Posts

ಶನಿಯಲ್ಲೊಂದು ಮ್ಯಾಜಿಕ್ ವಾತಾವರಣ

Image
ಭೂಮ್ಯೇತರ ಆಕಾಶಕಾಯಗಳು ಸೇರಿದಂತೆ ಬಾಹ್ಯ ಜಗತ್ತಿನ ಬಗ್ಗೆ ಒಂದೇ ವಿಚಾರಗಳು ಬಯಲಾಗುತ್ತಾ ಹೋದಂತೆ ಅವುಗಳ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿ , ನಾವು ತಿಳಿದುಕೊಂಡದ್ದರ ಆಚೆಗೆ ಏನಿದೆ ಎಂಬುದನ್ನು ಹಣಕಿ ನೋಡಬೇಕೆನಿಸುತ್ತದೆ . ವೈಜ್ಞಾನಿಕ ಜಗತ್ತಿಗೆ ಈಗಲೂ ಅತ್ಯಂತ ಸೋಜಿಗವಾಗಿ ಕಾಡುತ್ತಿರುವುದು ಬ್ರಹ್ಮಾಂಡ ಪರಮಾಣುಗಳು ಅಥವಾ ಕಾಸ್ಮಿಕ್ ಪಾರ್ಟಿಕಲ್‌ಗಳು . ನಮ್ಮ ಬ್ರಹ್ಮಾಂಡದ ಸೃಷ್ಟಿಗೆ ಈ ಕಾಸ್ಮಿಕ್ ಪಾರ್ಟಿಕಲ್‌ಳು ನೇರ ಕಾರಣ ಎಂಬ ಎಂಬ ನಂಬಿಕೆ ವೈಜ್ಞಾನಿಕ ವಲಯದಲ್ಲಿರುವ ಕಾರಣ ಇವುಗಳ ಬಗ್ಗೆ ಕುತೂಹಲ ಮತ್ತು ತತ್ಪರಿಣಾಮ ಸಂಶೋಧನೆಗಳು ಹೆಚ್ಚುತ್ತಲೇ ಇವೆ . ಇದೀಗ ವೈಜ್ಞಾನಿಕ ವಲಯವೇ ಖುಷಿಯಿಂದ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವಂಥ ವಿಚಾರವೊಂದು ತೆರೆದುಕೊಂಡಿದೆ . ಅದು ಶನಿಗ್ರಹದಲ್ಲಿ ! ಶನಿಯ ಬಗ್ಗೆ ಅಧ್ಯಯನ ಮಾಡುತ್ತಿರುವ ಕ್ಯಾಸಿನಿ ಗಗನನೌಕೆ ಅಲ್ಲಿನ ಕೌತುಕವೊಂದನ್ನು ಮುಂದಿಟ್ಟು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿದೆ . ಶನಿಯ ವಾತಾವರಣದಲ್ಲಿ ತೀರಾ ಅಪರೂಪಕ್ಕೆಂಬಂತೆ ಕಾಣಿಸಿಕೊಂಡ ತೀವ್ರ ಸ್ವರೂಪದ ಸೌರಸುನಾಮಿ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಅವಕಾಶವನ್ನು ಕೊಟ್ಟಿದೆ .

ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ

Image
ಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ.... ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!

ಇಂಥ ಸಂಶೋಧನೆಗಳು ಬೇಕಾ?

Image
ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.

ಗ್ರಹಗಳು ಮಾರಾಟಕ್ಕಿವೆ...!!

Image
ಒಬ್ಬ ತಾಯಿಯ ಗರ್ಭ ಶಿಶುವಿನ ಬೆಳವಣಿಗೆ ಮತ್ತು ಜನ್ಮಕ್ಕೆ ಯೋಗ್ಯವಾಗಿದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಆ ಗರ್ಭದಲ್ಲಿ ಜೀವ ಚಿಗುರಬೇಕು. ಅಂತೆಯೇ ಗ್ರಹಗಳು. ಓಹ್, ಒಂದು ಪುಟ್ಟ ಭೂಮಿ ನಮ್ಮಲ್ಲಿರುತ್ತಿದ್ದರೆ, ಚಿಕ್ಕದಾದರೂ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಹಾಯಾಗಿರುತ್ತಿದ್ದೆವು ಎಂದು ಹಲುಬುತ್ತಾ ಕೂರುವವರಿಗೆ ಬರವಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಮೂರಡಿ ಆರಡಿ ಜಾಗ ಸಿಗುವುದೇ ಕಷ್ಟ, ಇಂತಿರುವಾಗ ಮನೆ ಕಟ್ಟಲು ಬೇಕಾದಷ್ಟು ಜಾಗ ಎಲ್ಲಿ ಸಿಕ್ಕೀತು? ಹಳ್ಳಿಗಳಲ್ಲಿ ಕೂಡಾ ಈಗ ಪಟ್ಟಣದ ಸ್ಥಿತಿ ಬಂದುಬಿಟ್ಟಿದೆ... ಒಂದು ಜಾಗ ಖರೀದಿಸುವುದಕ್ಕೆ ಹೊರಟರೆ ಎಷ್ಟೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ! ಆದರೆ ಜಾಗ ಖರೀದಿ ವಿಚಾರ ಈಗ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆಯೇನೋ ಎಂಬ ಶಂಕೆ ಶುರುವಾಗಿದೆ. ಯಾಕೆ ಗೊತ್ತಾ? ನಮ್ಮ ಬ್ರಹ್ಮಾಂಡದಲ್ಲಿ ಇರುವಂಥ ಹಲವಾರು ವಾಸಯೋಗ್ಯ ಗ್ರಹಗಳಲ್ಲಿನ ಜಾಗ ಈಗ ಮಾರಾಟಕ್ಕಿದೆ. ಅಚ್ಚರಿ ಪಡಬೇಡಿ, ಶೀಘ್ರದಲ್ಲಿಯೇ ನಮ್ಮ ಜನರು ಭೂಮಿಯನ್ನು ಬಿಟ್ಟು ಮತ್ತಾವುದೋ ಆಕಾಶಕಾಯಗಳಿಗೆ  ಗುಳೇ ಹೊರಡುವುದು ಖರೇ! ಮುಂದೊಂದು ದಿನ ಸೂಪರ್ ಭೂಮಿಯಲ್ಲಿ ಜಾಗ ಹೊಂದಿರುವ, ಭವ್ಯ ಬಂಗಲೆ ಕಟ್ಟಿರುವ ಹುಡುಗನಿಗೆ ಮಾತ್ರ ಹುಡುಗಿ ಕೊಡುವುದು ಎಂಬ ಷರತ್ತನ್ನು ಹೆಣ್ಣು ಹೆತ್ತವರು ಹೇರಿದರೆ ಗಂಡು ಹೆತ್ತವರು ಸೂಪರ್ ಭೂಮಿಯಲ್ಲಿ ಜಾಗ ಖರೀದಿಸುವುದಕ್ಕೆ ಪಡಿಪಾಟಲು ಪಡುವಂಥ ಪರಿಸ್ಥಿತಿ ಬಂದೀತು!

ಸೋಲಾರನ್ನು ಪೇಂಟ್ ಮಾಡಿ

Image
ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು.   ಬೇಸಗೆ ಬಂತೆಂದ್ರೆ ಸಾಕು, ಪವರ್ ಕಟ್, ಲೋಡ್ ಶೆಡ್ಡಿಂಗ್, ಲೋ ವೋಲ್ಟೇಜ್... ಶಿವನಸಮುದ್ರದಲ್ಲಿ ನೀರಿಲ್ಲ, ವಿದ್ಯುತ್ ಖರೀದಿ ಸಾಮರ್ಥ್ಯ ನಮ್ಮಲ್ಲಿಲ್ಲ. ಕರೆಂಟ್ ಇಲ್ದೇ ಇರೋದನ್ನು ಸ್ವಲ್ಪ ಅಭ್ಯಾಸ ಮಾಡ್ಕೊಳ್ಳಿ... ಅನ್ನೋ ಧಾಟಿಯನ್ನೇ ಪ್ರತಿಧ್ವನಿಸುವಂತೆ ಹಣಕುತ್ತಾ ಕಣ್ಣಾಮುಚ್ಚಾಲೆಯಾಡುವ ಕರೆಂಟ್‌ಗೆ ಅದೆಷ್ಟು ಶಾಪ ಹಾಕ್ತೀವೋ ಗೊತ್ತಿಲ್ಲ. ಅಟ್‌ಲೀಸ್ಟ್ ಬೆಳಕಾದ್ರೂ ಇರ್‌ಲಿ ಅಂತ ಸೋಲಾರ್ ಹಾಕ್ಸೋಣ ಅಂದ್ಕೊಂಡ್ರೆ ಅದ್ರಲ್ಲಿ ಬರೋ ಬೆಳಕು ಸಾಲೇದೇ ಇಲ್ಲ. ಇನ್ನು ಮಿಕ್ಸಿ, ಗ್ರೈಂಡರ್, ಟಿವಿ, ಫ್ಯಾನು... ಎಲ್ಲ ಕೆಲ್ಸ ಮಾಡಬೇಕಾದರೆ ಮನೆ ಛಾವಣಿಯುದ್ದಕ್ಕೂ ಸೋಲಾರ್ ಪೆನಲ್‌ಗಳನ್ನು ಹಾಕಿಸಬೇಕಾಗಿ ಬರುತ್ತೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯೋದೇ ಇಲ್ಲ ಅಂತ ಚಿಂತೆ! ಆದರೆ ವಿಜ್ಞಾನಿಗಳು ಈ ಚಿಂತೆಗೆ ಪರಿಹಾರ ಕಂಡುಕೊಂಡುಳ್ಳುವ ಮಹತ್ತರ ಸಂಶೋಧನೆ ಮಾಡಿದ್ದಾರೆ.

ಸ್ಪೇಸ್ ವಾರ್

Image
ಇದು ಈ ಬಾರಿ ವಿಜಯ Nextನಲ್ಲಿ ಪ್ರಕಟವಾದ ಕವರ್ ಸ್ಟೋರಿ. ಅದನ್ನು ಯಥಾವತ್ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ ಮಹಾಕದನಕ್ಕೊಂದು ರಣರಂಗ ಕೈವಾರ ಗೋಪೀನಾಥ್ ೨೦೦೭ರ ಜನವರಿ ೧೧ರಂದು ಒಂದು ಆತಂಕಕಾರಿ ಘಟನೆ ಸಂಭವಿಸಿತು. ದಕ್ಷಿಣ ಚೀನಾದ ಅಂತರಿಕ್ಷದ ಮೇಲೆ ಒಂದು ಕೃತಕ ಉಪಗ್ರಹ ತನ್ನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಆ ಕೃತಕ ಉಪಗ್ರಹ ಚೂರುಚೂರಾಗಿ ಒಡೆದು ಭಗ್ನಾವಶೇಷಗಳ ಮೋಡವನ್ನೇ ಸೃಷ್ಟಿಸಿತು. ಏಳು ವರುಷಗಳಿಂದ ನಿರಂತರವಾಗಿ ಭೂಕೇಂದ್ರಗಳಿಗೆ ತನಗೆ ಒಪ್ಪಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಆ ಆರು ಅಡಿ ಉದ್ದದ ಕೃತಕ ಉಪಗ್ರಹವನ್ನು ನಾಶ ಮಾಡಿದ್ದು ಯಾರು ಎಂಬ ವಿಷಯ ತಿಳಿದರೆ ಅಚ್ಚರಿ ಮೂಡುತ್ತದೆ. ಆ ಕೃತಕ ಉಪಗ್ರಹವನ್ನು ಸೃಷ್ಟಿಸಿದ ಚೀನಾ ದೇಶವೇ ಅದನ್ನು ನಾಶ ಮಾಡಿತು ಎಂದರೆ ಆಶ್ಚರ್ಯವಾಗುತ್ತದೆ. ಸಿಚೂನ್ ರಾಜ್ಯದ ಕ್ಸಿಚಾಂಗ್ ಪ್ರದೇಶದ ಹತ್ತಿರವಿರುವ ಸೋಂಗ್ಲಿನ್ ಪರೀಕ್ಷಾ ಕೇಂದ್ರದಿಂದ ಅಂತರಿಕ್ಷದ ಕಡೆ ಉಡಾಯಿಸಲಾದ ಬಹು-ಹಂತಗಳ ಕ್ಷಿಪಣಿಯೊಂದು ಗಂಟೆಗೆ ೧೮೦೦೦ ಮೈಲಿಗಳ ವೇಗದಲ್ಲಿ ಪ್ರಯಾಣಿಸುತ್ತಾ ಆ ಕೃತಕ ಉಪಗ್ರಹದ ಜಾಡು ಹಿಡಿದು ಅದನ್ನು ನಾಶಮಾಡಿತು.

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

Image
ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.