ಆದಿಶಕ್ತಿ ರೂಪಕಲ್ಪನ ಕಾವ್ಯವುಂ

ಆದಿಶಕ್ತಿ ರೂಪಕಲ್ಪನ ಕಾವ್ಯವುಂ

(ಈ ಕೀರ್ತನೆಯ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....


ನಿರಾಕಾರ ಓಂಕಾರ ರೂಪಾದಿಯುಂ
ಬಹೂವಾಗಲೆಂದೊಮ್ಮೆ ಮೂಲೋಕದಿಂ
ಸುಶೋಭಿಪ ರೂಪಪ್ರಭಾಪುಂಜವುಂ
ಅನಂತಾಣು ಜೀವಾಣು ರೂಪಾಂತರಂ ||೧||

ವಿಧಿ ಈಶ ಮಾಧವನಾ ದೇವಿಯುಂ
ದುರ್ಗಾ ಶಾರದಾ ಲಕ್ಷ್ಮಿಯಾ ರೂಪವುಂ
ಸುರಾಧಿಪ ತಾರಾಜಗಂ ಪಾತಲಂ
ಅನಾದಿಂ ಅನಂತಂ ಮಹಾಮಾಯೆಯುಂ ||೨||

ದಿಶೆಯೆಂಟು ಭುಜಂಗಳಾ ದೇವಿಯುಂ
ಸಹಸ್ರಾರು ಲೋಕಂಗಳಾ ಕೇಶವುಂ
ಇನಾಮಂಡಲಂ ಕೋಟಿ ನೇತ್ರಂಗಳುಂ
ಅನಾದಿಂ ಅನಂತಂ ಮಹಾಮಾಯೆಯುಂ ||೩||

ವಸುಂಧರೆಯುಂ ದೇವಿ ಪಾದಂಗಳುಂ
ನಭೋಕಾಯ ಕಾಯಂಗಳಂಗಾಂಗವುಂ
ಅಸಂಖ್ಯಾತ ಆತ್ಮಂಗಳೇ ಕಾಯವುಂ
ಅನಾದಿಂ ಅನಂತಂ ಮಹಾಮಾಯೆಯುಂ ||೪||

ನಿಜಜ್ಞಾನ ರೂಪಂ ಮಹಾಚಕ್ರವುಂ
ಸಹಸ್ರಾರ ಉತ್ಥಾನದಾ ಕಾಯಕಂ
ಸಹಸ್ರಾರು ಜೀವಂಗಳಾ ಮೋಚಕಂ
ಅನಾದಿಂ ಅನಂತಂ ಮಹಾಮಾಯೆಯುಂ ||೫||

ಮಹಾಕಾಲ ರೂಪಂ ಮಹಾಶೂಲವುಂ
ಮಹಾಲೋಕಪಾಲಂ ಕುಕಾಲಾಂತಕಂ
ಸುಕಾಲಂ ಸುಲೋಕಂ ಸದಾಸುಂದರಂ
ಅನಾದಿಂ ಅನಂತಂ ಮಹಾಮಾಯೆಯುಂ ||೬||

ಸುದಂಡಂ ಮನೋರೂಪ ನೀರಾಜನಂ
ಮನೋಮಂದಿರಾಕಾರ ಸಾಕಾರವುಂ
ಮನೋವಾಸಿ ಮೋಹಾಂತಕಾ ಲೀಲೆಯುಂ
ಅನಾದಿಂ ಅನಂತಂ ಮಹಾಮಾಯೆಯುಂ ||೭||

ದುರಾಚಾರವುಂ ಚೇತನಾಘಾತಕಂ
ನಿಶಾಕೂಪ ನಿಸ್ತೇಜ ಬೀಜಾಂಕುರಂ
ಮದಾಂತಂ ನಿಶಾಂತಂ ಗದಾಘಾತವುಂ
ಅನಾದಿಂ ಅನಂತಂ ಮಹಾಮಾಯೆಯುಂ ||೮||

ಮಹಾಂಡಾಂಡ ಬೀಜಂ ಮಹೋಂಕಾರವುಂ
ಸುಶಂಖಾ ನಿನಾದಾದಿ ಆದ್ಯಂತವುಂ
ಸಜೀವಂ ಸಚೇತಂ ಜಗದ್ವ್ಯಾಪಿಯುಂ
ಅನಾದಿಂ ಅನಂತಂ ಮಹಾಮಾಯೆಯುಂ ||೯||

ಮೃಗಾಧಿಪನುಂ ಶೂರಸೇನಾನಿಯುಂ
ದೃಢಚಿತ್ತ ಗಂಭೀರ ಭಯಾಂತಕಂ
ಮನೋಹಾರಿ ಸಿಂಹಂ ಸುಶಾತಂ ಸದಾ
ಅನಾದಿಂ ಅನಂತಂ ಮಹಾಮಾಯೆಯುಂ ||೧೦||

ಸದಾನಂದ ಓಂಕಾರ ದೇವೀಂ ನಮೋ
ಅನೇಕಂ ಯುಗಾಂತಂ ಯುಗಾದಿಂ ನಮೋ
ವಿಶಾಲಂ ಸುರೂಪಂ ಸುಕಾಯಂ ನಮೋ
ಅನಾದಿಂ ಅನಂತಂ ಅಖಂಡಂ ನಮೋ ||೧೧||

ಸುರಾಗಂ ಸುನಾದಂ ಸುಕಾಂತಂ ನಮೋ
ಅಜೇಯಂ ಅಭೇದ್ಯಂ ಅಮೋಘಂ ನಮೋ
ಅಪಾರಂ ಅಪೂರ್ವಂ ಅನೂಹ್ಯಂ ನಮೋ
ಅನಾದಿಂ ಅನಂತಂ ಅಖಂಡಂ ನಮೋ ||೧೨||

ಪಯಣಿಗ ಕಾವ್ಯಂ ಸುಪದ್ಮಾಪದಂ
ಸುಛಂದಂ ಸುಭಾವಂ ಸುಹಾರಾರ್ಪಣಂ
ಅಕ್ಷರಂ ಕಲಾರೂಪ ದುರ್ಗಾಪದಂ
ಅನಾದಿಂ ಅನಂತಂ ಮಹಾಮಾಯೆಯುಂ ||೧೩||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು