Posts

Showing posts with the label special theory of relativity

ಬೆಳಕಿಗಿಂತ ವೇಗವಾಗಿ ಚಲಿಸಬಹುದಾದದ್ದು ಯಾವುದು?

Image
ಸೆರ್ನ್ ವಿಜ್ಞಾನಿಗಳ ಪ್ರಯೋಗ ಭೌತಶಾಸ್ತ್ರದ ಮೂಲನಿಯಮವನ್ನೇ ಅಲ್ಲಾಡಿಸುತ್ತಿದೆಯಲ್ಲ ಎಂಬ ಚಿಂತೆ ಈಗಾಗಲೇ ಹಲವರಲ್ಲಿ ಮೂಡಿದೆ. ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಹೇಗೆ ಸಾಧ್ಯ? ಇದನ್ನು ಆರಂಭದಲ್ಲಿ ಸೆರ್ನ್ ವಿಜ್ಞಾನಿಗಳೂ ನಂಬಲಿಲ್ಲ. ಆದರೆ ತಮ್ಮ ಯಂತ್ರೋಪಕರಣಗಳಲ್ಲಿ, ಲೆಕ್ಕಾಚಾರಗಳಲ್ಲಿ ಯಾವುದೇ ದೋಷ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಅವರು ಮಾಹಿತಿಯನ್ನು ಹೊರಹಾಕಿದ್ದಾರೆ. ಹಾಗಿದ್ದರೆ ಐನ್ ಸ್ಟೀನನ ಸಿದ್ಧಾಂತವೇ ತಪ್ಪೇ?  ಇದರ ಬಗ್ಗೆಯೇ ಚಿಂತಿಸುತ್ತಾ ಅಂತರ್ಜಾಲದಲ್ಲಿ ಹುಡುಕಾಡುತ್ತಿರಬೇಕಾದರೆ ಟ್ರುಥ್ ಡೈವ್ ಎಂಬ ಅಂತರ್ಜಾಲತಾಣದಲ್ಲಿ ಕವಿ, ಲೇಖಕ, ಎಂಜಿನಿಯರ್ ಮನೋಹರನ್ ಸಂಬಂದಮ್ (Manoharan Sambandam)  ಎಂಬವರು ಬರೆದಿದ್ದಂಥ ಲೇಖನ ಸಿಕ್ಕಿತು. ಅವರ ವಾದಸರಣಿ ನಿಜಕ್ಕೂ ಮನಸ್ಸಿಗೆ ನಾಟಿತು. ನನ್ನ ಬ್ಲಾಗ್ ಮಿತ್ರರಿಗಾಗಿ ಈ ಲೇಖನದ ಯಥಾವತ್ ಕನ್ನಡಾನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ. ಇಲ್ಲಿಂದ ಮನೋಹರನ್ ಲೇಖನ.... ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬ ತತ್ತವದ ಆಧಾರದಲ್ಲಿರುವ ನಮ್ಮ ಎಲ್ಲ ಕಥೆಗಳು, ಗ್ರಹಿಕೆಗಳು, ಸಿದ್ಧಾಂತಗಳು, ಲೆಕ್ಕಾಚಾರಗಳು ಈಗ ತಲೆಕೆಳಗಾಗುತ್ತವೆ. ಯೂರೋಪಿನಲ್ಲಿ ಇತ್ತೀಚೆಗೆ ನಡೆಸಲಾದಂಥ ಸಂಶೋಧನೆಯ ಪ್ರಕಾರ ಅಣುವಿಗಿಂತಲೂ ಚಿಕ್ಕದಾದಂಥ ಕಣ ಬೆಳಕಿಗಿಂತ ತುಸು ವೇಗದಲ್ಲಿ ಚಲಿಸುತ್ತದೆ. ಹಾಗಿದ್ದರೆ ಐನ್ ಸ್ಟೀನನನ್ನು ಗತಕಾಲದವನು ...

ಐನ್ ಸ್ಟೀನನ ಸಿದ್ಧಾಂತ ಸುಳ್ಳಾದರೆ ನನ್ನ ಬಾಕ್ಸಿಂಗ್ ಚಡ್ಡಿ ತಿನ್ನುವೆ ಎಂದ ಜಿಮ್!

Image
ನಿನ್ನೆಯಷ್ಟೇ ಜಿನೇವಾದಲ್ಲಿನ ಲಾಜ್೯ ಹ್ಯಾಡ್ರಾನ್ ಕೊಲೈಡರ್ ನಿಂದ ಬಂದಂಥ ಸುದ್ದಿ ವೈಜ್ಞಾನಿಕ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಯಾವ ಸಿದ್ಧಾಂತದ ಮೇಲೆ ಇಷ್ಟು ವಷ೯ ಭೌತಶಾಸ್ತ್ರವೇ ನಿಂತಿತ್ತೋ ಆ ಸಿದ್ಧಾಂತವೇ ಅಲುಗಾಡಿದೆ ಎಂದರೆ ಮನೆಯ ಅಡಿಪಾಯವೇ ಬಿರಿದಂತೆ. ನಿಜ, ವಿಜ್ಞಾನ ಎಂದರೆ ಮೂಗು ಮುರಿದು ಅದು ಯಾರಿಗೆ ಅಥ೯ವಾಗುತ್ತೆ ಮಾರಾಯಾ ಅನ್ನುವವರು ಕೂಡಾ ಐನ್ ಸ್ಟೀನನ ಸಿದ್ಧಾಂತ ಸುಳ್ಳಾಗುತ್ತಿದೆ ಎಂಬ ಸುದ್ದಿಯನ್ನು ಚೂಯಿಂಗ್ ಗಮ್ ನಂತೆ ಜಗಿದಿದ್ದಾರೆ. ಒಂದಷ್ಟು ಹೊತ್ತು ಚಚೆ೯ ನಡೆಸಿ ಬಳಿಕ ಇವರು ಹೇಳಿದ್ದು ಅದೇ ಹಳೇ ಮಾತನ್ನು- ವಿಜ್ಞಾನ ಯಾರಿಗೆ ಅಥ೯ವಾಗುತ್ತೆ?   ಇವರ ವಿಚಾರ ಒತ್ತಟ್ಟಿಗಿರಲಿ, ಈ ಸಂಶೋಧನೆಯ ಬಗ್ಗೆ ವಿಜ್ಞಾನಿಗಳು ಯಾವ ಪ್ರತಿಕ್ರಿಯೆಯನ್ನೇ ಕೊಡಲಿಲ್ಲವೇ? ಕೊಟ್ಟಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಬ್ಬರು ಅದೆಷ್ಟು ಪೂವಾ೯ಗ್ರಪೀಡಿತರಾಗಿ ವತಿ೯ಸಿದ್ದಾರೆ ಎಂದರೆ, ಒಂದು ಸಂಶೋಧನೆಯ ಫಲಿತಾಂಶವನ್ನು ಕನಿಷ್ಟಪಕ್ಷ ಚಚಿ೯ಸುವಂಥ ಮನಃಸ್ಥಿತಿಯನ್ನೂ ಅವರು ಪ್ರದಶಿ೯ಸಿಲ್ಲ. ಇಂಥ ಪೂವಾ೯ಗ್ರಹಗಳು ಹೊಸದೇನಲ್ಲ ಬಿಡಿ. ಐನ್ ಸ್ಟೀನ್ ತನ್ನ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವಾಗಲೂ ಅಂದಿನ ವಿಜ್ಞಾನಿಗಳು ಪೂವಾ೯ಗ್ರಹಪೀಡಿತರಂತೆ ವತಿ೯ಸಿದ್ದರು. ನ್ಯೂಟನ್ ಗುರುತ್ವಾಕಷ೯ಣ ಶಕ್ತಿಯನ್ನು ಕಂಡು ಹಿಡಿದಾಗಲೂ ಒಂದಷ್ಟು ಅಪಸ್ವರಗಳು ಪುಟಿದೆದ್ದು ಬಂದಿದ್ದವು. ಇರಲಿ, ಅಂದಿನ ವಿಚಾರಗ...

ಆಲ್ಬರ್ಟ್ ಐನ್ ಸ್ಟೀನನ ಸಿದ್ಧಾಂತವೇ ಸುಳ್ಳೇ?

Image
ಭೌತಶಾಸ್ತ್ರಕ್ಕೊಂದು  ಮೂಲಭೂತ ನಿಯಮ ಎನ್ನುವುದನ್ನು ಕೊಟ್ಟದ್ದು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್. ಅದು ವಿಶೇಷ ಸಾಪೇಕ್ಷತಾ ಸಿದ್ಧಾಂತ. ಇದೀಗ ಈ ಸಿದ್ಧಾಂತವೇ ಸುಳ್ಳಾಗಿರಬಹುದೇ ಎಂಬ ಚಿಂತನೆಯನ್ನು ಹಚ್ಚಿದೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ. ಐನ್ ಸ್ಟೀನನ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಒಂದು ವ್ಯವಸ್ಥೆ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ಸಮರ್ಪಕವಾಗಿ ಸಾಬೀತುಪಡಿಸುತ್ತದೆ ಎಂದಾದರೆ ಆ ವ್ಯವಸ್ಥೆಯ ಜೊತೆಗೆ ಸಂಬಂಧ ಹೊಂದಿರುವಂಥ ಇನ್ನೊಂದು ವ್ಯವಸ್ಥೆಯೂ ಸಹ ಭೌತಶಾಸ್ತ್ರದ ಎಲ್ಲ ನಿಯಮಗಳಿಗೂ ಅನ್ವಯವಾಗಿರಲೇಬೇಕು. ಈ ಸಿದ್ಧಾಂತದ ಪ್ರಕಾರವೇ ಐನ್ ಸ್ಟೀನ್ ರಾಶಿ ಮತ್ತು ಶಕ್ತಿಯ ನಡುವಿನ ಸಂಬಂಧದ ಸೂತ್ರವನ್ನು ಕೊಟ್ಟ. ಇದುವೇ ಮಾಸ್ ಎನರ್ಜಿ ರಿಲೇಶನ್, E= mc2. ಇಲ್ಲಿ E ಅಂದರೆ ಶಕ್ತಿ, m ಅಂದರೆ ಕಣದ ರಾಶಿ ಮತ್ತು c ಬೆಳಕಿನ ವೇಗ. ಇವುಗಳ ಪೈಕಿ ಬೆಳಕಿನ ವೇಗವನ್ನು ಸ್ಥಿರಾಂಕವೆಂದು ಪರಿಗಣಿಸಲಾಗಿತ್ತು. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ  186,282 ಮೈಲಿಗಳು ಎಂಬುದು ಇದುವರೆಗಿನ ಲೆಕ್ಕಾಚಾರ. ಬೆಳಕಿನ ವೇಗವನ್ನು ಈ ಸಂಖ್ಯೆಗೆ ಸ್ಥಿರಗೊಳಿಸಿಯೇ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ರೂಪಿಸಲಾಗಿದೆ. ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ ಬೆಳಕಿನ ವೇಗವನ್ನೇ ಪ್ರಶ್ನಿಸಿದೆ. ಅಂದರೆ ನಿಗದಿತ ಶಕ್ತಿ ಮಟ್ಟದಲ್ಲಿ, ನಿಗದಿತ ರಾಶಿಯ ಒಂದು ...