Posts

Showing posts from May, 2012

ಇಂಥ ಸಂಶೋಧನೆಗಳು ಬೇಕಾ?

Image
ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.

ಗ್ರಹಗಳು ಮಾರಾಟಕ್ಕಿವೆ...!!

Image
ಒಬ್ಬ ತಾಯಿಯ ಗರ್ಭ ಶಿಶುವಿನ ಬೆಳವಣಿಗೆ ಮತ್ತು ಜನ್ಮಕ್ಕೆ ಯೋಗ್ಯವಾಗಿದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಆ ಗರ್ಭದಲ್ಲಿ ಜೀವ ಚಿಗುರಬೇಕು. ಅಂತೆಯೇ ಗ್ರಹಗಳು. ಓಹ್, ಒಂದು ಪುಟ್ಟ ಭೂಮಿ ನಮ್ಮಲ್ಲಿರುತ್ತಿದ್ದರೆ, ಚಿಕ್ಕದಾದರೂ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಹಾಯಾಗಿರುತ್ತಿದ್ದೆವು ಎಂದು ಹಲುಬುತ್ತಾ ಕೂರುವವರಿಗೆ ಬರವಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಮೂರಡಿ ಆರಡಿ ಜಾಗ ಸಿಗುವುದೇ ಕಷ್ಟ, ಇಂತಿರುವಾಗ ಮನೆ ಕಟ್ಟಲು ಬೇಕಾದಷ್ಟು ಜಾಗ ಎಲ್ಲಿ ಸಿಕ್ಕೀತು? ಹಳ್ಳಿಗಳಲ್ಲಿ ಕೂಡಾ ಈಗ ಪಟ್ಟಣದ ಸ್ಥಿತಿ ಬಂದುಬಿಟ್ಟಿದೆ... ಒಂದು ಜಾಗ ಖರೀದಿಸುವುದಕ್ಕೆ ಹೊರಟರೆ ಎಷ್ಟೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ! ಆದರೆ ಜಾಗ ಖರೀದಿ ವಿಚಾರ ಈಗ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆಯೇನೋ ಎಂಬ ಶಂಕೆ ಶುರುವಾಗಿದೆ. ಯಾಕೆ ಗೊತ್ತಾ? ನಮ್ಮ ಬ್ರಹ್ಮಾಂಡದಲ್ಲಿ ಇರುವಂಥ ಹಲವಾರು ವಾಸಯೋಗ್ಯ ಗ್ರಹಗಳಲ್ಲಿನ ಜಾಗ ಈಗ ಮಾರಾಟಕ್ಕಿದೆ. ಅಚ್ಚರಿ ಪಡಬೇಡಿ, ಶೀಘ್ರದಲ್ಲಿಯೇ ನಮ್ಮ ಜನರು ಭೂಮಿಯನ್ನು ಬಿಟ್ಟು ಮತ್ತಾವುದೋ ಆಕಾಶಕಾಯಗಳಿಗೆ  ಗುಳೇ ಹೊರಡುವುದು ಖರೇ! ಮುಂದೊಂದು ದಿನ ಸೂಪರ್ ಭೂಮಿಯಲ್ಲಿ ಜಾಗ ಹೊಂದಿರುವ, ಭವ್ಯ ಬಂಗಲೆ ಕಟ್ಟಿರುವ ಹುಡುಗನಿಗೆ ಮಾತ್ರ ಹುಡುಗಿ ಕೊಡುವುದು ಎಂಬ ಷರತ್ತನ್ನು ಹೆಣ್ಣು ಹೆತ್ತವರು ಹೇರಿದರೆ ಗಂಡು ಹೆತ್ತವರು ಸೂಪರ್ ಭೂಮಿಯಲ್ಲಿ ಜಾಗ ಖರೀದಿಸುವುದಕ್ಕೆ ಪಡಿಪಾಟಲು ಪಡುವಂಥ ಪರಿಸ್ಥಿತಿ ಬಂದೀತು!