ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ನೀರಿನ ಆಗರ ಪತ್ತೆ!



ನಮ್ಮ ಭೂಮಿಯಲ್ಲಿಯೇ ನೀರುರುವುದು, ನಾವೇ ಶ್ರೇಷ್ಠ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುತ್ತೇವೆ. ನಮಗಿಂತ ಹೆಚ್ಚು ಸಾಮಥ್ರ್ಯವುಳ್ಳವರು ಇಲ್ಲವೇ ಇಲ್ಲ ಎನ್ನುತ್ತೇವೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿರುತ್ತದಲ್ಲ?

ಹೌದು, ನಮ್ಮ ಭೂಮಿಗಿಂತ 140 ಲಕ್ಷ ಕೋಟಿ ಪಟ್ಟು ಅಧಿಕ ನೀರುಳ್ಳಂಥ ಒಂದು ಲೋಕ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಖಗೋಳಶಾಸ್ತ್ರಜ್ಞರು ಈ ನೀರಿನ ಆಗರವನ್ನು ಪತ್ತೆ ಮಾಡಿದ್ದು ಇದು ನಮ್ಮ ಭೂಮಿಯಿಂದ ಸುಮಾರು 30 ಕೋಟಿ ಕೋಟಿ ಕೋಟಿ (30 ಬಿಲಿಯನ್ ಟ್ರಿಲಿಯನ್) ಮೈಲಿಗಳಷ್ಟು ದೂರದಲ್ಲಿದೆ. ಅಲ್ಲದೆ, ನಮ್ಮ ಸೂರ್ಯನಿಗಿಂತ 2000 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿದೆ. ಈ ಕ್ವಸ್ಸಾರ್ (ಕ್ವಾಸಿ-ಸ್ಟೆಲ್ಲಾರ್ ರೇಡಿಯೋ ಸೋರ್ಸ್ ಅಥವಾ ಗೆಲಾಕ್ಸಿಯ ನ್ಯೂಕ್ಲಿಯಸ್ ಅಥವಾ ಕೇಂದ್ರ) ನಮ್ಮ ಭೂಮಿಯಿಂದ ಅತಿ ದೂರದಲ್ಲಿರುವ ಕಾರಣ ಇಲ್ಲಿಂದ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು 1200 ಕೋಟಿ ವರ್ಷಗಳು ಬೇಕು. ವಿಜ್ಞಾನಿಗಳ ಲೆಕ್ಕದ ಪ್ರಕಾರ ಭೂಮಿಗೆ ಕೇವಲ 160 ಕೋಟಿ ವರ್ಷಗಳಿದ್ದಾಗ ಈ ಕ್ವಸ್ಸಾರ್ನ ಪತ್ತೆ ಸಿಕ್ಕಿದೆ, ಅಂದರೆ ಯೂನಿವರ್ಸ್ ಅಥವಾ ಬ್ರಹ್ಮಾಂಡ ಇನ್ನೂ ಹಳೆಯದು ಎಂದು ಹೇಳಿದಂತಾಗುತ್ತದೆ. ಅಷ್ಟೇ ಅಲ್ಲ ನೀರು ಕೇವಲ ಭೂಮಿಯಲ್ಲಿ ಮಾತ್ರ ಇರುವುದಲ್ಲ ಇದು ಸರ್ವವ್ಯಾಪಿ. ಯಾವುದೇ ಕಾಯಗಳಲ್ಲಿ ನೋಡಿದರೂ ಅಲ್ಲಿ ನೀರಿದ್ದೇ ಇದೆ. ಆದರೆ ಯಾವುದಾದರೂ ಒಂದು ರೂಪದಲ್ಲಿ ಈ ನೀರಿನ ಅಂಶವಿರಬಹುದು ಎಂಬುದು ಕೂಡಾ ಸ್ಪಷ್ಟವಾಗುತ್ತದೆ. ಜೊತೆಗೆ ಈ ಕ್ವಸ್ಸಾರ್ನಲ್ಲಿ ಇರುವಂಥ ಅಗಾಧ ಪ್ರಮಾಣದ ನೀರು ನಮ್ಮ ಭೂಮಿಯಲ್ಲಿರುವ ನೀರುನ ರೂಪದಲ್ಲಿಯೇ ಇದೆ. ಇಂತಿರುವಾಗ ಅಲ್ಲಿ ಜೀವಾಸ್ತಿತ್ವ ಇರುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆ ಕೂಡಾ ವಿಜ್ಞಾನಿಗಳನ್ನು ಕಾಡುತ್ತಿದೆ.

ಈ ಕ್ವಸ್ಸಾರ್ ಅಥವಾ ಗೆಲಾಕ್ಸಿ ಕೇಂದ್ರದಲ್ಲಿರುವಂಥ ಸೂರ್ಯ ಪ್ರಸ್ತುತ ಕೃಷ್ಣಕುಹರಾವಸ್ಥೆ(ಬ್ಲಾಕ್ ಹೋಲ್) ಯಲ್ಲಿದ್ದು, ನಮ್ಮ ಸೂರ್ಯನಿಗಿಂತ 2000 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿದ್ದು, ನಮ್ಮ ಸೂರ್ಯನಂತಹ ಸಾವಿರ ಲಕ್ಷ ಕೋಟಿ ಸೂರ್ಯರು ಉತ್ಪತ್ತಿ ಮಾಡುವಷ್ಟು ಪ್ರಮಾಣದ ಶಕ್ತಿಯನ್ನು ಇದು ಉತ್ಪಾದಿಸುತ್ತದೆ. ಈ ಕ್ವಸ್ಸಾರ್ಗಿಂತ ಸುಮಾರು 4000 ಪಟ್ಟು ಕಡಿಮೆ ರಾಶಿಯುಳ್ಳಂಥ ನಮ್ಮ ಕ್ಷೀರಪಥ ಗೆಲಾಕ್ಸಿಯಲ್ಲಿಯೂ ನೀರಿನ ಅಂಶವಿದೆ. ಆದರೆ ಇಲ್ಲಿನ ನೀರಿನ ಅಂಶದ ಬಹುಪಾಲು ಸಾಂಧ್ರ ಮಂಜಿನ ರೂಪದಲ್ಲಿದೆ. ಹೊಸದಾಗಿ ಪತ್ತೆಯಾಗಿರುವಂಥ ಕ್ವಸ್ಸಾರ್ನಲ್ಲಿ ನೀರಿನ ಆಂಶ ಆವಿ ಮತ್ತು ದ್ರವರೂಪದಲ್ಲಿಯೇ ಇದೆ ಎಂಬುದು ವಿಶೇಷ. ಇಲ್ಲಿ ಕ್ವಸ್ಸಾರ್ ಎಂದರೆ ಒಂದು ಗ್ರಹವಲ್ಲ, ಇದೊಂದು ಗೆಲಾಕ್ಸಿ. ಇದರಲ್ಲಿ ಅದೆಷ್ಟು ಆಕಾಶಕಾಯಗಳಿವೆಯೋ? ಆ ಆಕಾಶಕಾಯಗಳಲ್ಲಿ ಇನ್ನೂ ಏನೇನಿವೆಯೋ? ಎಲ್ಲವುಗಳ ಬಗ್ಗೆಯೂ ಸಂಶೋಧನೆ ನಡೆಯಬೇಕಷ್ಟೆ.

ಈ ಕ್ವಸ್ಸಾರ್ನಲ್ಲಿರುವ ನೀರಿನ ಅಂಶಗಳು ಕೃಷ್ಣಕುಹರದ ಸುತ್ತ ಸುಮಾರು 600 ಲಕ್ಷ ಕೋಟಿ ಮೈಲಿಗಳಷ್ಟು ದೂರದಲ್ಲಿ ಚದುರಿ ಹೋಗಿವೆ. ನೀರಿನ ವಿಚಾರ ಮಾತ್ರವಲ್ಲದೆ ವಿಜ್ಞಾನಿಗಳ ತಂಡ ಆಕಾಶಕಾಯಗಳ, ಗೆಲಾಕ್ಸಿಗಳ ವಿವಿಧ ಗುಣಗಳ ಬಗ್ಗೆಯೂ ಸಂಶೋಧನೆ ನಡೆಸಿದೆ. ಎಲ್ಲವೂ ವೈಜ್ಞಾನಿಕ ಲೋಕಕ್ಕೊಂದು ಅಚ್ಚರಿಯೇ. ಎಲ್ಲದಕ್ಕಿಂತ ಮಿಗಿಲಾಗಿ ಇಂಥದ್ದೊಂದು ನೀರಿನ ಆಗರವೇ ಎಲ್ಲರನ್ನೂ ಚಕಿತರನ್ನಾಗಿಸಿದೆ. ಈ ಸಂಶೋಧನೆಗಳಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ (ಎನ್ಎಸ್ಎಫ್) ಅಗತ್ಯ ಹಣಕಾಸು ಸೌಲಭ್ಯವನ್ನು ಕಲ್ಪಿಸಿವೆ.

ಇಲ್ಲಿ ಇನ್ನೂ ಒಂದು ಮಹತ್ವದ ವಿಚಾರವನ್ನು ಗಮನಿಸಬೇಕು- ಈ ಕ್ವಸ್ಸಾರ್ನಿಂದ ಬೆಳಕಿನ ಒಂದು ಕಿರಣ ನಮ್ಮ ಭೂಮಿಗೆ ಬರಬೇಕು ಎಂದಾದರೆ 1200 ಕೋಟಿ ವರ್ಷಗಳಿ ಬೇಕು. ವೈಜ್ಞಾನಿಕ ಜಗತ್ತಿನ ಪ್ರಕಾರ ನಮ್ಮ ಭೂಮಿಯ ಆಯಸ್ಸು 460 ಕೊಟಿ ವರ್ಷ. ಹೀಗಿರುವಾಗ ಈಗ ಹೊಸದಾಗಿ ಪತ್ತೆಯಾದ ಕ್ವಸ್ಸಾರ್ಗೆ ಎಷ್ಟು ವರ್ಷವಾಗಿರಬಹುದು? ಹಲವು ಸಾವಿರ ಕೋಟಿ ವರ್ಷಗಳು! ಅಂದರೆ ಬ್ರಹ್ಮಾಂಡ ಅಥವಾ ಯೂನಿವರ್ಸ್ ಇನ್ನೆಷ್ಟು ವರ್ಷಗಳಿಂದ ಅಸ್ತಿತ್ವದಲ್ಲಿರಬಹುದು? ಈ ಅಂಕೆ ಸಂಖ್ಯೆಗಳು ನಮ್ಮ ಮನಸ್ಸಿಗೆ ನಿಲುಕುವುದಿಲ್ಲ!

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು