Posts

Showing posts with the label ocean

ಪ್ಲೂಟೋದಲ್ಲಿ ಸಾಗರ ಗಭ೯!

Image
ಒಂದು ಕಾಲದಲ್ಲಿ ನಮ್ಮ ಸೌರಮಂಡಲದ ಒಂಬತ್ತನೇ ಗ್ರಹವಾಗಿದ್ದಂಥ ಪ್ಲೂಟೋವನ್ನು ಗ್ರಹದ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಈಗ ಅದೇ ಪ್ಲೂಟೋದಿಂದಲೇ ಒಂದು ವಿಸ್ಮಯ ಹೊರಬಿದ್ದಿದೆ. ಅದು... ಪ್ಲೂಟೋದಲ್ಲಿರುವಂಥ ಸಾಗರ ಗಭ೯!     ನಮ್ಮ ಸೌರಮಂಡಲದಲ್ಲಿನ ಅತ್ಯಂತ ಶೀತಕಾಯ ಎಂದೇ ಖ್ಯಾತಿ ಪಡೆದಂಥದ್ದು ಈ ಪ್ಲೂಟೋ. ಇದರಲ್ಲಿರುವಂಥ ಮೈಲಿಗಟ್ಟಲೆ ದಪ್ಪದ ಮಂಜಿನ ಪದರದಡಿ ಸಾಗರ ಇರುವಂಥ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕ್ಯಾಲಿಫೋನಿ೯ಯಾ ಯೂನಿವಸಿ೯ಟಿಯ ವಿಜ್ಞಾನಿಗಳು. ಈ ಪ್ಲೂಟೋ ಅತ್ಯಂತ ಶೀತಲವಾಗಿದ್ದರೂ ಸಹ ಅದರಲ್ಲಿರುವಂಥ ವಿಕಿರಣ ವಸ್ತುಗಳು ಸೂಸುವಂಥ ವಿಕಿರಣಗಳ ಕಾರಣದಿಂದಾಗಿ ಈ ಕುಬ್ಜ ಗ್ರಹವು ತನ್ನೊಳಗೆ ಸಾಗರವನ್ನು ಹೊಂದುವುದಕ್ಕೆ ಅಗತ್ಯವಿರುವಷ್ಟು ಶಾಖ ಹೊಂದಿರುವ ಸಾಧ್ಯತೆಗಳಿವೆ.   ಈಗಾಗಲೇ ಶನಿಯ ಚಂದ್ರರಾದ ಟೈಟಾನ್ ಮತ್ತು ಎನ್ಸಿಲಾಡಸ್ ಗಳಲ್ಲಿ ನೀರಿನ ಸಾಗರ ಇದೆ ಎಂದು ಸಾಬೀತಾಗಿದೆ. ಒಂದು ವೇಳೆ ಪ್ಲೂಟೋದಲ್ಲಿಯೂ ಸಾಗರ ಇರುವುದು ಖಾತ್ರಿಯಾದರೆ ಅದು ಕೂಡಾ ಈ ಕಾಯಗಳ ಪಟ್ಟಿಗೆ ಸೇರುತ್ತದೆ. ಪ್ಲೂಟೋದ ಮೇಲ್ಪದರವು ಸುಮಾರು 200 ಕಿಲೋಮೀಟರ್ ಗಳಷ್ಟು ಮಂಜಿನ ಗಟ್ಟಿಯಿಂದ ಕೂಡಿದೆ. ಈ ಮಂಜಿನ ಪದರದಿಂದ ಸುಮಾರು 100ರಿಂದ 170 ಕಿಲೋಮೀಟರ್ ಗಳಷ್ಟು ಆಳದಲ್ಲಿ ತಾಜಾ ನೀರಿನ ಸಾಗರವಿರುವ ಸಾಧ್ಯತೆಗಳಿವೆ.   ಪ್ಲೂಟೋದಲ್ಲಿ ಮುಖ್ಯವಾಗಿ ಪೊಟ್ಯಾಶಿಯಂ- 40 ಮತ್ತಿತರ ವಿಕಿರಣ ವಸ್ತುಗಳಿವೆ. ಈ ವಿಕಿರಣ ವಸ್ತುಗಳ...