Posts

ಪುಟಾಣಿ ನವಿಲು

Image
ಪುಟಾಣಿ ನವಿಲು ಪುಟಾಣಿ ನವಿಲು ನವಿಲೇ ನವಿಲೇ ಪುಟಾಣಿ ನವಿಲೇ ನನ್ನ ಮುದ್ದು ಚೆಂದದ ನವಿಲೇ || ನಾನೂ ನೀನೂ ಅಕ್ಕ ತಂಗಿ ಹತ್ತಿರ ಬಂದು ಆಡು ಬಾ ನವಿಲೇ || ಅಪ್ಪ ಅಮ್ಮ ನನ್ನನು ಬಿಟ್ಟು ಪೇಟೆಗೆ ಹೋಗ್ತಾರೆ ಮರಿ ನವಿಲೇ || ನಿದ್ದೆ ಬಿಟ್ಟು ನಾನು ಎದ್ದಾಗ ಪಕ್ಕದಿ ನೀನೇ ಇರು ನವಿಲೇ || ಪೇಟೇಲಿ ಪೊಲೀಸ್ ಬಿಡ್ತಾ ಇಲ್ಲ ಮನೇಲೆ ನಾವು ಆಡುವ ನವಿಲೇ || ಪೇಟೇಲಿ ತಿಂಡಿ ಸಿಗುತ್ತಾ ಇಲ್ಲ ಸ್ವಲ್ಪ ಸ್ವಲ್ಪ ತಿನ್ನುವ ನವಿಲೇ || ಅಜ್ಜಿ ಟೀವಿಲಿ ವಾರ್ತೆ ನೋಡ್ತಾರೆ ನಾನೂ ನೀನೂ ಕಾರ್ಟೂನು ನೋಡುವ || ವಾಕಿಂಗ್ ಹೋಗುವ ಬಾ ನವಿಲೇ ಆಟವನಾಡುವ ಓ ನವಿಲೇ || ಹೃದಯದಿ ಪ್ರೀತಿ ತುಂಬಾ ತುಂಬಾ ನನ್ನ ತಂಗಿ ಪುಟ್ಟು ನವಿಲೇ || ಇಂದು ತುಂಬಾ ಮಳೆಯ ಹನಿಯು ಬರಲೇ ಇಲ್ಲ ಯಾಕೇ ನವಿಲೇ || ಮನೆಯ ಒಳಗೆ ಇದ್ದೂ ಇದ್ದೂ ಬೇಜಾರೂ ಆಯ್ತು ಮುದ್ದು ನವಿಲೇ || ನಿನಗೇ ಒಂದು ಬಂಗಾರ ಗೆಜ್ದೆ ತಂದು ಕೊಡುವೆ ಕುಣಿಯೋಣ ನವಿಲೇ || ನಾನೂ ನೀನು ಸೇರಿಕೊಂಡು ಚಂದದ ಡ್ಯಾನ್ಸು ಮಾಡುವ ನವಿಲೇ || ಥಕ ದಿನ್ನ ತೈ ತಕಿಟ ತಾಂ ತಕಿಟ ತೋಂ ದಿನ ದಿನ್ನ ತ್ತಾಂ ತರಿಕಿಟ ದಿನ ದಿನ್ನ ತ್ತೋಂ ಧಿಮಿ ಧಿಮಿತ ಧಿಮಿತ ಧೀಂ || ಪರಿಕಲ್ಪನೆ, ಸಾಹಿತ್ಯ – ಪ್ರಣಮ್ಯ ಡಿ. ಶರ್ಮ ಅಕ್ಷರ, ಪದ್ಯರೂಪ – ಪ್ರಕಾಶ್ ಪಯಣಿಗ

ಶಿವ ರೂಪಕಲ್ಪನ ಕಾವ್ಯ

Image
ಶಿವ ರೂಪಕಲ್ಪನ ಕಾವ್ಯ ಹಿಮಸುತೆಯಪತಿ ಮಹಿಮಗಿರಿಯೊಡೆಯ ಶಂಭೋ ಮನದರಿಯ ತರಿದು ಅರಿವ ಬೆಳಗಿಸು ಶಂಭೋ || ಪ || ಹರಹರ ಲಯಹರ ಮೃದುವದನ ಹರಿಬಂಧು ಜಯಕರ ಹಿತಕರ ಜನಮನಗಮನ ಸಿಂಧು ದಿನಕರ ಯಮಹರ ಮದನಹರ ಹರ ಶಂಭೋ ವರ ವರದ ಅಮರ ರುದಿರ ಶಿಶಿರ ಸುಬಂಧು || ೧ || ಅಸುರ ಸುರ ನರ ಅಚರ ಚರ ಗಣಕೆ ಈಶ ಮೃಗಚರುಮ ವಸನ ಮೃಗಪತಿಯೆ ಜಗದೀಶ ಮನನ ಗಮನ ಕಿಡಿನಯನ ಪರಮ ಗಿರೀಶ ಗುಹ ಗಣಪ ಗಿರಿಜೆಯೊಡೆಯನೆ ಉರಗಭೂಷ || ೨ || ಕರದೊಳಗೆ ಡಮ ಡಮ ಡಮ ಡಮರ ನಿನಾದ ಜಗಜಗದ ಕಣಕಣದಿ ಶಿವ ಶಿವ ಸುನಾದ ಮನಕೆರಳೆ ಸುಡುಕಿಡಿಗೆ ಯುಗಯುಗದ ಅಂತ್ಯ ಗತಿಯೆನಲು ಗತನವನು ಅಮಿತಜನ ವಂದ್ಯ || ೩ || ಜನಮನಕೆ ಕೆಡುಕೆನಿಪ ಕಳೆಕಳೆವ ಕಾಲ ಇರಿದಿರಿದು ಅರಿಗಳೆದೆ ಬಗೆಬಗೆವ ಶೂಲ ಬಳಿದಿರಲು ಮಸಣ ಬಸುಮ ಮಹಿಮೆ ಅನಂತ ಅಹಿತವನು ಹಿತವೆನಲು ಕರುಣಶಿವ ಕಾಂತ || ೪ || ಜಗದಗಲ ಹರ ತಿರುಗೆ ಹೊರುವನವ ನಂದಿ ಶಿವಶಿವೆಯ ಮಹಿಮೆ ಜನ ತಿಳಿಯೆ ನೆಪ ಭೃಂಗಿ ಹರನೊಲವ ಇಳೆಗರುಹೆ ಮಹಿಮಗಣ ಶೃಂಗಿ ವಿಷಕುಡಿದು ಜಗಪೊರೆದ ಪಶುಪತಿಯೆ ದಂಡಿ || ೫ || ಶಿರದೊಳಗೆ ಶಶಿಬೆಳಗೆ ನಿಶೆಗಳೆವ ಚಂದ ಹರಜಟೆಯೆ ನೆಲೆಯೆನುವ ಸುರನದಿಯು ಗಂಗಾ ದುರುಳಮನ ಮತಿಗೆಡಿಪ ನಿಜಶರ ಪಿನಾಕಿ ನಿಜಬಕುತಿ ಜಗಮುಕುತಿ ಶಿವನೊಲವ ನಾಕ || ೬ || ಶಿವನೆನೆಯೆ ಪದುಮಜನು ಜಗಸೃಜಿಪ ಹಂಸ ಜಗಪೊರೆವ ಹರಿಯಿರಲು ಉಸಿರುಸಿರೆ ವಂಶ ಉಸಿರಳಿಯೆ ಲಯಹರನೆ ಇಹ ಪರಮಹಂಸ ಸಕಲಮನ ಇಹಪರದಿ ಶಿವಶಿವೆಯ ಅಂಶ || ೭ ||

ಮಹಾವಿಷ್ಣು ರೂಪಕಲ್ಪನ ಕಾವ್ಯವುಂ

Image
ಮಹಾವಿಷ್ಣು ರೂಪಕಲ್ಪನ ಕಾವ್ಯವುಂ ಕೇಶವನಾನಂದದ ರೂಪರಾಶಿಂ ಬ್ರಹ್ಮಾಂಡದಾಪಾರ ಚರಾಚರಾತ್ಮಂ ವಂದೇ ಗದಾಧರ ಮಹಾಸುರೂಪಂ ಸಾನಂದ ನಾರಾಯಣ ಪಾದಪದ್ಮಂ ||೧|| ಕ್ಷೀರಾಂಬುಧಿವಾಸ ಸುಶಾಂತ ಮೂರ್ತಿಂ ಬಾಳೆಂಬ ಮಾಯಾಜಗವೆಲ್ಲ ಕ್ಷೀರಂ ಅರ್ಥೈಸೆ ಮೂಲೋಕ ಮಹಾಂತ ಸತ್ಯಂ ಸಾನಂದ ನಾರಾಯಣ ಪಾದಪದ್ಮಂ ||೨|| ಪಾಲೆಂದು ಪಾಲಾಗಿರದೆಂಬ ಸತ್ಯಂ ಪಾಳಾಗಿ ಮೂರೇ ದಿನಕಾಯುನಾಶಂ ಕ್ಷೀರಾಂತರಾಳಂ ದಿಟದೇವವಾಸಂ ಸಾನಂದ ನಾರಾಯಣ ಪಾದಪದ್ಮಂ ||೩|| ಹೆಪ್ಪೆರೆದಾಗಂ ಮೊಸರಾಗಿ ಪಾಲುಂ ಬಾಳ್ಪುದು ನಾಕಾರು ದಿನಾಂತಕಂತಂ ಕ್ಷೀರಂ ದಧಿಯುಂ ಹರಿದೇವವಾಸಂ ಸಾನಂದ ನಾರಾಯಣ ಪಾದಪದ್ಮಂ ||೪|| ಮಂಥನವಂ ಮಾಡೆ ದಧಿಯನೀಗಂ ಉದ್ಭವವುಂ ಕ್ಷೀರಸಮುದ್ರಸಾರಂ ಪ್ರತ್ಯಕ್ಷರೂಪಂ ನವನೀತಚೋರಂ ಸಾನಂದ ನಾರಾಯಣ ಪಾದಪದ್ಮಂ ||೫|| ಘೃತಸ್ವರೂಪಂ ವಸುದೇವದೇವಂ ಸಾಧಾರ ಸಾಕ್ಷ್ಯಂ ಜಯನಾಮಮಂತ್ರಂ ಅರ್ಥೈಸೆ ಮೋಕ್ಷಂ ಜಗದಾದಿ ಲೋಕಂ ಸಾನಂದ ನಾರಾಯಣ ಪಾದಪದ್ಮಂ ||೬|| ಮಾಯಾಮನೋಹರನು ಆದಿಶೇಷಂ ಶೇಷತಲ್ಪಶಾಯಿ ಸುಯೋಗರೂಪಂ ನಾಗಸ್ವರೂಪಂ ಅರಿತಂದು ಬಾಳ್ಪುಂ ಸಾನಂದ ನಾರಾಯಣ ಪಾದಪದ್ಮಂ ||೭|| ಬ್ರಹ್ಮಾಂಡದಾಧಿಕ ಕಠೋರ ಕಷ್ಟಂ ಪಾಶಸ್ವರೂಪಂ ಕಡುಕಷ್ಟವೆಲ್ಲಂ ಕಷ್ಟಂಗಳ ಮೇಲೆ ಸುಖಾಂತ ಕಾಲಂ ದೃಷ್ಟಾಂತ ನಾರಾಯಣ ಪಾದಪದ್ಮಂ ||೮|| ಪೋರಾಡುತಂ ಜೀವನ ಜೀವನಾಂತಂ ಪೋರಾಟದಾ ರೂಪವಿರೂಪ ಶೇಷಂ ಶೇಷನದಾತಂಕಗಳಿಂಗತೀತಂ ಪ್ರಣಾಮಿ ನಾರಾಯಣ ಪಾದಪದ್ಮಂ ||೯|| ಶೇಷ ಸುಕಾ

ಆದಿಶಕ್ತಿ ರೂಪಕಲ್ಪನ ಕಾವ್ಯವುಂ

Image
ಆದಿಶಕ್ತಿ ರೂಪಕಲ್ಪನ ಕಾವ್ಯವುಂ ( ಈ ಕೀರ್ತನೆಯ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.... https://youtu.be/U93ata9WePo   ) ನಿರಾಕಾರ ಓಂಕಾರ ರೂಪಾದಿಯುಂ ಬಹೂವಾಗಲೆಂದೊಮ್ಮೆ ಮೂಲೋಕದಿಂ ಸುಶೋಭಿಪ ರೂಪಪ್ರಭಾಪುಂಜವುಂ ಅನಂತಾಣು ಜೀವಾಣು ರೂಪಾಂತರಂ ||೧|| ವಿಧಿ ಈಶ ಮಾಧವನಾ ದೇವಿಯುಂ ದುರ್ಗಾ ಶಾರದಾ ಲಕ್ಷ್ಮಿಯಾ ರೂಪವುಂ ಸುರಾಧಿಪ ತಾರಾಜಗಂ ಪಾತಲಂ ಅನಾದಿಂ ಅನಂತಂ ಮಹಾಮಾಯೆಯುಂ ||೨|| ದಿಶೆಯೆಂಟು ಭುಜಂಗಳಾ ದೇವಿಯುಂ ಸಹಸ್ರಾರು ಲೋಕಂಗಳಾ ಕೇಶವುಂ ಇನಾಮಂಡಲಂ ಕೋಟಿ ನೇತ್ರಂಗಳುಂ ಅನಾದಿಂ ಅನಂತಂ ಮಹಾಮಾಯೆಯುಂ ||೩|| ವಸುಂಧರೆಯುಂ ದೇವಿ ಪಾದಂಗಳುಂ ನಭೋಕಾಯ ಕಾಯಂಗಳಂಗಾಂಗವುಂ ಅಸಂಖ್ಯಾತ ಆತ್ಮಂಗಳೇ ಕಾಯವುಂ ಅನಾದಿಂ ಅನಂತಂ ಮಹಾಮಾಯೆಯುಂ ||೪|| ನಿಜಜ್ಞಾನ ರೂಪಂ ಮಹಾಚಕ್ರವುಂ ಸಹಸ್ರಾರ ಉತ್ಥಾನದಾ ಕಾಯಕಂ ಸಹಸ್ರಾರು ಜೀವಂಗಳಾ ಮೋಚಕಂ ಅನಾದಿಂ ಅನಂತಂ ಮಹಾಮಾಯೆಯುಂ ||೫|| ಮಹಾಕಾಲ ರೂಪಂ ಮಹಾಶೂಲವುಂ ಮಹಾಲೋಕಪಾಲಂ ಕುಕಾಲಾಂತಕಂ ಸುಕಾಲಂ ಸುಲೋಕಂ ಸದಾಸುಂದರಂ ಅನಾದಿಂ ಅನಂತಂ ಮಹಾಮಾಯೆಯುಂ ||೬|| ಸುದಂಡಂ ಮನೋರೂಪ ನೀರಾಜನಂ ಮನೋಮಂದಿರಾಕಾರ ಸಾಕಾರವುಂ ಮನೋವಾಸಿ ಮೋಹಾಂತಕಾ ಲೀಲೆಯುಂ ಅನಾದಿಂ ಅನಂತಂ ಮಹಾಮಾಯೆಯುಂ ||೭|| ದುರಾಚಾರವುಂ ಚೇತನಾಘಾತಕಂ ನಿಶಾಕೂಪ ನಿಸ್ತೇಜ ಬೀಜಾಂಕುರಂ ಮದಾಂತಂ ನಿಶಾಂತಂ ಗದಾಘಾತವುಂ ಅನಾದಿಂ ಅನಂತಂ ಮಹಾಮಾಯೆಯುಂ ||೮|| ಮಹಾಂಡಾಂಡ ಬೀಜಂ ಮಹೋಂಕಾರವುಂ ಸುಶಂಖಾ ನಿನಾದಾದಿ ಆದ್ಯಂತವುಂ

ಧ್ಯಾನ ಕಾವ್ಯಂ

Image
ಧ್ಯಾನ ಕಾವ್ಯಂ ಗೌರೀಸುತಂ ಹರಿಹರಂ ಗಿರಿಜಾಲತಾಂಗೀಂ ಮುಂದಾಗಿ ಚಂದದೊಳು ಭಜಿಸಲಾದಿದೇವೀಂ ದುರ್ಗಾಂಬೆಯಾದಿಯಲಿ ವಂದಿಸಿ ಪಾದಪದ್ಮಂ ಹರ್ಷದೊಳುಂ ಪಿರಿದೊರ್ಣಿಪೆನುನಾ ಸುಕಾವ್ಯಂ ||೧|| ಈಶ್ವರಿಯಂ ನೆನೆದು ವಂದಿಸುತಾದಿಮಾತಾ ಸಿಂಗಾರವುಂ ತನುಮನಂ ನೆನೆದಾಗ ದೇವೀಂ ಗೋವಿಂದನಂ ಸುತಿಸಿ ಭಜಿಸುತಂ ಮಹಾತ್ಮಂ ಲೋಕಾದಿಲೋಕತಿಲಕಂಗೆನಸುಂ ನಮಸ್ತೇ ||೨|| ಮಾತಾಪಿತಂ ಪಿರಿಯರಂ ಅನುರಾಗದಿಂದಂ ಪಾದಾಂಬುಜಂ ಪಿಡಿದು ಯೋಗವನುಂ ಗಳಿಸಿಂ ವಿಷ್ಣುಂ ಕುಲಾದಿಕುಲದೇವನ ನಾಮಪಾಡಿಂ ಈಶಂನಮಾಮಿ ಮನಸಾಮನಸಾದಿ ದೇವಂ ||೩|| ಉಲ್ಲಾಸದಿಂ ಗುರು ಸುಶಂಕರನಂ ಸುಪಾದಂ ವಂದಾರು ವಂದಿಸುತ ಭಕುತಿಯಿಂದಲೀಗಂ ಆದ್ಯಂತದಿಂ ಗುರು ಪದಾಂಬುಜಕೇಂ ನಮಾಮಂ ಪ್ರಾರ್ಥನೆಯುಂ ಸುಮನದಿಂ ಗುರುದೇವದೇವಂ ||೪|| ದೇವಾದಿದೇವರನತಂ ಪದಪೂಜೆಯಿಂದಂ ದರ್ಶನವಂ ಪಡೆಯುತಂ ಗುರುಪಾದಪದ್ಮಂ ಶ್ರೀರೂಪವುಂ ಗುರುಮುಖಂ ಗುರುವಾದಿಪೂಜ್ಯಂ ವಂದೇ ಗುರುಂ ಗುರುಪದಂ ಗುರುರಾಮಚಂದ್ರಂ ||೫|| ಪೂಜ್ಯವಿವಂ ಮಮತೆಯುಂ ಮಮತಾಮಯೀಯುಂ ಮಾತಾ ಮಧುರಮನ ಮಾಲಿನಿಯುಂ ಮನೋಜ್ಞೇಂ ವಂದೇ ಅಖಿಲಜಗವಂದಿತೆ ರಾಜರಾಜೇ- ಶ್ವರೀಂ ನಮೋ ಪದುಮರೂಪ ಸುನಾದರೂಪಂ ||೬|| ಮಂದಾರವುಂ ಕವನವುಂ ಮಹಿಮಾಸುಧೆಯುಂ ಕಾವ್ಯಂ ಸುಭಾವದಲಿ ನಾದವಿದುಂ ಸುಗಾನಂ ಮೋದಾತಿಮೋದವಿದು ಪಾವನರಾಗರಾಗಂ ಆನಂದದಿಂ ಸುತಿಸೆ ತೋರುವುದು ದೇವಿರೂಪಂ ||೭|| ಒಳ್ಳಿತವುಂ ಪದಪದಂ ಪದಪುಂಜಪುಂಜಂ ಅಂಬಾರಿಯಂಬಿಕೆಗಿದುಂ ಲಲಿತಾಂಬಲೀಲಂ ಬ್ರಹ್ಮಾಂಡದಿಂ ದಿಟವಿದುಂ ಕ

Vedam and Stotram

Here is a new you tube channel. It contains recordings of vedam and Stotram. Visit the channel and don't forget to subscribe. https://youtube.com/channel/UCVSVPHp1GwkovToC2KhRTfw

ಗಣೇಶ ರೂಪಕಲ್ಪನ ಕಾವ್ಯ

Image
(ಈ ಕೀರ್ತನೆಯ ಸುಮಧುರ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.... https://youtu.be/C5LnEDpG-cQ ) ಮೂಢಮನವನೇಳಿಸಿ ಜ್ಞಾನವೃದ್ಧಿಯ ಮಾಡುಬಾ ದಿವ್ಯಮೂರ್ತಿ ಬುದ್ಧೀಶನೇ ಜೈ ಜೈ ಗಣೇಶ ಪಾಹಿಮಾಂ ||ಪ|| ಗಕಾರ ರೂಪ ಪೂರ್ವದಿ ಪಾದ ಪೂಜೆಯ ಮಾಡುವೆ ಕಾಲಾತೀತದ ಕಾಲ್ಗಳೋ ಜೈ ಜೈ ಗಣೇಶ ಪಾಹಿಮಾಂ ||೧|| ಗರ್ವ ಬಂಡಾಟ ಗೀಳೇಕೆ ಭೂಮಿಯಲೊಂದು ಪಾದವು ಪರತತ್ವದೊಳೇ ಮುಕ್ತಿ ಜೈ ಜೈ ಗಣೇಶ ಪಾಹಿಮಾಂ ||೨|| ಪಾದವಿನ್ನೊಂದೆತ್ತರದಿ ಕ್ಷರಲೌಕಿಕ ಬೇಡವೋ ಬ್ರಹ್ಮವಕ್ಷಯ ಕಾಣಿಸೋ ಜೈ ಜೈ ಗಣೇಶ ಪಾಹಿಮಾಂ ||೩|| ಪಾದ ಪಾದದ ರೂಪವು ಕ್ಷಯಾಕ್ಷಯದ ಅಂತರ ಪಾದ ತಿಳಿಯೆ ಸ್ವರ್ಗವು ಜೈ ಜೈ ಗಣೇಶ ಪಾಹಿಮಾಂ ||೪|| ಮಧ್ಯಮವು ಅಕಾರವು ಭವ್ಯ ಬ್ರಹ್ಮಾಂಡ ರೂಪವು ಅನಂತಾಖಂಡ ಸಾದೃಶ್ಯ ಜೈ ಜೈ ಗಣೇಶ ಪಾಹಿಮಾಂ ||೫|| ನಾಗಪಾಶದಿ ಬಂಧಿತ ವಿಶ್ವಾಶ್ವಾಕ್ಷದೆಲ್ಲ ಕಣ ಪಾಶದಾಚೆ ಮುಕ್ತಿಲೋಕ ಜೈ ಜೈ ಗಣೇಶ ಪಾಹಿಮಾಂ ||೬|| ಭವದಿಚ್ಛೆಯೆಲ್ಲವಿದು ಭಕ್ಷ್ಯಭೋಜ್ಯ ಲಡ್ಡುಗಳು ವಾಂಛೆ ತ್ಯಜಿಸೆ ಬ್ರಹ್ಮೈಕ್ಯ ಜೈ ಜೈ ಗಣೇಶ ಪಾಹಿಮಾಂ ||೭|| ಚಿತ್ತ ಮರ್ಕಟ ಬಂಧಕೆ ಪರಶು ಪಾಶದಂಕುಶ ದಿವ್ಯ ಹೃದಯ ತುಂಬಿಕೋ ಜೈ ಜೈ ಗಣೇಶ ಪಾಹಿಮಾಂ ||೮|| ಭವ್ಯ ರೂಪವ ನೋಡಿದೆ ಮಿಥ್ಯ ಮೋಹವೆಲ್ಲ ಕಳೆ ಭವಸಾಗರ ದಾಟಿಸೋ ಜೈ ಜೈ ಗಣೇಶ ಪಾಹಿಮಾಂ ||೯|| ಅನುಸ್ವಾರಾಂತ ರೂಪವು ಶೂನ್ಯದೊಳು ಸರ್ವೈಕವೋ ಋಣ ಧನದ ಹಂಗೇಕೋ ಜೈ ಜೈ ಗಣೇಶ ಪಾಹಿಮಾಂ ||೧೦|| ಆರೋಗ್ಯವದು ಭಾಗ್ಯವೋ ನೆಮ್