೀವಿಸಿದ್ದ ಜನರು ಯಾವ ಮಟ್ಟದ ಜ್ಞಾನವನ್ನು ಹೊಂದಿದ್ದರು? ಸಪ್ತ ಸಾಗರಗಳ ಬಗ್ಗೆ ವೇದಗಳು ಹೇಳುತ್ತವೆ. 14 ಲೋಕಗಳ ಬಗ್ಗೆಯೂ ನಮ್ಮ ಪುರಾಣಗಳಲ್ಲಿ ಪ್ರಸ್ತಾಪವಿದೆ.  ಈ ಪ್ರಪಂಚದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಏನೆಲ್ಲ ಇದೆ ಎಂಬ ಚಿಂತನೆ ಹಲವು ಕಾಲದಿಂದ ವಿಜ್ಞಾನಿಗಳ ಮನದಲ್ಲಿದೆ. ಅದರ ಬೆನ್ನು ಹತ್ತಿ ಹುಡುಕುವ ಪ್ರಯತ್ನಗಳೂ ನಡೆಯುತ್ತಿವೆ. ಭೂಮಿಯ ಹೊರತಾಗಿ ಬೇರೆ ಯಾವುದಾದದರೂ ಗ್ರಹಗಳು ವಾಸಕ್ಕೆ ಯೋಗ್ಯವಾಗಿವೆಯೇ? ಬೇರೆ ಯಾವುದಾದರೂ ಗ್ರಹಗಳಲ್ಲಿ ಜೀವಿಗಳಿವೆಯೇ? ಒಂದುವೇಳೆ ಇದ್ದದ್ದೇ ಆದಲ್ಲಿ ಆ ಅನ್ಯಗ್ರಹ ಜೀವಿಗಳು ಭೂಮಿಯನ್ನು ಮತ್ತು ನಮ್ಮನ್ನು ಗಮನಿಸುತ್ತಿರುವ ಸಾಧ್ಯತೆಗಳಿವೆಯೇ? ಎಂಬೆಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇಂಥದ್ದೇ ಪ್ರಯತ್ನವನ್ನು ನಡೆಸುತ್ತಿದೆ. ನಾಸಾದ ವಾಯೇಜರ

ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತೆ!

Image
ಮಕ್ಕಳು ಮೂರೇ ತಿಂಗಳು ಪ್ರಾಯವಾಗಿದ್ದಾಗಲೇ ಅಮ್ಮನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವಂತೆ. ಒಂದು ಜೀವ ತಾಯಗರ್ಭದಲ್ಲಿ ಮೊಳಕೆಯೊಡೆಯಬೇಕು ಎಂದಾದರೆ ಅಲ್ಲಿ ತಂದೆಯ ರೇತಸ್ಸು (ವೀರ್ಯ) ಮತ್ತು ತಾಯಿ ಆತ್ಮಭೂಯದ (ಅಂಡಾಣು ಎನ್ನಬಹುದು) ಮಿಲನವಾಗಬೇಕು. ಗರ್ಭದಲ್ಲಿರುವ ಮಗುವಿನ ನಾಭಿಯಿಂದ ಹೊರಟಂಥ ಕರುಳಬಳ್ಳಿ ತಾಯಿಯ ಜೊತೆಗೆ ನಂಟು ಬೆಳೆಸುತ್ತದೆ. ತಾಯಿಯ ಆತ್ಮಭೂಯ ಮತ್ತು ತಂದೆಯ ರೇತಸ್ಸಿನಲ್ಲಿ ಹಲವು ತಲೆಮಾರುಗಳ ವಂಶವಾಹಿಗಳು ಹರಿಯುವುದರಿಂದ ಸಂಬಂಧ ಬಹಳ ದೂರದವರೆಗೆ ವಿಸ್ತರಿಸುತ್ತದೆ.  ಮಕ್ಕಳ ಗ್ರಹಣಶಕ್ತಿ ಎಷ್ಟಿರುತ್ತದೆ? ಯಾವಾಗಿನಿಂದ ಮಕ್ಕಳಿಗೆ ಈ ಶಕ್ತಿ ಲಭ್ಯವಾಗುತ್ತದೆ? ಎಂಬೆಲ್ಲ ವಿಚಾರಗಳ ಬಗ್ಗೆ ಹಲವು ವರ್ಷಗಳಿಂದ ಜಿಜ್ಞಾಸೆ ಇದೆ. ಮಕ್ಕಳಿಗೆ ಬುದ್ಧಿ ಬರುವಾಗ ಮೂರ್ನಾಲ್ಕು ವರ್ಷ ಆಗುತ್ತೆ. ಅಲ್ಲಿಯವರೆಗೆ ಆವರಿಗೆ ಏನೂ ಅರ್ಥ ಆಗಲ್ಲ ಅಂತ ಒಂದು ವಾದ ಹೇಳಿದರೆ, ನಮ್ಮ ಪುರಾಣಗಳು ಮಗು ಅಮ್ಮನ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳುತ್ತವೆ. ಹೀಗಿರುವಾಗ ಯಾವುದು ಸರಿ ಎಂಬ ಗೊಂದಲವೂ ಕಾಡುವುದು ಸಹಜ. ಪುರಾಣಗಳನ್ನು, ವೇದ, ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು, ಸಾಧ್ಯವಿದ್ದರೂ ಅವುಗಳತ್ತ ಕಣ್ಣೆತ್ತಿಯೂ ನೋಡದವರು, ವೇದ, ಉಪನಿಷತ್ತುಗಳು, ಪುರಾಣಗಳೆಂದರೆ ಕಟ್ಟುಕಥೆಗಳೆಂದು ಭಾವಿಸುವವರು ಮೊದಲಿನ ವಾದವನ್ನೇ ಒಪ್ಪಬಹುದು. ವೇದ, ಉಪನಿಷತ್ತುಗಳು ಮತ್ತು ಪುರಾಣ

ಸೃಷ್ಟಿ ರಹಸ್ಯದ ಬೆನ್ನು ಹತ್ತಿ...

Image
ಒಂದು ವಸ್ತುವನ್ನು ಅಥವಾ ಶಕ್ತಿಯನ್ನು ಸೃಷ್ಟಿಸುವುದಕ್ಕೂ ಸಾಧ್ಯವಿಲ್ಲ ಮತ್ತು ನಾಶ ಮಾಡುವುದಕ್ಕೂ ಸಾಧ್ಯವಿಲ್ಲ. ಕೇವಲ ರೂಪಾಂತರಗೊಳಿಸಬಹುದು. ಇದು ಭೌತಶಾಸ್ತ್ರದ ಮೂಲತತ್ತ್ವ. ವೇದ, ಉಪನಿಷತ್ತುಗಳ ಮೂಲತತ್ತ್ವವೂ ಇದೇ. ಇಲ್ಲಿ ವ್ಯಾಖ್ಯಾನ ಮಾತ್ರ ಸ್ವಲ್ಪ ಭಿನ್ನವಾಗುತ್ತದೆ. ಪರಮಾತ್ಮ ಅಥವಾ ಈ ಜಗತ್ತಿನ ಸೃಷ್ಟಿಕರ್ತನನ್ನು ಸೃಷ್ಟಿಸುವುದಕ್ಕೂ, ನಾಶಪಡಿಸುವುದಕ್ಕೂ ಸಾಧ್ಯವಿಲ್ಲ ಎಂಬುದಾಗಿ ವೇದಗಳ ಮೂಲತತ್ತ್ವವನ್ನು ವ್ಯಾಖ್ಯಾನಿಸಬಹುದು. ಸೃಷ್ಟಿ ಮೂಲವನ್ನು ಹುಡುಕಬೇಕು ಎಂದಾದರೂ ನಾವು ಅಣುಗಳನ್ನು, ಪರಮಾಣುಗಳನ್ನು ವಿಭಜಿಸುತ್ತಾ ಹೋಗುವುದಲ್ಲ. ಅವುಗಳನ್ನು ಒಟ್ಟುಮಾಡುತ್ತಾ ಏಕವಾಗಿಸುತ್ತಾ ಹೋಗಬೇಕು. ಸರ್ವವನ್ನೂ ಒಂದಾಗಿಸಿ ನೋಡಬೇಕು. ಅದುವೇ ಸೃಷ್ಟಿ ಮೂಲ.  ಸೃಷ್ಟಿ ಹೇಗಾಗಿರಬಹುದು? ಇಷ್ಟು ದೊಡ್ಡ ಪ್ರಪಂಚವನ್ನು ನಾವು ಕಾಣುತ್ತಿದ್ದೇವೆ. ಇದು ಹುಟ್ಟಿದ ರೀತಿಯ ಬಗ್ಗೆ ಕೌತುಕಪಡುತ್ತೇವೆ. ತಾಯಿಯ ಗರ್ಭದಲ್ಲಿ ಬೆಳೆದ ಮಗುವೊಂದು ಮೆಲ್ಲಗೆ ಜಾರಿ ಭೂಮಿಗೆ ಬಂದಂತೆಯೇ ಪ್ರಪಂಚದ ಸೃಷ್ಟಿಯಾಯಿತೇ? ಸೃಷ್ಟಿಯನ್ನು ಅರಿಯಬೇಕೆಂದು ಋಷಿಮುನಿಗಳು ತಪಸ್ಸು ಮಾಡಿದರಂತೆ. ನಾವೂ ಪದ್ಮಾಸನ ಹಾಕಿ ಕಣ್ಣುಮುಚ್ಚಿ ಕುಳಿತು ಧ್ಯಾನಸ್ಥರಾದರೆ ಸೃಷ್ಟಿ ರಹಸ್ಯ ಗೊತ್ತಾಗಿಬಿಡುತ್ತದೆಯೇ? ವಿಜ್ಞಾನಿಗಳು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಿರ್ಮಿಸಿ ಅಲ್ಲಿ ಅಣುಗಳನ್ನು ಪರಮಾಣುಗಳನ್ನಾಗಿ, ಅವುಗಳನ್ನು ಇನ್ನೀ ಚಿಕ್ಕ, ಮತ್ತೂ ಚಿಕ್ಕ ಕಣಗಳನ್ನಾಗಿ ವಿಭಜಿಸಿ ಆ ಮೂ