ಯುಎಸ್ಬಿ ಟೂಥ್ ಬ್ರಶ್ ಬಂದಿದೆ ಗೊತ್ತಾ?
ಅಲ್ಲಾ ಸ್ವಾಮಿ, ಕಾಲ ಎಲ್ಲಿಗೆ ಬಂತು ಅಂತೀನಿ! ಮನುಷ್ಯ ತನ್ನ ಕೆಲ್ಸಗಳನ್ನು ತಾನೇ ಮಾಡಿಕೊಳ್ಳುವುದರಿಂದ ವಿಮುಖನಾಗುತ್ತಲೇ ಇದ್ದಾನೆ. ಅಥಾ೯ತ್ ಪಕ್ಕಾ ಸೋಮಾರಿಯಾಗುತ್ತಿದ್ದಾನೆ. ಬಟ್ಟೆ ತೊಳೆಯೋದಕ್ಕೂ ಮೆಷಿನ್ ಬೇಕು. ನಾಲ್ಕೆಜ್ಜೆ ಇಟ್ಟರೆ ತಲುಪಬಹುದಾದಂಥ ಸ್ಥಳಗಳಿಗೆ ತಲುಪೋದಕ್ಕೂ ಮೆಷಿನ್ ಬೇಕು. ಮನೆಕೆಲಸಗಳನ್ನು ಮಾಡ್ಕೊಡೋದಕ್ಕೂ ಒಂದು ರೋಬಟ್ ಮೆಷಿನ್ನು! ಇದುವರೆಗೆ ಈ ಮನುಷ್ಯ ತನ್ನ ಹಲ್ಲುಗಳನ್ನು ತಾನೇ ಉಜ್ಕೋತಾ ಇದ್ದ. ಇನ್ನೂ ಆ ಕೆಲ್ಸ ಕೂಡಾ ಆತ ಮಾಡೋಲ್ಲ. ಸುಮ್ನೇ ಬಾಯಿ "ಆ..." ಮಾಡಿಕೊಟ್ರೆ ಸಾಕು ಮೆಷಿನ್ನು ಹಲ್ಲುಜ್ಜುತ್ತೆ! ಆಶ್ಚಯ೯ ಬೇಡ, ಇದು ನಿಜ. ಇಂಥದ್ದೊಂದು ಟೂಥ್ ಬ್ರಶ್ ಮೆಷಿನ್ನಿನ ಬಗ್ಗೆ ಅಂತಜಾ೯ಲದಲ್ಲಿ ಮಾಹಿತಿ ಸಿಕ್ಕಾಗ ಅದನ್ನು ನನ್ನ ಮಿತ್ರರಿಗೂ ಹೇಳ್ಬೇಕು ಅನ್ನಿಸ್ತು ನೋಡಿ. ನಿಮ್ಗೆ ಯುಎಸ್ಬಿ ಬ್ಲೂಟೂಥ್, ಯುಎಸ್ಬಿ ಮೌಸ್, ಯುಎಸ್ಬಿ ಕೀಬೋಡ್೯.... ಇಂಥ ಕಂಪ್ಯೂಟರ್ ಭಾಷೆ ಕೇಳಿ ಗೊತ್ತು. ಇದೇ ಥರ ಈಗ ಯುಎಸ್ಬಿ ಟೂಥ್ ಬ್ರಶ್ ಬಂದಿದೆ. ಹಾಗಂತ ಇದೇನೂ ಕಂಪ್ಯೂಟರ್, ಲ್ಯಾಪ್ ಟಾಪ್ ಇಂಥ ಕಂಪ್ಯೂಟರ್ ಕುಟುಂಬದ ಮೆಷಿನ್ನುಗಳ ಹಲ್ಲು ಉಜ್ಜೋದಕ್ಕೆ ಇರುವಂಥದ್ದಲ್ಲ. ಸಾಕ್ಷಾತ್, ಈ ಮೆಷಿನ್ನುಗಳನ್ನೆಲ್ಲ ಕಂಡುಹಿಡಿದಂಥ ಮನುಷ್ಯನ ಹಲ್ಲುಗಳನ್ನೇ ಉಜ್ಜೋದಕ್ಕೆ ಇರುವಂಥದ್ದು. ಅಂದಹಾಗೆ, ಈ ಟೂಥ್ ಬ್ರಶ್ಶನ್ನು ಕಂಡುಹಿಡಿದದ್ದು ಸಾಧಾರಣ ಕಂಪನಿಯಲ್ಲ, ಜಗತ್ತಿನಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿರುವಂಥ ಫಿಲ...