Posts

Showing posts from March, 2013

‘ಶಕ್ತಿ’ಗೆ ಎರಡು ಹೊಸ ದಾರಿಗಳು

Image
ಜಗತ್ತು ಅಭಿವೃದ್ಧಿ ಪಥದಲ್ಲಿ ಕ್ಷಿಪ್ರವಾಗಿ ಹೆಜ್ಜೆಯಿಡುತ್ತಿದೆ . ಇದರ ಜತೆ ಜತೆಗೇ ಜನರ ಅಗತ್ಯಗಳೂ ಹೆಚ್ಚಾಗುತ್ತಿದ್ದು , ಇಂಧನ ಬಳಕೆ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ . ತತ್ಪರಿಣಾಮ ಇಂಧನ ಕೊರತೆ ಜಗತ್ತಿನ ಎಲ್ಲ ದೇಶಗಳನ್ನೂ ಕಾಡುತ್ತಿದೆ . ಒಂದೆಡೆ ಪ್ರಸ್ತುತ ಉತ್ಪಾದನೆಯಾಗುತ್ತಿರುವ ದ್ರವ ಇಂಧನ ಪ್ರಮಾಣ ವಾಹನಗಳ ಬೇಡಿಕೆಗೆ ಸಾಕಾಗುವಷ್ಟಿಲ್ಲ . ಇನ್ನೊಂದೆಡೆ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದರೂ ಕೊರತೆ ನೀಗಿಸುವುದಕ್ಕೆ ಹೆಣಗಾಡುವಂಥ ಪರಿಸ್ಥಿತಿ ಇದೆ . ಈ ಸಮಸ್ಯೆಗಳನ್ನು ಬಗೆ ಹರಿಸಿ ಇಂಧನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವಲಯ ಹಲವು ವರ್ಷಗಳಿಂದಲೇ ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುತ್ತಿದೆ . ಇದೀಗ ನಡೆದಿರುವ ಎರಡು ವಿಭಿನ್ನ ಪ್ರಯೋಗಗಳು ಇಂಧನ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಶಾಭಾವನೆಯನ್ನು ಮೂಡಿಸಿವೆ .

ಭೂತಟ್ಟೆಗಳಿಗೂ ಒಂದು ಲುಬ್ರಿಕೆಂಟ್!

Image
ಭೂಗರ್ಭದಲ್ಲಿರುವ ಲಾವಾರಸದ ಮೇಲೆ ತೇಲಾಡುತ್ತಿರುವ ತಟ್ಟೆಗಳಿವೆ . ಈ ತಟ್ಟೆಗಳು ಅಲುಗಾಡಿದಾಗ ಭೂಕಂಪವಾಗುತ್ತದೆ . ತಟ್ಟೆಗಳು ಸೇರುವ ಜಾಗದಲ್ಲಿಯೇ ಜ್ವಾಲಾಮುಖಿ ಉಂಟಾತ್ತದೆ . ತಟ್ಟೆಗಳ ಅಡಿಯಲ್ಲಿರುವ ಲಾವಾರಸವೇ ಜ್ವಾಲಾಮುಖಿ ರೂಪದಲ್ಲಿ ಸ್ಫೋಟಗೊಳ್ಳುತ್ತದೆ ಎಂಬೆಲ್ಲ ವಿಚಾರಗಳು ಎಲ್ಲರಿಗೂ ಗೊತ್ತಿರುವಂಥದ್ದು . ಆದರೆ ವಿಜ್ಞಾನ ಪ್ರಿಯರ ಮನಸಿನಲ್ಲಿ ಒಂದು ಯೋಚನೆ ಬಂದಿದ್ದಿರಬಹುದೋ ಏನೋ ? ಅದು - ಭೂಗರ್ಭದಲ್ಲಿನ ತಟ್ಟೆಗಳು ( ಟೆಕ್ಟೋನಿಕ್ ಪ್ಲೇಟ್‌ಗಳು ) ಸರಾಗವಾಗಿ ತೇಲಾಡುವುದಕ್ಕೆ ಹೇಗೆ ಸಾಧ್ಯ ? ವಾಹನಗಳ ಎಂಜಿನ್ ಸರಾಗವಾಗಿ ಕೆಲಸ ಮಾಡಬೇಕು , ಎಂಜಿನ್‌ನ ಪಿಸ್ಟನ್‌ಗಳ ನಡುವಿನ ಘರ್ಷಣೆ ಕಡಿಮೆ ಮಾಡಬೇಕು ಎಂದಾದರೆ ಅದಕ್ಕೆ ಲುಬ್ರಿಕೆಂಟ್ ಅಥವಾ ಎಂಜಿನ್ ಆಯಿಲ್ ಹಾಕಬೇಕು . ಅದೇ ರೀತಿ ಭೂಮಿಯಾಳದಲ್ಲಿನ ತಟ್ಟೆಗಳು ಸರಾಗವಾಗಿ ಚಲಿಸುವುದಕ್ಕೆ ಇಂಥ ಲುಬ್ರಿಕೆಂಟ್ ಯಾವುದಾದರೂ ಇದೆಯೇ ?! ವಿಜ್ಞಾನಿಗಳೂ ಇದೇ ಪ್ರಶ್ನೆಯ ಬಗ್ಗೆ ಹಲವು ಸಮಯದಿಂದ ತಲೆಕೆಡಿಸಿಕೊಂಡು , ಸಂಶೋಧನೆ ನಡೆಸುತ್ತಿದ್ದರು . ಅದಕ್ಕೀಗ ಫಲ ಸಿಕ್ಕಿದೆ . ಅಂದರೆ , ಭೂಗರ್ಭದಲ್ಲಿನ ತಟ್ಟೆಗಳು ಸರಾಗವಾಗಿ ಚಲಿಸುವುದಕ್ಕೂ ಲುಬ್ರಿಕೆಂಟ್ ಇದೆ ಎಂಬುದು ಪತ್ತೆಯಾಗಿದೆ . ಸ್ಯಾನ್ ಡಿಯಾಗೋದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಶಿಯನೋಗ್ರಫಿಯ ವಿಜ್ಞಾನಿಗಳು ಭೂತಟ್ಟೆಗಳ ಸರಾಗ ಚಲನೆಗೆ ಕಾರಣವಾದ ಲುಬ್ರಿಕೆಂಟನ್ನು ಪತ್ತೆ ಮಾಡಿದ್ದು , ದ್ರವರೂಪದಲ್ಲಿನ ಶಿಲಾಪದರವೇ ಭೂತಟ

ಅವಸಾನದತ್ತ ಹವಳದ ದಂಡೆಗಳು...!

Image
ಹವಳ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ! ಆಭರಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವ ಹೊಂದಿರುವ ಹವಳ , ಜಗತ್ತಿನ ಆರ್ಥಿಕತೆಗೂ ಅಗಾಧ ಕೊಡುಗೆಯನ್ನು ನೀಡುತ್ತಿದೆ . ಸಮುದ್ರದಾಳದಲ್ಲಿನ ಹವಳದ ದಂಡೆಗಳಿಂದ ಕಚ್ಚಾ ಹವಳಗಳನ್ನು ತೆಗೆಯುವ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ . ಆದರೆ ಇಂದು ಹವಳದ ದಂಡೆಗಳಿಗೆ ಮತ್ತು ಹವಳ ಉತ್ಪಾದಿಸುವ ಜೀವಿಗಳಿಗೆ ಹಲವಾರು ರೀತಿಯಲ್ಲಿ ಹೊಡೆತ ಬೀಳುತ್ತಿದ್ದು , ವಿನಾಶದ ಅಂಚಿನತ್ತ ಸಾಗುತ್ತಿವೆ . ಹೇರಳವಾಗಿದ್ದ ಹವಳದ ದಂಡೆಗಳ ಪ್ರಮಾಣ ಕಡಿಮೆಯಾಗಿದೆ . ಮುಂದೊಂದು ದಿನ ಹವಳ ದಂಡೆಗಳು ಸಂಪೂರ್ಣ ನಾಶ ಹೊಂದಿದರೂ ಅಚ್ಚರಿಯೇನಿಲ್ಲ ! ಸರಿ , ಈ ಸಂಗತಿ ಬಹುತೇಕ ಜನರಿಗೆ ಗೊತ್ತಿರುವಂಥದ್ದೇ ! ಆದರೆ ವಿನಾಶದ ಅಂಚಿನತ್ತ ಸಾಗುತ್ತಿರುವ ವೇಗ ಎಂಥಾದ್ದು ಎಂಬುದನ್ನು ಪತ್ತೆ ಮಾಡುವುದಕ್ಕೆ ಇದುವರೆಗೆ ಯಾವ ಪರೀಕ್ಷೆಯೂ ಇರಲಿಲ್ಲ . ಹೀಗಾಗಿ ಹವಳಗಳನ್ನು ಹೊರತೆಗೆಯುವ ಕಾರ್ಯ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ . ಇದೀಗ ಅಮೆರಿಕದ ಸ್ಯಾನ್‌ಡಿಯಾಗೋ ವಿಜ್ಞಾನಿಗಳು ಹೊಸ ಪರೀಕ್ಷಾ ವಿಧಾನವೊಂದನ್ನು ಕಂಡುಕೊಂಡಿದ್ದು , ಇದರ ಮೂಲಕ ಹವಳದ ದಂಡೆಗಳು ಮತ್ತು ಅವುಗಳನ್ನು ಉತ್ಪಾದಿಸುವ ಜೀವಿಗಳ ವಿನಾಶದ ತೀವ್ರತೆಯನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ .

ಮಿಡಿಯುತಿವೆ ಹೃದಯ ಕೋಶಗಳು...!

Image
ವೈದ್ಯಕೀಯ ಜಗತ್ತಿನಲ್ಲಿ ನಡೆಯುತ್ತಿರುವ ಒಂದೊಂದು ಪ್ರಯೋಗವೂ ಜನರಿಗೆ ಎಷ್ಟು ಸಹಕಾರಿಯಾದುದೋ ಅಷ್ಟೇ ಕೌತುಕವನ್ನೂ ಸೃಷ್ಟಿಸುತ್ತದೆ . ಇದೂ ಸಾಧ್ಯವೇ ಎಂಬ ಅಚ್ಚರಿಗೆ ಕಾರಣವಾಗುತ್ತದೆ . ಒಂದು ರೋಗವನ್ನು ವಾಸಿಮಾಡುವ ಚಿಕಿತ್ಸೆಯಿಂದ ಹಿಡಿದು , ಕೆಲಸ ಮಾಡದ ಅಂಗಕ್ಕೆ ಬೇರೆಯವರಿಂದ ದಾನ ಪಡೆದ ಅಂಗವನ್ನು ಕಸಿ ಕಟ್ಟುವಲ್ಲಿಯವರೆಗಿನ ಸಂಶೋಧನೆಗಳೂ ಅಚ್ಚರಿಯೇ ಸರಿ ! ತೀರಾ ಇತ್ತೀಚಿನ ದಿನಗಳಲ್ಲಿ ಕಾಂಡಕೋಶ ಮತ್ತು ಜೀವಕೋಶಗಳನ್ನು ಪಡೆದು ಅವುಗಳಿಂದ ಅಂಗಾಂಗಗಳನ್ನು ಬೆಳೆಸುವ ಸಂಶೋಧನೆಗಳ ಪ್ರಮಾಣ ಹೆಚ್ಚುತ್ತಿದೆ . ಹೃದಯದ ಬೈಪಾಸ್ ಸರ್ಜರಿಗೆ ದೇಹದ ಇತರ ಭಾಗದಿಂದ ಪಡೆದ ಅಂಗಾಂಶವನ್ನು ಬಳಸುವ ತಂತ್ರಜ್ಞಾನವೂ ಅಭಿವೃದ್ಧಿಗೊಂಡಿದೆ . ಇದೀಗ ಜೀವಕೋಶಗಳ ಅಂಗಾಂಶ ಕೃಷಿಯ ಮೂಲಕ ಹೃದಯನ್ನೇ ಸೃಷ್ಟಿಸುವ ಪ್ರಯತ್ನದಲ್ಲಿ ಜಯಶಾಲಿಗಳಾಗಿದ್ದಾರೆ ವಿಜ್ಞಾನಿಗಳು .

ಬಂದಿದೆ ಹಿಗ್ಗಿಸಬಲ್ಲ ಬ್ಯಾಟರಿ!

Image
ಒಂದು ಕಾಲದಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಗಳಂಥ ಬ್ಯಾಟರಿಗಳನ್ನು ಜನ ಬಳಸುತ್ತಿದ್ದರು . ತಂತ್ರಜ್ಞಾನ ಅಭಿವೃದ್ಧಿಯಾದಂತೆ ಬ್ಯಾಟರಿ ಗಾತ್ರ ಕಡಿಮೆಯಾಗುತ್ತಾ , ಸಾಮರ್ಥ್ಯ ಹೆಚ್ಚಾಗತೊಡಗಿತು . ಮೊಬೈಲ್ ಫೋನ್‌ಗಳ ಬಂದ ಆರಂಭದಲ್ಲಿ ಬಳಸುತ್ತಿದ್ದ ಬ್ಯಾಟರಿಗಳಿಗೂ ಈಗಿನ ಮೊಬೈಲ್‌ಗಳಲ್ಲಿ ಬಳಸುತ್ತಿರುವ ಬ್ಯಾಟರಿಗೂ ಹೋಲಿಕೆ ಮಾಡಿದರೆ ಬ್ಯಾಟರಿ ಉತ್ಪಾದನಾ ಕ್ಷೇತ್ರದಲ್ಲಾದ ತಂತ್ರಜ್ಞಾನ ಕ್ರಾಂತಿ ಎಂಥಾದ್ದು ಎಂಬುದು ವಿದಿತವಾಗುತ್ತದೆ . ಕಾಗದದ ಹಾಳೆಯಷ್ಟು ತೆಳ್ಳಗಿನ ಬ್ಯಾಟರಿಗಳು ಬಂದಿದ್ದು , ಬ್ಯಾಟರಿ ಕ್ಷೇತ್ರದಲ್ಲಿನ ಸಂಶೋಧನೆಗಳ ಓಘವೂ ಹೆಚ್ಚಾಗುತ್ತಿದೆ . ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಟರಿಗಳ ಪಟ್ಟಿಗೊಂದು ಹೊಸ ಸೇರ್ಪಡೆ ! ಅದು - ಬೇಕಾದಂತೆ ಹಿಗ್ಗಿಸಬಲ್ಲ ಮತ್ತು ಮೂಲಸ್ವರೂಪಕ್ಕೇ ಕುಗ್ಗಿಸಬಲ್ಲ ಬ್ಯಾಟರಿ ! ಈ ಬ್ಯಾಟರಿಯನ್ನು ಸಂಶೋಧನೆ ಮಾಡಿದ್ದು ಅಮೆರಿಕದ ಷಿಕಾಗೋದ ಇಲಿನೋಯಿಸ್‌ನಲ್ಲಿರುವ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಯೋಂಗಂಗ್ ಹಾಂಗ್ ಮತ್ತು ಯೂನಿವರ್ಸಿಟಿ ಆಫ್ ಇಲಿನೋಯಿಸ್‌ನ ಜಾನ್ ಎ . ರೋಗರ್ಸ್ . ಲೀಥಿಯಂ ಅಯಾನ್ ಬ್ಯಾಟರಿ ಇದಾಗಿದ್ದು , ಈ ಬ್ಯಾಟರಿಯಲ್ಲಿನ ಎಲೆಕ್ಟ್ರೋ ? ಗಳು ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿವೆ . ಅಷ್ಟೇ ಇವುಗಳನ್ನು ಚಾರ್ಜ್ ಮಾಡುವುದಕ್ಕಾಗಿ ಕೇಬಲ್ ಬಳಸಬೇಕೆಂದೂ ಇಲ್ಲ . ಎಲೆಕ್ಟ್ರೋ ? ಗಳು ಹಿಗ್ಗುವ ಗುಣ ಹೊಂದಿರುವುದರಿಂದಾಗಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಲು ಸಾ