ಸಾವಿನ ನಂತರ ಮುಂದೇನು?
ಹುಟ್ಟಿದ
ಜೀವಿ ಸಾಯಲೇಬೇಕು.
ಸತ್ತ
ನಂತರ?
ಪುನರ್ಜನ್ಮ
ಎಂಬುದು ಬಹುತೇಕರು ಕೊಡುವ ಉತ್ತರ.
ಪುನರ್ಜನ್ಮದ
ಮೇಲೆ ನಂಬಿಕೆ ಇದೆಯೋ,
ಇಲ್ಲವೋ
ಅನ್ನೋದು ಪ್ರಶ್ನೆ ಅಲ್ಲ,
ಮುಂದಿನ
ಜನ್ಮದಲ್ಲಿ ಚೆನ್ನಾಗಿರೋಣ ಎಂಬ
ಭಾವನೆ ಬಹಳಷ್ಟು ಮನಸುಗಳಲ್ಲಿ
ಸುಳಿದಾಡುವುದು ಖಂಡಿತ.
ವೈಜ್ಞಾನಿಕ
ಜಗತ್ತು ನಿನ್ನೆ,
ಮೊನ್ನೆಯವರೆಗೂ
ಸಾವೇ ಕೊನೆ;
ಅಲ್ಲಿಂದ
ಆಚೆಗೆ ಏನೂ ಇಲ್ಲ ಎಂದು ಹೇಳುತ್ತಿತ್ತು.
ಇದೀಗ
ಪ್ರಕಟವಾಗಿರುವ ಹೊಸ ಸಿದ್ಧಾಂತ
ಹಳೆಯ ಸಿದ್ಧಾಂತವನ್ನು ಬುಡಮೇಲು
ಮಾಡಿದ್ದು,
ಸಾವು
ಕೊನೆಯಲ್ಲ,
ಕೊನೆಯೆಂಬುದೇ
ಇಲ್ಲ,
ಸಾವು
ರೂಪಾಂತರದ ಒಂದು ಪ್ರಕ್ರಿಯೆ
ಎಂದು ಪ್ರತಿಪಾದಿಸಿದೆ,
ಏನಿದು
ಸಿದ್ಧಾಂತ?:
ಸೈನ್ಸ್
ಜರ್ನಲ್‌ನಲ್ಲಿ ಪ್ರಕಟವಾಗಿರುವ
ಈ ಸಿದ್ಧಾಂತದ ಹೆಸರು ಬಯೋಸೆಂಟ್ರಿಸಮ್.
ಕ್ವಾಂಟಮ್
ಫಿಸಿಕ್ಸ್‌ನಲ್ಲೊಂದು ಸಿದ್ಧಾಂತವಿದೆ;
ಶಕ್ತಿಯನ್ನು
ಸೃಷ್ಟಿಸುವುದಕ್ಕೂ,
ನಾಶಪಡಿಸುವುದಕ್ಕೂ
ಸಾಧ್ಯವಿಲ್ಲ.
ಒಂದು
ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ
ಅದನ್ನು ರೂಪಾಂತರಿಸಬಹುದಷ್ಟೇ!
ಇದೇ
ಸಿದ್ಧಾಂತದ ಆಧಾರದಲ್ಲಿ ಜೀವಿಗಳ
ಹುಟ್ಟು,
ಸಾವಿನ
ಬಗ್ಗೆ ಚಿಂತನಾತ್ಮಕ ಸಂಶೋಧನೆ
ನಡೆಸಿದ ವಿಜ್ಞಾನಿ ಡಾ.ರಾಬರ್ಟ್
ಲಾಂಜಾ ಪ್ರತಿಯೊಂದು ಜೀವಿಯ ದೇಹವೂ
ನಶ್ವರ,
ಜೀವಿಗಳ
ಎಲ್ಲ ಕ್ರಿಯೆಗಳೂ ನಡೆಯುವುದು
ಅವುಗಳ ಒಳಗಿರುವ ಶಕ್ತಿ ಅಥವಾ
ಆತ್ಮಚೈತನ್ಯದ ಪ್ರಭಾವದಿಂದಾಗಿ
ಎಂಬುದನ್ನು ಕಂಡುಕೊಂಡಿದ್ದಾರೆ.
ಅಷ್ಟೇ
ಅಲ್ಲ,
ಈ
ಬ್ರಹ್ಮಾಂಡದಲ್ಲಿರುವುದು ಒಂದೇ
ವಿಶ್ವವಲ್ಲ,
ಇಂಥ
ಅಸಂಖ್ಯಾತ ವಿಶ್ವಗಳಿವೆ.
ಒಂದೊಂದು
ವಿಶ್ವವದಲ್ಲಿಯೂ ಅಲ್ಲಿನದ್ದೇ
ಆದಂಥ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ;
ಇನ್ನೊಂದು
ವಿಶ್ವದಲ್ಲಿ ಏನಾಗುತ್ತಿದೆ
ಎಂಬುದು ಮುಖ್ಯವಾಗುವುದಿಲ್ಲ
ಅಥವಾ ಒಂದು ವಿಶ್ವದಲ್ಲಿ ನಡೆಯುವ
ಪ್ರಕ್ರಿಯೆಗಳಿಗೂ ಇನ್ನೊಂದು
ವಿಶ್ವದಲ್ಲಿ ನಡೆಯುವ ಕ್ರಿಯೆಗಳಿಗೂ
ನಂಟಿರುವುದಿಲ್ಲ.
ಆದರೆ
ಒಂದು ವಿಶ್ವದಲ್ಲಿ ನಡೆಯುವ
ಕ್ರಿಯೆಯೇ ಇನ್ನೊಂದು ವಿಶ್ವದಲ್ಲಿಯೂ
ನಡೆಯಬಹುದು.
ಹಾಗಿದ್ದರೆ,
ಭೋಲೋಕದಲ್ಲಿ
ಮೃತಪಟ್ಟ ಜೀವಿಯ ಶಕ್ತಿ ಅಥವಾ
ಆತ್ಮಚೈತನ್ಯ ಇನ್ನೊಂದು ಲೋಕ
ಸೇರಿ ಅಲ್ಲಿನ ಜೀವಿಯಾಗಿ
ರೂಪಾಂತಗೊಳ್ಳುತ್ತದೆಯೇ?
ಹೀಗೆಯೇ
ಆಗಬೇಕು ಎನ್ನುವುದು ಸಂಶೋಧಕರ
ವಾದ.
ಶಕ್ತಿಯನ್ನು
ವಿವಿಧ ಸ್ಥಿತಿಗೆ ರೂಪಾಂತರಗೊಳಿಸಬಹುದಾದರೆ
ಜೀವಿಗಳ ಕಾರ್ಯಕ್ಕೆ ಕಾರಣೀಭೂತವಾಗಿರುವ
ಆತ್ಮಚೈತನ್ಯವೂ ವಿವಿಧ ಸ್ಥಿತಿಗಳಿಗೆ
ರೂಪಾಂತರಗೊಳ್ಳಬೇಕು ಎನ್ನುತ್ತಾರೆ
ಸಂಶೋಧಕರು.
ಬೆಳಕಿನ
ಪ್ರಯೋಗ:
ವಿವಿಧ
ಲೋಕಗಳಿಗೆ ಆತ್ಮಚೈತನ್ಯದ ರೂಪಾಂತರ
ಹೇಗಾಗಬಹುದು ಎಂಬುದನ್ನು
ಅರ್ಥೈಸಿಕೊಳ್ಳುವುದಕ್ಕಾಗಿ
ವಿಜ್ಞಾನಿಗಳು ಒಂದು ಪ್ರಯೋಗ
ನಡೆಸಿದ್ದಾರೆ.
ಬೆಳಕಿನ
ಕಿರಣಗಳನ್ನು ವಿಭಾಜಕ (ಬೀಮ್
ಸ್ಪ್ಲಿಟರ್)
ಮೇಲೆ
ಹಾಯಿಸಿದಾಗ,
ವಿಭಾಜಕವನ್ನು
ಸಂಧಿಸುವ ಬಿಂದುವಿನಲ್ಲಿ ಹೇಗೆ
ವರ್ತಿಸಬೇಕು ಎಂಬುದನ್ನು ಕಣಗಳು
ನಿರ್ಧರಿಸಿದವು.
ಬೆಳಕಿನ
ಕಿರಣಗಳನ್ನು ಎರಡನೇ ವಿಭಾಜಕದ
ಮೇಲೆ ಹಾಯಿಸದಾಗಲೂ ಇದೇ
ಪುನರಾವರ್ತನೆಯಾಯಿತು.
ಅಂದರೆ
ವಿಭಾಜಕಗಳು ಬೇರೆ ಬೇರೆಯಾದರೂ
ಶಕ್ತಿಯ ಮೂಲ ಒಂದೇ ಆಗಿದ್ದು,
ವಿಭಾಜಕವನ್ನು
ಸಂಧಿಸುವ ಬಿಂದುವಿನಲ್ಲಿ ಒಂದೇ
ರೀತಿಯ ವರ್ತನೆಯನ್ನು ಬೆಳಕಿನ
ಕಣಗಳು ತೋರಿದವು ಎನ್ನುತ್ತಾರೆ
ವಿಜ್ಞಾನಿ ಡಾ.ರಾಬರ್ಟ್
ಲಾಂಜಾ.
ನಮ್ಮ
ಮಿದುಳು ಎಲ್ಲವನ್ನೂ ಗ್ರಹಿಸುತ್ತದೆ,
ಕಿವಿ
ಕೇಳಿದ್ದನ್ನು ಗ್ರಹಿಸುವುದು
ಮಿದುಳು,
ಕಣ್ಣು
ನೋಡಿದ್ದನ್ನು ಗ್ರಹಿಸುವುದೂ
ಮಿದುಳು,
ಮೈ-ಕೈಗೆ
ನೋವಾದರೂ ಗ್ರಹಿಸುವುದು ಮಿದುಳು,
ರುಚಿ
ಗೊತ್ತಾಗುವುದೂ ಮಿದುಳಿನ
ಗ್ರಹಿಕೆಯಿಂದಲೇ..
ಇದೆಲ್ಲದಕ್ಕೂ
ಕಾರಣವಾಗುವುದು ದೇಶ-ಕಾಲ.
ಎಲ್ಲವನ್ನೂ
ಒಟ್ಟಾಗಿಸುವುದೇ ಈ ದೇಶ-ಕಾಲ
ಎನ್ನುತ್ತಾರೆ ಲಾಂಜಾ.
ದೇಶ-ಕಾಲ
ಮತ್ತು ಬ್ರಹ್ಮಾಂಡದ ನಡುವೆ ಒಂದು
ನಂಟಿದೆ.
ಅದು
ಆತ್ಮಚೈತನ್ಯವನ್ನು ವಿವಿಧ ವಿಶ್ವಗಳ
ನಡುವ IlI8?ೂಪಾಂತರಿಸುತ್ತದೆ.
ದೇಶ-ಕಾಲದ
ಜತೆಗೆ ಒಂದು ವಿಶ್ವದ ನಂಟಿಲ್ಲ
ಎಂದಾದರೆ ಅಲ್ಲಿ ಹುಟ್ಟು,
ಸಾವುಗಳೂ
ಇರುವುದಿಲ್ಲ ಎಂಬುದು ವಿಜ್ಞಾನಿಗಳ
ವಾದ.
ಐನ್‌ಸ್ಟೀನ್
ಸಾಯುವುದಕ್ಕೆ ಕೆಲವು ದಿನ ಮೊದಲು
ಅವರ ಸ್ನೇಹಿತ ಬೆಸ್ಸೋ ಎಂಬಾತ
ಮೃತಪಟ್ಟಿದ್ದ.
ಆಗ
ಐನ್‌ಸ್ಟೀನ್-‘ಬೆಸ್ಸೋ
ನನಗಿಂತ ಮೊದಲು ಸತ್ತ.
ಅದರರ್ಥ
ಏನಿಲ್ಲ,
ನಮ್ಮಂಥ
ಜನರು ಭೂತ,
ವರ್ತಮಾನ
ಮತ್ತು ಭವಿಷ್ಯದ ನಡುವಿನ ಅಂತರ
ಒಂದು ಭ್ರಮೆ ಎಂಬುದನ್ನು
ತಿಳುದುಕೊಂಡಿದ್ದಾರೆ’ ಎಂದಿದ್ದರು
ಎಂಬುದನ್ನು ಲಾಂಜಾ ನೆನಪಿಸಿಕೊಳ್ಳುತ್ತಾರೆ.
ನಡೆಯಬೇಕಿರುವ ಸಂಶೋಧನೆಗಳು ಎಷ್ಟೋ ಇವೆ. ಪ್ರತಿಯೊಂದು ಸಂಶೋಧನೆಯಲ್ಲೂ ರೋಚಕತೆ ಅಡಗಿರುತ್ತದೆ. ನಮ್ಮ ಹಿರಿಯರ ಅದೆಷ್ಟೋ ನಂಬಿಕೆಗಳು ಕೆಲವರ ಪಾಲಿಗೆ ಮೂಢನಂಬಿಕೆಯಾಗಿರುತ್ತದೆ. ಅದರಲ್ಲೂ ಒಂದು ಸತ್ಯವಿದೆ ಅನ್ನೋದನ್ನು ಈ ಸಂಶೋಧನೆ ಹೇಳುತ್ತಿದೆ. ಅತ್ಯುತ್ತಮ ಮಾಹಿತಿ.
ReplyDelete- ವಿದ್ಯಾ ಇವ೯ತ್ತೂರು
Beautiful concept Biocentrism.. really glad to know about it.. Thank you Prakash, for posting it..
ReplyDelete