Posts

Showing posts with the label height

೨೩ ಮೈಲಿ ಎತ್ತರದಿಂದ ದಾಖಲೆಯ ಜಿಗಿತ!

Image
ಅಧಿಕ ಒತ್ತಡ ಇರುವಂಥ ದಿರಿಸು ಧರಿಸಿಕೊಂಡು ಜಿಗಿಯುವುದು ಎಂದರೆ ಅದು ಸುಲಭದ ವಿಚಾರವಲ್ಲ ಎನ್ನುತ್ತಾರೆ ಫೆಲಿಕ್ಸ್. ಯಾಕೆಂದರೆ ಒಂದು ವೇಳೆ ಎತಿ ಎತ್ತರದಿಂದ ಜಿಗಿಯುತ್ತಿರುವ ವೇಳೆ ಈ ದಿರಿಸಿನಲ್ಲಿ ಒಂದು ಸಣ್ಣ ತೂತು ಕಾಣಿಸಿಕೊಂಡರೂ ಅದನ್ನು ಧರಿಸಿದ ವ್ಯಕ್ತಿಯ ಕಣ್ಣಗುಡ್ಡೆಗಳು ಕುದಿಯತೊಡಗುತ್ತವೆ, ಹೃದಯ ಸ್ಫೋಟಿಸುತ್ತದೆ. 5 ಅಡಿ ಎತ್ತರದಿಂದ ಜಿಗಿಯುವುದೆಂದರೇ ಮೈ ನಡುಕ ಶುರುವಾಗುತ್ತದೆ. ಇನ್ನು ೨೩ ಮೈಲಿ ಸುಮಾರು ೧,೨೦,೦೦೦ ಅಡಿ ಎತ್ತರದಿಂದ ಜಿಗಿಯುವ ವಿಚಾರವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಹೌದು, ಆಸ್ಟ್ರಿಯಾದ ಡೇರ್ ಡೆವಿಲ್ ಫೆಲಿಕ್ಸ್ ಬೌಮ್ ಗಾರ್ಟನರ್ ಇಂಥದ್ದೊಂದು ಸಾಹಸಕ್ಕೆ ಸಿದ್ಧವಾಗಿದ್ದಾರೆ. ಹಾಗಂತ ಇವರೇನೂ ಸುರಕ್ಷಾ ಸಾಧನಗಳಿಲ್ಲದೇ ಜಿಗಿಯುತ್ತಿಲ್ಲ. ಸುಮಾರು ೮ ಅಡಿ ಉದ್ದದ ಕ್ಯಾಪ್ಸೂಲ್‌ನಲ್ಲಿ (ಇದು ಅಪ್ಪಟ ಗಗನನೌಕೆಯಂತೆ ಕೆಲಸ ಮಾಡುತ್ತದೆ) ಕುಳಿತು ಹಾರಾಟ ನಡೆಸಲಿದ್ದು, ಬರೋಬ್ಬರಿ ೨೩ ಮೈಲಿ ಎತ್ತರಕ್ಕೆ ಏರಿ ಅಲ್ಲಿಂದ ಧುಮುಕಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ೬೦,೦೦೦ ಅಡಿ ಎತ್ತರದಿಂದ ಧುಮುಕಿ ತಮ್ಮ ಹೊಸಸಾಧನೆಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಇವರು ದೊಡ್ಡ ದೊಡ್ಡ ಕಟ್ಟಡಗಳ ಮೇಲಿಂದ ಹಾರುವ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುವುದಕ್ಕೆ ಶುರು ಮಾಡಿದ್ದರು. ಇದೀಗ ವಾತಾವರಣದ ಉನ್ನತ ಮಟ್ಟಕ್ಕೆ (ಬಹುತೇಕ ನಿರ್ವಾತದಿಂದ ಕೂಡಿರುವಂಥ ಎತ್ತರಕ್ಕೆ) ಏರಿ ಅಲ್ಲಿಂದ ಜಿಗಿಯುವ ದಾಖಲೆ ನಿರ್ಮಿಸ...