ಧ್ಯಾನ ಕಾವ್ಯಂ


ಧ್ಯಾನ ಕಾವ್ಯಂ

ಗೌರೀಸುತಂ ಹರಿಹರಂ ಗಿರಿಜಾಲತಾಂಗೀಂ
ಮುಂದಾಗಿ ಚಂದದೊಳು ಭಜಿಸಲಾದಿದೇವೀಂ
ದುರ್ಗಾಂಬೆಯಾದಿಯಲಿ ವಂದಿಸಿ ಪಾದಪದ್ಮಂ
ಹರ್ಷದೊಳುಂ ಪಿರಿದೊರ್ಣಿಪೆನುನಾ ಸುಕಾವ್ಯಂ ||೧||

ಈಶ್ವರಿಯಂ ನೆನೆದು ವಂದಿಸುತಾದಿಮಾತಾ
ಸಿಂಗಾರವುಂ ತನುಮನಂ ನೆನೆದಾಗ ದೇವೀಂ
ಗೋವಿಂದನಂ ಸುತಿಸಿ ಭಜಿಸುತಂ ಮಹಾತ್ಮಂ
ಲೋಕಾದಿಲೋಕತಿಲಕಂಗೆನಸುಂ ನಮಸ್ತೇ ||೨||

ಮಾತಾಪಿತಂ ಪಿರಿಯರಂ ಅನುರಾಗದಿಂದಂ
ಪಾದಾಂಬುಜಂ ಪಿಡಿದು ಯೋಗವನುಂ ಗಳಿಸಿಂ
ವಿಷ್ಣುಂ ಕುಲಾದಿಕುಲದೇವನ ನಾಮಪಾಡಿಂ
ಈಶಂನಮಾಮಿ ಮನಸಾಮನಸಾದಿ ದೇವಂ ||೩||

ಉಲ್ಲಾಸದಿಂ ಗುರು ಸುಶಂಕರನಂ ಸುಪಾದಂ
ವಂದಾರು ವಂದಿಸುತ ಭಕುತಿಯಿಂದಲೀಗಂ
ಆದ್ಯಂತದಿಂ ಗುರು ಪದಾಂಬುಜಕೇಂ ನಮಾಮಂ
ಪ್ರಾರ್ಥನೆಯುಂ ಸುಮನದಿಂ ಗುರುದೇವದೇವಂ ||೪||

ದೇವಾದಿದೇವರನತಂ ಪದಪೂಜೆಯಿಂದಂ
ದರ್ಶನವಂ ಪಡೆಯುತಂ ಗುರುಪಾದಪದ್ಮಂ
ಶ್ರೀರೂಪವುಂ ಗುರುಮುಖಂ ಗುರುವಾದಿಪೂಜ್ಯಂ
ವಂದೇ ಗುರುಂ ಗುರುಪದಂ ಗುರುರಾಮಚಂದ್ರಂ ||೫||

ಪೂಜ್ಯವಿವಂ ಮಮತೆಯುಂ ಮಮತಾಮಯೀಯುಂ
ಮಾತಾ ಮಧುರಮನ ಮಾಲಿನಿಯುಂ ಮನೋಜ್ಞೇಂ
ವಂದೇ ಅಖಿಲಜಗವಂದಿತೆ ರಾಜರಾಜೇ-
ಶ್ವರೀಂ ನಮೋ ಪದುಮರೂಪ ಸುನಾದರೂಪಂ ||೬||

ಮಂದಾರವುಂ ಕವನವುಂ ಮಹಿಮಾಸುಧೆಯುಂ
ಕಾವ್ಯಂ ಸುಭಾವದಲಿ ನಾದವಿದುಂ ಸುಗಾನಂ
ಮೋದಾತಿಮೋದವಿದು ಪಾವನರಾಗರಾಗಂ
ಆನಂದದಿಂ ಸುತಿಸೆ ತೋರುವುದು ದೇವಿರೂಪಂ ||೭||

ಒಳ್ಳಿತವುಂ ಪದಪದಂ ಪದಪುಂಜಪುಂಜಂ
ಅಂಬಾರಿಯಂಬಿಕೆಗಿದುಂ ಲಲಿತಾಂಬಲೀಲಂ
ಬ್ರಹ್ಮಾಂಡದಿಂ ದಿಟವಿದುಂ ಕವನಂ ಮಹಾಂತಂ
ಯೋಗಾದಿಯೋಗ ಯುಗಯೋಗ ಸುಯೋಗ ಸಾರಂ ||೮||

ಅಂಬಾಪದಂದದಿ ನಿವೇದವಿದುಂ ಸುಕಾವ್ಯಂ
ಪ್ರಕಾಶವುಂ ಪಯಣಿಗನ್ಬರೆದೀ ಮಹಾತ್ಮ್ಯಂ
ಶಕ್ತಿಯಿದುಂ ಪರಮಪಾವನ ದೇವಿಯಂಘ್ರಿಂ
ಕೈನೀಡುತಾ ಪೊರೆವಳುಂ ಮನಮಂದಿರಾತ್ಮಂ ||೯||

ಚಂದಾತಿಚಂದದೊಳು ಪಾಡಲು ಭಕ್ತಿಯಿಂದಂ
ಸಂಪ್ರೀತರುಂ ಲಕುಮಿ ಶಾರದೆ ಶಾಂಕರೀಯುಂ
ಪ್ರಾಪ್ತವದುಂ ಸಕಲ ಕಾಮನವುಂ ಸುಜನ್ಮಂ
ಪ್ರಮಾಣವೀಜಗದ ಸಂಕಲೆಯಿಂ ಮುಕ್ತಿಯುಂ ||೧೦||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು