Posts

Showing posts from February, 2012

ಅಳಿದ ಬಳಿಕ ಚಿಂತಿಸಿ ಫಲವೇನು?

Image
ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ?   ಇದ್ದಾಗ ಗೊತ್ತಾಗದ ಮೌಲ್ಯ ಸತ್ತ ಮೇಲೆ ಗೊತ್ತಾಗುತ್ತದೆಯಂತೆ! ಇದು ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾತು. ಅದು ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ ಯಾವ ಜೀವಿಯೇ ಆದರೂ ಆದು ಇಲ್ಲದಿದ್ದಾಗಲೇ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಮಾತು ಡೈನೋಸಾರ್ ಗಳ ವಿಚಾರದಲ್ಲಿ ಸಮರ್ಪಕವಾಗಿ ಅನ್ವಯವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗುವಂಥ ಡೈನೋಸಾರ್ ಗಳು ಹೇಗಿದ್ದವು? ಅವುಗಳ ಶಾರೀರಿಕ ರಚನೆ ಹೇಗಿತ್ತು? ಅವುಗಳು ನಾವಂದುಕೊಂಡಿರುವಂತೆಯೇ ಕ್ರೂರ ಮೃಗಗಳಾಗಿದ್ದವೇ? ಡೈನೋಸಾ ರ್ ಗ ಳ ಬಗೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗಿ ದಶಕಗಳೇ ಕಳೆದವು. ಸಮರ್ಪಕವಾದ ಉತ್ತರಗಳಿಗೆ ಮಾತ್ರ ಇನ್ನೂ ಹುಡುಕಲಾಗುತ್ತಿದೆ. ಡೈನೋಸಾರ್ ಗಳ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸುತ್ತಿದ್ದಾರೆ. ಡೈನೋಸಾ ರ್ ಗಳ ಬಗೆಗೆ ಇರುವಂಥ ಪ್ರಮುಖ ಪ್ರಶ್ನೆಯೆಂದರೆ ಅವುಗಳು ಅಳಿದದ್ದು ಹೇಗೆ ಎಂಬುದು. ಜೀವ ವಿಕಾಸದ ಹಂತ

ಎಷ್ಟು ಶುದ್ಧ ಮಾಡಿದರೂ ಕೊಚ್ಚೆ ಕೊಚ್ಚೆಯೇ!

Image
ಬಹಳ ಸಮಯದ ನಂತರ ನನ್ನ ಬ್ಲಾಗ್ ಅಪ್ಡೇಟ್ ಮಾಡುತ್ತಿದ್ದೇನೆ. ತಾಂತ್ರಿಕ ದೋಷವೂ ಸೇರಿದಂತೆ ಹಲವು ಕಾರಣಗಳಿಂದಾಗಿ ಬ್ಲಾಗ್ ಅಪ್ಡೇಟ್ ಮಾಡುವುದಕ್ಕೆ ಆಗಿರಲಿಲ್ಲ... ಕ್ಷಮಿಸಿ.... ವಿಷ್ಣುಪ್ರಿಯ ---------------- ತಾನು ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಮಾನವಭ್ರಮೆಗೆ ಪ್ರತಿ ಬಾರಿಯೂ ತಡೆ ಬೀಳುತ್ತಿದೆ ಎಂಬುದು ದಿಟವಾಯಿತು. ಪ್ರಕೃತಿಯ  ನಿರ್ಧಾರಗಳ ಮೇಲೆ ಮಾನವ ತನ್ನ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಪ್ರಕೃತಿ ಮಾನವನಿಗಿಂತಲೂ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಕೂಡಾ ಸ್ಪಷ್ಟವಾಯಿತು.  ಈ ಚರಂಡಿಗಳಲ್ಲಿ ಹರಿಯುವ ನೀರನ್ನು ನೊಡಿದರೆ ಮೈಯೆಲ್ಲಾ ಜಿರಳೆ ಹರಿದಂತಾಗುತ್ತದೆ! ಬೆಂಗಳೂರಿಗರಿಗಂತೂ ಮಳೆ ಬಂದು ಚರಂಡಿಯಲ್ಲಿ ನೀರುಕ್ಕಿ ಹರಿದರೆ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಬಂದೀತು! ಬೆಂಗಳೂರಿನಲ್ಲಿ ಚರಂಡಿಗಳ ನೀರು ಅದ್ಯಾವ ಕೆರೆ ಸೇರುತ್ತದೆ ಎಂದು ನೋಡುವುದಕ್ಕೆ ಹೊರಟರೆ ಆ ಕೆರೆಯಿಂದಲೇ ನಮಗೆ ವಿತರಣೆಯಾಗುವಂಥ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ. ನಿರನ್ನು ಶುದ್ಧೀಕರಿಸಿಯೇ ಕೆರೆಗೆ ಬಿಡಲಾಗುತ್ತದೆ, ಕೆರೆಯ ನಿರನ್ನು ಶುದ್ಧೀಕರಿಸಿಯೇ ಕುಡಿಯುವುದಕ್ಕೆ ನೀಡಲಾಗುತ್ತದೆ. ಹೀಗಾಗಿ ಆ ನೀರಿನಿಂದ ಏನೂ ಸಮಸ್ಯೆ ಆಗದು ಎಂದು ಆಧಿಕಾರಿಗಳು ಹೇಳಿದರು ಎಂದಾದರೆ ಅವರ ಮಾತನ್ನು ನಂಬಬೇಡಿ. ಯಾಕೆಂದರೆ ಕೊಚ್ಚೆ ನೀರನ್ನು ಅದೆಷ್ಟೇ ಶುದ್ಧೀಕರಿಸಿದರೂ ಸಹ, ಅದ್ಯಾವ ಅತ್ಯಾಧುನಿಕ ತಂತ್ರಜ್ಞಾನದಿಂದ ಶುದ್ಧೀಕರಿಸಿದರ